ಸುದ್ದಿಗಳು

ಕನ್ನಡ ಸಿನಿಮಾದ ಖ್ಯಾತ ವಿತರಕ ನಾಗ ಪ್ರಸಾದ್ ಇನ್ನಿಲ್ಲ

ಬೆಂಗಳೂರು,ಜ.7: ಚಂದನವನದಲ್ಲಿ ಹಲವಾರು ವಿತರಣೆ ಮಾಡಿದ ನಾಗ ಪ್ರಸಾದ್ ಜ್ವರ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿ ಆಗದೇ ನಿನ್ನೆ ರಾತ್ರಿ ಆಸ್ವತ್ರೆಯಲ್ಲಿ  ಪ್ರಸಾದ್ ಕೊನೆಯುಸಿರೆಳೆದಿದ್ದಾರೆ. ಇವರು ಕನ್ನಡ ಸಿನಿಮಾದ ಖ್ಯಾತ ವಿತರಕ ಹಾಗೂ ಫೈನಾನ್ಸಿಯರ್ ಕೂಡ ಹೌದು..

 

ಚಿಂಗಾರಿ , ಗಾಡ್​ ಫಾದರ್ ,ಭೀಮ ತೀರದಲ್ಲಿ ಹಾಗೂ ಚಂದ್ರ ಚಿತ್ರವನ್ನ ವಿತರಣೆ ಮಾಡಿದ್ದರು. ಪ್ರಸಾದ್ ಅವ್ರ ಅಂತ್ಯಕ್ರಿಯೆ ಇಂದು ಸಂಜೆ ನಡೆಯಲಿದ್ದು  ವಿಜಯನಗರದ ಪ್ರಸಾದ್ ನಿವಾಸದಲ್ಲಿ ಅಂತಿಮ ದರ್ಶನಕ್ಕಾಗಿ ಸಿದ್ದತೆ ಮಾಡಲಾಗಿದೆ

 

Tags

Related Articles