ಸುದ್ದಿಗಳು

ಅವಳ ಪ್ರೀತಿಗಾಗಿ ಹುಚ್ಚು ಪ್ರಯತ್ನಗಳನ್ನು ಮಾಡಿದ್ದೆ-ನಾಗ ಚೈತನ್ಯ!!

ಹೈದರಾಬಾದ್, ಆ.03: ಸಮಂತಾ ಅಕ್ಕಿನೇನಿ ಮತ್ತು ನಾಗಾ ಚೈತನ್ಯ ಇತ್ತೀಚೆಗೆ ಸುಶಾಂತ್ ಮತ್ತು ರುಹಾನಿ ಶರ್ಮಾ ಅಭಿನಯದ ‘ಚಿ||ಲ||ಸೌ’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಳೆದ ವರ್ಷದ ದಾಂಪತ್ಯ ಜೀವನಕ್ಕೆ ಕಾಳಿಟ್ಟಿರುವ ನವ ಜೋಡಿಗಳು, ತಮ್ಮ ಜೀವನದ ಪ್ರೇಮಾನುಭವಗಳನ್ನು ಹಂಚಿಕೊಂಡಿದ್ದಾರೆ.

ಪ್ರೀತಿ-ಪ್ರಸ್ತಾಪ

ರಾಹುಲ್ ರವೀಂದ್ರನ್ ನಿರ್ದೇಶನದಲ್ಲಿ ಈ ಪ್ರಚಾರ ಸಮಾರಂಭವನ್ನು ‘ಚೈ-ಸ್ಯಾಮ್’ ಎನ್ನುವ ಶೀರ್ಷಿಕೆಯಲ್ಲಿ ಆಯೋಜಿಸಲಾಗಿತ್ತು. ಈ ರಾಹುಲ್ ಚೈತನ್ಯರವರನ್ನು ತಮ್ಮ ಪ್ರೀತಿಯನ್ನು ಸಮಂತಾರವರಿಗೆ ಹೇಗೆ ಪ್ರಸ್ತಾಪ ಮಾಡಲಾಯಿತು ಎಂದು ಕೇಳಿದ್ದಾರೆ.

ಅದ್ಬುತವಾದ ಪಯಣ 

ಹತ್ತು ವರ್ಷಗಳ ಹಿಂದೆ ‘ಯೇ ಮಾಯಾ ಚೇಸಾವೆ’ ಚಿತ್ರದ ಸೆಟ್ ನಲ್ಲಿ, ಮೊದಲ ಬಾರಿಗೆ ಅವರನ್ನು ನೋಡಿ, ಅವಳ ಅಂದಕ್ಕೆ ಮಾರುಹೋಗಿದ್ದೆ. ನಂತರ ಅವರ ಪರಿಚಿತವಾಗಿ, ಪರಿಚಯ ಪ್ರೇಮವಾಗಿ, ಈಗ ನನ್ನ ಬಾಳ ಸಂಗಾತಿಯಾಗಿ ನನ್ನೊಟ್ಟಿಗೆ ಅದ್ಬುತವಾದ ಪ್ರಯಾಣ ಮಾಡುತ್ತಿದ್ದಾಳೆ. ಎಂದು ಚೈತನ್ಯ ಖುಷಿಯಿಂದ ಹೇಳಿಕೊಂಡಿದ್ದಾರೆ.

ಹುಚ್ಚು ಪ್ರಯತ್ನಗಳು

ಕಳೆದ ಏಳು ವರ್ಷಗಳಿಂದ, ನಾನು ಸಮಂತಾವನ್ನು ಮೆಚ್ಚಿಸಲು, ಹುಚ್ಚು ರೀತಿಯ ಪ್ರಯತ್ನಗಳನ್ನು ಮಾಡಿದ್ದೇನೆ. ಅವಳನ್ನು ಮದುವೆಯಾಗುವುದನ್ನು ಬಿಟ್ಟು ನನಗೆ ಬೇರೆ ಯಾವುದೂ ಮುಖ್ಯವಾಗಿರಲಿಲ್ಲ. ಕೊನೆಗೂ ಅವಳ ಒಪ್ಪಿಗೆಯಿಂದ ಇಂದು ನಿಮ್ಮ ಮುಂದೆ ಜೊತೆಯಾಗಿದ್ದೇವೆ. ಎಂದು ಹೇಳಿಕೊಂಡಿದ್ದಾರೆ. ತಮ್ಮ ಪ್ರೇಮಕತೆಯನ್ನು ವಿವರಿಸಿದ ನಂತರ ಚಿತ್ರದ ಕುರಿತಾಗಿ ಪ್ರಚಾರ ಮಾಡಿದ್ದಾರೆ ಎನ್ನಲಾಗಿದೆ.

Tags