ಸುದ್ದಿಗಳು

ಶ್ರೀರೆಡ್ಡಿ ‘ಡರ್ಟಿ ಪಿಕ್ಚರ್’ ವಿರುದ್ದ ಕಿಡಿ ಕಾರಿರುವ ನಾನಿ ಪತ್ನಿ!

RJಯಾಗಿ , ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆರಿಯರ್ ಸ್ಟಾರ್ಟ್ ಮಾಡಿ… ಯಾವ ಬ್ಯಾಕ್ ಗ್ರೌಂಡ್ ಇಲ್ಲದೇ ಇಂಡಸ್ಟ್ರಿಯಲ್ಲಿ ಸಕ್ಸಸ್ ಫುಲ್ ಹೀರೋ ಆಗಿ ಮಿಂಚುತ್ತಿರುವ ನ್ಯಾಚುರಲ್ ಸ್ಟಾರ್ ನಾನಿ… ಅತೀ ಕಡಿಮೆ ಸಮಯದಲ್ಲಿ ತಮ್ಮ ಹಿಟ್ ಸಿನಿಮಾಗಳ ಮೂಲಕ ಟಾಲಿವುಡ್ ಟಾಪ್ ಸ್ಟಾರ್ ಹೀರೋಗಳಿಗೆ ಸರಿಸಮಾನವಾಗಿ ನಿಂತಿರುವ ನಾನಿ ತಮ್ಮ ಸಿನಿ ಕೆರಿಯರ್ ನಲ್ಲಿ ಇಲ್ಲಿಯವರೆಗೂ ಯಾವುದೇ ವಿವಾದಗಳಿಲ್ಲದೇ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿರುವ ಸ್ಟಾರ್ ನಟನಿಗೆ ಇತ್ತೀಚಿಗೆ ಕ್ಯಾಸ್ಟಿಂಗ್ ಕೌಚ್ ವಿಚಾರವಾಗಿ ನಟಿ ಶ್ರೀರೆಡ್ಡಿಯವರಿಂದ ಆರೋಪದ ವಿವಾದಗಳು ಬರುತ್ತಿವೆ.

ನಾನಿಯವರ ಕುರಿತಾಗಿ ಟಾಲಿವುಡ್ ವಿವಾದಾಸ್ಮಕ ನಟಿ ಶ್ರೀರೆಡ್ಡಿ, ನಾನಿ+ಶ್ರೀರೆಡ್ಡಿ=ಡರ್ಟಿ ಪಿಕ್ಚರ್ ಕಮಿಂಗ್ ಸೂನ್ ಎಂದು ಬರೆದುಕೊಂಡು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವುದು ಪ್ರಸ್ತುತ ಸಂಚಲನದ ವಿಷಯ ಎಂದು ತಿಳಿದೇ ಇದೆ. ಇದಕ್ಕೆ ನಾನಿಯವರು ನಾನು ಅತ್ಯವಶ್ಯವಾಗಿ ನಟಿ ಶ್ರೀರೆಡ್ಡಿ ವಿರುದ್ದ ವಾಗ್ವಾದಕ್ಕೆ ಇಳಿಯುದಿಲ್ಲ, ಅವರು ಮಾಡಿರುವ ಕಮೆಂಟ್ ಗಳಿಂದ ನನಗೆ ಮಾನಹಾನಿಯಾಗಿದೆ ನಾನು ಈ ನಿಟ್ಟಿನಲ್ಲಿ ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿಕೊಂಡಿದ್ದರು. ಹಾಗು ಈ ವಿಷಯದ ಕುರಿತಾಗಿ ನನ್ನ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಟ್ವಿಟ್ ಮಾಡಿದ್ದಾರೆ.

ಇದು ಒಂದು ರೀತಿಯಲ್ಲಿ ಕೋಲ್ಡ್ ವಾರ್ ಆಗಿ ಮುಂದುವರೆಯುತ್ತಿದ್ದರೆ, ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ನಾನಿಯವರ ಪತ್ನಿ ಅಂಜನಾ ಯಲವರ್ತಿ , ಕೆಲವರು ತಮ್ಮ ವ್ಯಕ್ತಿಗತ ಜೀವನವನ್ನು ಕೇವಲ ಪಬ್ಲಿಸಿಟಿಗೋಸ್ಕರ ಎಷ್ಟು ಕೆಳ ಮಟ್ಟಕ್ಕೆ ಬೇಕಾದರೂ ಇಳಿಯುತ್ತಿದ್ದಾರೆ ಈ ನಿಟ್ಟಿನಲ್ಲಿ ನನ್ನ ಪತಿಯ ಹೆಸರನ್ನು ಹಾಳು ಮಾಡುವ ಸಂಚು ರೂಪಿಸುತ್ತಿದ್ದಾರೆ, ಆದರೆ ಟಾಲಿವುಡ್ ಇಂಡಸ್ಟ್ರಿಯವರು ಇಂತಹ ಹೇಳಿಕೆಗಳನ್ನು ನಂಬುವುದಿಲ್ಲ ಹಾಗು ಅವರಿಗೆ ತುಂಬಾ ದಯಾಗುಣವಿದೆ ಅದನ್ನು ಪರೀಕ್ಷಿಸುವುದು ಸರಿಯಲ್ಲ ಎಂದು ಖಾರವಾಗಿ ತಮ್ಮ ಹೇಳಿಕೆಗಳನ್ನು ಬರೆದುಕೊಳ್ಳುವುದರ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.

Tags