ಸುದ್ದಿಗಳು

ಮೀಟೂ ಪ್ರಕರಣದಲ್ಲಿ ಸೋಲನ್ನುಭವಿಸಿದ ನಂತರವೂ ಕೋರ್ಟ್ ಮೆಟ್ಟಿಲೇರಿದ ತನುಶ್ರೀ ದತ್ತಾ

ಬಾಲಿವುಡ್ ನಟ ನಾನಾ ಪಾಟೇಕರ್ ಮೇಲೆ ನಟಿ ತನುಶ್ರೀ ದತ್ತಾ #ಮಿಟೂ ಆರೋಪ ಮಾಡಿದ್ದರು. ನಿಜಕ್ಕೂ ಇದು ಇಡೀ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿತ್ತು. ಈ ವಿಚಾರವಾಗಿ ನಾನಾ ಪಾಟೇಕರ್ ಕೂಡ ತಮ್ಮ ಅಭಿಪ್ರಾಯ ಹಾಗೂ ತನುಶ್ರೀ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವ ಹಂತದಲ್ಲಿದ್ದರು. ಸದ್ಯ ಈ ಆರೋಪ ಇದೀಗ ಸುಳ್ಳಾಗಿದೆ. ಈ ಸಂಬಂಧ ಸರಿಯಾದ ಸಾಕ್ಷಿ ಸಿಕ್ಕದ ಹಿನ್ನೆಲೆ ಪೊಲೀಸರು ಪ್ರಕರಣವನ್ನು ಕೈಬಿಟ್ಟಿದ್ದಾರೆ. ಈ ಮೂಲಕ ಭಾರತದಲ್ಲಿನ ಮೊದಲ #ಮಿಟೂ ಪ್ರಕರಣ ಸೋಲು ಕಂಡಿದೆ.

ಮತ್ತೆ ಕಾನೂನು ಸಮರಕ್ಕೆ ಮುಂದಾದ್ರಾ ತನುಶ್ರೀ

ಹಾರ್ನ್ ಓಕೆ ಪ್ಲೀಸ್ ಸಿನಿಮಾ ಸಮಯದಲ್ಲಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ತನುಶ್ರೀ ಆರೋಪ ಮಾಡಿದ್ದರು. ಆದರೆ ನಾನಾ ಪಾಟೇಕರ್ ಪರ ಯಾವುದೇ ಸಾಕ್ಷಿ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಬಿ ಸಮರಿ ದಾಖಲಿಸಿದ್ದರು. ಆದರೆ ಇದೀಗ ಈ ಸಂಬಂಧ ಮತ್ತೆ ಕೋರ್ಟ್ ಮೆಟ್ಟಿಲೇರಲು ತನುಶ್ರೀ ದತ್ತಾ ಸಿದ್ದತೆ ಮಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ ಸದ್ಯ ಬಾಂಬೆ ಹೈ ಕೋರ್ಟ್ ಮೆಟ್ಟಿಲೇರುವುದಕ್ಕೆ ಸಿದ್ದತೆಗಳು ಕೂಡ ನಡೆದಿವೆ.

ಬಾಂಬೆ ಹೈ ಕೋರ್ಟ್ ಮೆಟ್ಟಿಲೇರಲು ಸಿದ್ದತೆ

ಸದ್ಯ ಈ ಬಗ್ಗೆ ಮಾಧ್ಯಮ ಒಂದಕ್ಕೆ ಹೇಳಿಕೆ ನೀಡಿದ್ದಾರೆ ತನುಶ್ರೀ ಅವರ ವಕೀಲ ನಿತಿನ್ ಸತ್ಪುತೆ. ಪೊಲೀಸರಿಂದ ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಜೊತೆಗೆ ಬಿ ಅಥವಾ ಸಿ ಸಮರಿ ದಾಖಲಿಸಿದರೆ ಅದೇ ಅಂತಿಮಾವಲ್ಲ. ಬಾಂಬೆ ಹೈ ಕೋರ್ಟ್ ನಲ್ಲಿ ನಾವು ರಿಟ್ ಪಿಟಿಷನ್ ಹಾಕುತ್ತೇವೆ ಎಂದು ಹೇಳೀರುವುದು ವರದಿಯಾಗಿವೆ. ತನುಶ್ರೀ ದತ್ತ ಅವರೇ ಬಾಲಿವುಡ್‌ನಲ್ಲಿ ಮೀ ಟೂ ಅಭಿಯಾನದಲ್ಲಿ ಮೊದಲು ಧ್ವನಿ ಎತ್ತಿದ ನಟಿಯಾಗಿದ್ದು, ಆ ನಂತರ ಬಹಳಷ್ಟು ನಟಿಯರು ತಮಗಾದ ಲೈಂಗಿಕ ಕಿರುಕುಳಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಆಗ ಬಾಲಿವುಡ್‌ನ ಹಿರಿಯ ಸ್ಟಾರ್ ನಟರ ಹೆಸರುಗಳು ಕೂಡ ಮೀಟೂ ಪ್ರಕರಣಗಳಲ್ಲಿ ಕೇಳಿಬಂದಿತ್ತು.

Image result for nana patekar

ಸೀಕ್ರೇಟ್ ಆಗಿ ಪ್ರಭಾಸ್ ಧ್ವನಿಯನ್ನು ಭೇಟಿಯಾಗಿದ್ದು ಯಾಕೆ??

#balkaninews #tanushreedutta #nanapatekar #tanushreeduttaandnanapatekar #metoo

 

Tags