ಸುದ್ದಿಗಳು

ನಭಾ ನಟೇಶ್ ಅಭಿನಯದ ‘ನನ್ನು ದೋಚುಕುಂದುವಟೆ’ ಟ್ರೇಲರ್ ಬಿಡುಗಡೆ..

ಟೈಗರ್ ಶ್ರಾಫ್ ನಿಂದ ನಿನ್ನೆ ಟ್ರೇಲರ್ ಬಿಡುಗಡೆ..

ಹೈದರಾಬಾದ್,ಸೆ.11: ‘ವಜ್ರಕಾಯ’ ಚಿತ್ರದಲ್ಲಿ ಬಾಯ್ ಬಡಕಿ ಆಗಿ ಮಿಂಚಿದ್ದ ನಭಾ ನಟೇಶ್ ನಮತರ ‘ಲೀ’, ‘ಸಾಹೇಬ’,ಚಿತ್ರದಲ್ಲಿ ನಟಿಸಿದರೂ ಸ್ಟಾರ್ ಅಷ್ಟೇನೂ ಬದಲಾಗಿಲ್ಲ. ಹಾಗಾಗಿ ಆಕೆ ಟಾಲಿವುಡ್ ಗೆ ಹಾರಿದಳು.. ಅಧುಗೋ ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದ ಈಕೆಗೆ ಈಗ ಟಾಲಿವುಡ್ ನಲ್ಲಿ ಸಾಲು ಸಾಲು ಅವಕಾಶಗಳು ಬರುತ್ತಿವೆ.ನಭಾ ನಟೇಶ್ ನಟಿಸಿರುವ ‘ನನ್ನು ದೋಚುಕುಂದುವಟೆ’ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಸುಧೀರ್ ಬಾಬು ಈ ಸಿನಿಮಾದಲ್ಲಿ ನಾಯಕರಾಗಿ ನಟಿಸಿದ್ದು, ತಮ್ಮದೇ ಸ್ವಂತ ಸುಧೀರ್​​ ಬಾಬು ಪ್ರೊಡಕ್ಷನ್ ಬ್ಯಾನರ್ ಅಡಿ ಸಿನಿಮಾ ನಿರ್ಮಿಸಿದ್ದಾರೆ.

Image result for naba natesh and sudheer babu

ಸುಮಾರು 9 ಲಕ್ಷ ವೀಕ್ಷಣೆ

ಬಾಲಿವುಡ್ ನಟ ಟೈಗರ್ ಶ್ರಾಫ್ ನಿನ್ನೆ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಕಾಮಿಡಿ, ರೊಮ್ಯಾನ್ಸ್, ಎಮೋಶನ್ ಸೇರಿ ಎಲ್ಲಾ ರೀತಿಯ ಅಂಶಗಳು ಈ ಟ್ರೇಲರ್ ​​ನಲ್ಲಿ ಕಾಣಬಹುದು. ಸುಧೀರ್ ಬಾಬು ಈ ಸಿನಿಮಾದಲ್ಲಿ ಸಾಫ್ಟ್​​ವೇರ್ ಎಂಜಿನಿಯರ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಭಾ ಪಕ್ಕಾ ತರ್ಲೆ ಮಾಡುವ , ಕಾಲೆಳೆಯುವ, ನಗಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1 ದಿನದಲ್ಲೇ ಸುಮಾರು 9 ಲಕ್ಷಕ್ಕೂ ಹೆಚ್ಚು ಮಂದಿ ಟ್ರೇಲರ್ ವೀಕ್ಷಿಸಿದ್ದಾರೆ.

ಆರ್​.ಎಸ್. ನಾಯ್ಡು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸೆಪ್ಟೆಂಬರ್ 21 ರಂದು ಸಿನಿಮಾ ಬಿಡುಗಡೆಯಾಗಲಿದೆ. ನಭಾ  ನಟೇಶ್​​​ ನಟನೆಯನ್ನು ತೆಲುಗು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಕಾದು ನೋಡಬೇಕು.

Tags

Related Articles