ಸುದ್ದಿಗಳು

ಇದು ಅಪ್ಪನ ಕನಸಿನ ಕುಚ್ಚಿಕೂ : ನಕ್ಷತ್ರಾ

ದಿವಂಗತ ಡಿ. ರಾಜೇಂದ್ರ ಬಾಬು ಅವರ ಕೊನೆಯ ಸಿನಿಮಾ “ಕುಚ್ಚಿಕೂ ಕುಚ್ಚಿಕು” ಆಗಿದ್ದು, ಚಿತ್ರದಲ್ಲಿ ಜೆಕೆ, ಪ್ರವೀಣ್ ಕುಮಾರ್, ನಕ್ಷತ್ರಾ , ಭುವನ್ ಗೌಡ, ಮನೋಜ್, ಸುಮಿತ್ರಾ ದೇವಿ, ರಮೇಶ್ ಭಟ್ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ.

ಈ ಚಿತ್ರವು ಪೂರ್ಣವು ಪೂರ್ಣಗೊಂಡು ಫಸ್ಟ್ ಕಾಫಿ ನೋಡುವ ಮುನ್ನವೇ ನಿರ್ದೇಶಕ ಡಿ. ಬಾಬು ಅವರು ನಿಧನರಾದರು. ಇದೀಗ ಈ ಚಿತ್ರವು ಪೂರ್ಣಗೊಂಡು ನಾಳೆಯೇ ಬಿಡುಗಡೆಯಾಗುತ್ತಿದೆ. ಆದರೆ ತನ್ನ ನಿರ್ದೇಶನದ ಸಿನಿಮಾದಲ್ಲಿ ಮಗಳನ್ನು ತೆರೆಯ ಮೇಲೆ ನೋಡಬೇಕೆಂಬ ಕನಸನ್ನು ಬಾಬು ಅವರು ಕಂಡಿದ್ದರು. ತಮ್ಮ ಮಗಳ ನಟನೆಯನ್ನು ನೋಡಿ ಬಾಬು ಅವರು ಸೆಟ್ನಲ್ಲಿ ಖುಷಿ ಕೂಡಾ ಪಟ್ಟಿದ್ದರಂತೆ. ಈ ವಿಷಯವನ್ನು ನಕ್ಷತ್ರ (ದೀಪ್ತಿ) ರವರು ಅವರು ನೆನಪಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ನಕ್ಷತ್ರ ಅವರಿಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಇವತ್ತಿನ ಟ್ರೆಂಡ್ ಗೆ ಈ ಸಿನಿಮಾ ಹೊಂದುತ್ತದೆ ಎಂಬ ವಿಶ್ವಾಸ ಕೂಡಾ ನಕ್ಷತ್ರ ಅವರಿಗಿದೆ. ಇದು ಅವರ ಮೊದಲನೇಯ ಚಿತ್ರವಾಗಿದ್ದು, ಈಗಾಗಲೇ ಇವರ ದ್ವಿತಿಯ ಚಿತ್ರ “ಗೋಕುಲ” ತೆರೆ ಕಂಡಾಗಿದೆ.

“ಮೊದಲ ದಿನ ಅಪ್ಪನ ಸಿನಿಮಾದಲ್ಲಿ ನಟಿಸುವಾಗ ತುಂಬಾ ಭಯಪಟ್ಟಿದ್ದೆ.ಆದರೆ ಅಪ್ಪ, ನನ್ನ ನಟನೆಗೆ ಬೆನ್ನು ತಟ್ಟಿದರು. “ನೀನು ಚೆನ್ನಾಗಿ ನಟಿಸುತ್ತಿದ್ದೆ. ನಾನಂದುಕೊಂಡಂತೆ” ಎಂದು ಡಿ. ಬಾಬು ಅವರು ನಕ್ಷತ್ರ ಅವರ ನಟನೆಯ ಕುರಿತಂತೆ ಹೇಳಿದ್ದರಂತೆ. ಹೀಗಾಗಿ ಅಂದಿನಿಂದ ಆತ್ಮವಿಶ್ವಾಸದಿಂದ ನಟಿಸುತ್ತಿದ್ದಾರೆ ನಕ್ಷತ್ರ.

ಇನ್ನು ಚಿತ್ರದಲ್ಲಿ ನಟಿಸಿರುವ ಜೆಕೆ ಹಾಗೂ ಪ್ರವೀಣ್ ಅವರು ಆಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಇದೀಗ ಅವರೂ ಸಹ ತುಂಬಾ ಎತ್ತರಕ್ಕೆ ಬೆಳೆದಿರುವುದು ವಿಶೇಷ. ಮತ್ತು ಈ ಚಿತ್ರವು ನೆಗೆಟಿವ್ ರೀಲ್ ನಲ್ಲಿ ಚಿತ್ರೀತಗೊಂಡಿತ್ತು. ಹೀಗಾಗಿ ನೆಗೆಟಿವ್ ರೀಲ್ ನಲ್ಲಿ ಚಿತ್ರೀತಗೊಂಡ ಕೊನೆಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಮತ್ತೊಂದು ವಿಶೇಷ.

ಹಿಂದೆ ಡಿ. ರಾಜೇಂದ್ರ ಬಾಬು ಅವರು ‘ದಿಗ್ಗಜರು’ ಚಿತ್ರದಲ್ಲಿ ಸ್ನೇಹದ ಮಹತ್ವವನ್ನು ಹೇಳಿದ್ದರು. ಇದೀಗ ಮತ್ತೆ ಸ್ನೇಹದ ಮಹತ್ವವನ್ನು ಸಾರುವ “ಕುಚ್ಚಿಕೂ ಕುಚ್ಚಿಕು” ಟೈಟಲ್ ಇಟ್ಟುಕೊಂಡು ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಹಾಗೂ ಈ ಚಿತ್ರವನ್ನು ನೋಡಿದ ಜಯಣ‍್ಣ-ಬೋಗೇಂದ್ರ ಅವರು ತಾವಾಗಿಯೇ ಖುಷಿಯಿಂದ ಚಿತ್ರದ ವಿತರಣೆ ಮಾಡುತ್ತಿರುವುದು ವಿಶೇಷ.

ಈಗಾಗಲೇ ಚಿತ್ರವು ತನ್ನ ಟ್ರೈಲರ್ ಹಾಗೂ ಹಾಡುಗಳಿಂದ ಗಮನ ಸೆಳೆಯುತ್ತಿದ್ದು, ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಅವರು ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರವನ್ನು ಎನ್.ಕೃಷ್ಣಮೂರ್ತಿ ಅವರು ನಿರ್ಮಾಣ ಮಾಡಿದ್ದು, ಎಮ್.ಯೂ ನಂದಕುಮಾರ್ ಛಾಯಾಗ್ರಹಣ ಕೆಲಸವಿದೆ. ಸ್ನೇಹ, ಕುಟುಂಬ ಮತ್ತು ಪ್ರೀತಿಗೆ ಸಂಬಂಧಿಸಿದ ಕಥೆಯನ್ನು ಒಳಗೊಂಡಿದೆ ಈ ಚಿತ್ರ.

 

@ sunil javali

Tags