ಸುದ್ದಿಗಳು

ಬಾಲಿವುಡ್ ಗೆ ಜಿಗಿದ ವಿ.ನಾಗೇಂದ್ರ ಪ್ರಸಾದ್!!

ಕೆಜಿಎಫ್ ಗೆ ಬರೆದ ಹಾಡಿಗೆ ಸಿಕ್ಕ ರೆಸ್ಪಾನ್ಸ್!!

ಬೆಂಗಳೂರು,ಡಿ.6: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಚಿತ್ರದ  ಹವಾ ಅಷ್ಟಿಷ್ಟಲ್ಲ.. ಇಡೀ ಭಾರತದಾದ್ಯಂತ ‘ಕೆಜಿಎಫ್’ ಹವಾ ಎದ್ದಿದೆ.. ಈಗ ಯಶ್ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ.. ನಿನ್ನೆಯಷ್ಟೇ ‘ಕೆಜಿಎಫ್’ ಚಿತ್ರ 2 ನೇ ಟ್ರೇಲರ್ ಪಂಚಭಾಷೆಗಳಲ್ಲಿ ಬಿಡುಗಡೆಯಾಗಿತ್ತು.. ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ, ಕೆಜಿಎಫ್ ಹಾಡು ಹಾಗೂ ಟ್ರೇಲರ್ .. ಇನ್ನು ಈ ಚಿತ್ರದ ಗೀತರಚನೆಕಾರ ವಿ ನಾಗೇಂದ್ರ ಪ್ರಸಾದ್ ಗೂ ಬೇಡಿಕೆ ಹೆಚ್ಚಿದೆ.. ಈ ಮೂಲಕ ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ…

Related image

ಬಾಲಿವುಡ್ ಗೆ ಪಾದಾರ್ಪಣೆ

‘ಹಿಂದಿ ಆವೃತ್ತಿಯ ಚಿತ್ರದಲ್ಲಿನ ಹಾಡುಗಳನ್ನು ವಿ ನಾಗೇಂದ್ರ ಪ್ರಸಾದ್ ಬರೆಯುವ ಮೂಲಕ ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆಯಂತೆ… ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಮುಂಬೈನಲ್ಲಿ ಯಶ್ ಕಥೆ ಹುಟ್ಟಿಕೊಳ್ಳುತ್ತದೆ.. ಹಾಗಾಗಿ ಕನ್ನಡ ಆವೃತ್ತಿಗೆ ಹಾಡು ಬರೆಯುವಂತೆ ಹೇಳಿದರಂತೆ. ಮುಂಬೈ ನಲ್ಲಿ ಕಥೆ ಶುರುವಾಗುವ ಕಾರಣ ಮೊದಲಿಗೆ ಹಿಂದಿಯಲ್ಲಿ ಶುರುವಾದರೆ ಉತ್ತಮ ಅಂತ ನಾಗೇಂದ್ರ ಪ್ರಸಾದ್ ಸಲಾಂ ರಾಖಿ ಭಾಯ್ ಹಾಡು ಬರೆದರಂತೆ.. ಇನ್ನು ಈ ಹಾಡಿಗೆ ಕೆಲವರು ಬೆಂಬಲ ವ್ಯಕ್ತ ಪಡಿಸಿದರೆ, ಸಿಕ್ಕಾಪಟ್ಟೆ ಜನರು ಈ ಹಾಡಿಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ…

 

Tags