ಸುದ್ದಿಗಳು

ಗೋವಾದಲ್ಲಿ ಜಾಲಿ ಮೂಡ್ ನಲ್ಲಿರುವ ಪಟಾಕ ಪಾರ್ವತಿ

ಕನ್ನಡ ಸೇರಿದಂತೆ ಪರಭಾಷೆಯಲ್ಲೂ ಬ್ಯೂಸಿಯಾದ ನಟಿ

ಬೆಂಗಳೂರು.ಮಾ.15: ‘ವಜ್ರಕಾಯ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿಯರಲ್ಲಿ ನಭಾ ನಟೇಶ್ ಸಹ ಒಬ್ಬರು. ಈ ಚಿತ್ರದ ಬಳಿಕ ಅವರು ‘ಲೀ’ ಹಾಗೂ ಸಾಹೇಬ’ ಚಿತ್ರದ ಸಾಂಗ್ ಒಂದರಲ್ಲಿ ಕಾಣಿಸಿಕೊಂಡರು. ಈಗ ಅವರು ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ.

ಸದ್ಯ ನಭಾ ಗೋವಾದಲ್ಲಿ ಜಾಲಿಟ್ರಿಪ್ ಮಾಡುತ್ತಿದ್ದು, ಅಲ್ಲಿನ ಸ್ಥಳಿಯ ಹೊಟೇಲ್ ನಲ್ಲಿದ್ದಾರೆ. ಹಾಗೆಯೇ ಅಲ್ಲಿನ ಕೆಲವು ಫೊಟೋಗಳನ್ನು ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಹಾಗಂತಾ ಅವರು ಹೋಗಿರುವುದು ಸುಮ್ಮನೇ ಅಲ್ಲಾ, ಸಿನಿಮಾಕ್ಕಾಗಿ.. ಹೌದು, ಅವರು ಹೋಗಿರುವುದು ಚಿತ್ರೀಕರಣಕ್ಕಾಗಿ. ಹಾಗಂತಾ ಅವರೇ ಹೇಳಿಕೊಂಡಿದ್ದಾರೆ.

 

View this post on Instagram

 

Shoots like holidays 😍😍😍 . . . . #nabhanatesh #nabha#ismartshankar

A post shared by Nabha Natesh (@nabhanatesh) on

ಸದ್ಯ ನಭಾ ತೆಲುಗಿನಲ್ಲಿ ‘ಇಸ್ಮಾರ್ಟ್ ಶಂಕರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಈ ಚಿತ್ರದ ಚಿತ್ರೀಕರಣಕ್ಕಾಗಿ ಅವರು ಗೋವಾಗೆ ತೆರಳಿದ್ದಾರೆ. ‘ವಿಚಿತ್ರ ಎಂದರೆ ನನಗೆ ಇದು ಶೂಟಿಂಗ್ ಎಂಬ ಭಾವನೆ ಬರುತ್ತಿಲ್ಲ. ಸಮ್ಮರ್ ರಜೆ ಕಳೆಯುತ್ತಿದ್ದೇನೆ ಅನ್ನಿಸುತ್ತಿದೆ. ಗೋವಾ ನನ್ನ ಫೇವರಿಟ್ ಜಾಗಗಳಲ್ಲಿ ಒಂದು. ಮೊದಲೆಲ್ಲಾ ಬೇಸಿಗೆ ಕಾಲ ಬಂದರೆ ಸಾಕು ಇಲ್ಲಿಗೆ ಬರುತ್ತಿದ್ದೆ. ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡುತ್ತಾ ಕಳೆಯುತ್ತಿದ್ದೇನೆ’ ಎನ್ನುತ್ತಾರೆ ಅವರು.

ಇನ್ನು ಶಿವಣ್ಣನೊಂದಿಗೆ ನಟಿಸಿದ ‘ವಜ್ರಕಾಯ’ ನ ಚಿತ್ರ ಅವರ ಕರಿಯರ್​ ಗೆ ಪ್ಲಸ್ ಪಾಯಿಂಟ್ ಆಗಿದೆ. ‘ನಾನು ಮಾಡೆಲಿಂಗ್ ಹಾಗೂ ರಂಗಭೂಮಿಯಲ್ಲಿ ಕೆಲಸ ಮಾಡಿದ್ದರಿಂದ ನಟನೆಯಲ್ಲಿ ಹೆಚ್ಚು ಪಳಗಿದೆ. ಚಿತ್ರರಂಗಕ್ಕೆ ಕಾಲಿಡಲು ನಾನು ಆಡಿಷನ್ ನಲ್ಲಿ ಪಾಲ್ಗೊಳ್ಳುತ್ತಿದ್ದೆ. ‘ವಜ್ರಕಾಯ’ ನನಗೆ ಒಳ್ಳೆಯ ಹೆಸರು ತಂದುಕೊಟ್ಟಿತು’ ಎಂಬುದು ಅವರ ಮಾತು.

ಇನ್ನು ನಭಾ ಅವರನ್ನು ಸುಂಟರಗಾಳಿ ರಕ್ಷಿತಾ ಆಗಲಿದ್ದರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಏಕೆಂದರೆ, ಕನ್ನಡ ಮತ್ತು ತೆಲುಗಿನಲ್ಲಿ ರಕ್ಷಿತಾ ಅವರನ್ನು ಬೆಳ್ಳಿ ತೆರೆಗೆ ಪರಿಚಯಿಸಿದ್ದ ನಿರ್ದೇಶಕ ಪುರಿ ಜಗನ್ನಾಥ್ ಅವರ ಚಿತ್ರದಲ್ಲೂ ನಟಿಸುತ್ತಿದ್ದಾರೆ.

“ಲೂಯಿಸ್ ವಿಟಾನ್” ಗೆ ಬ್ರಾಂಡ್ ಅಂಬಾಸಿಡರ್ ಆದ ಸಮಂತಾ!!

#nabhanatesh, #busyinfilms, #balkaninews #kannadasuddigalu, #vajrakaya

Tags