ಸುದ್ದಿಗಳು

ಹಿರಿಯ ನಿರ್ದೇಶಕ ನಂಜುಂಡೇ ಗೌಡರಿಗೆ ಜನ್ಮದಿನದ ಶುಭಾಶಯಗಳು

ಹಲವಾರು ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ನಂಜುಂಡೇ ಗೌಡರು

ಬೆಂಗಳೂರು.ಮಾ.15: ಇಂದು ಸ್ಯಾಂಡಲ್ ವುಡ್ ನ ಹಿರಿಯ ನಿರ್ದೇಶಕ ನಂಜುಂಡೇ ಗೌಡರ ಜನ್ಮದಿನ. ಇವರು ಈಗಾಗಲೇ ವಿಭಿನ್ನ ಕಥಾಹಂದರಗಳುಳ್ಳ ಸಿನಿಮಾಗಳನ್ನು ನಿರ್ದೇಶನ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ನಂಜುಂಡೇ ಗೌಡರು ಈಗಾಗಲೇ ‘ಅನುರೂಪ’, ‘ಮುತ್ತು ಒಂದು ಮುತ್ತು’, ‘ಪ್ರಾಯ ಪ್ರಾಯ ಪ್ರಾಯ’, ‘ಮಕ್ಕಳೇ ದೇವರು’, ‘ಅಂತರಾಳ’, ‘ಗಾಯತ್ರಿ ಮದುವೆ’, ‘ಸಂಕ್ರಾಂತಿ’, ‘ಅಪೂರ್ವ ಜೋಡಿ’, ‘ವೀರಭದ್ರ’, ‘ನಾನು ನೀನು ಜೋಡಿ’, ‘ನಾನು ಗಾಂಧಿ’ ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

ಇನ್ನು ಇವರು ಕಳೆದ ವರ್ಷ ನಿರ್ದೇಶನ ಮಾಡಿರುವ ‘ಹೆಬ್ಬೆಟ್ ರಾಮಕ್ಕ’ ಚಿತ್ರವು ನೋಡುಗರಿಂದ ಗಮನ ಸೆಳೆದಿದ್ದು, ಯಶಸ್ವಿ 50 ದಿನಗಳನ್ನು ಸಹ ಪೂರೈಸಿತ್ತು. ಇನ್ನು ಚಿತ್ರವು 2017ನೇ ಸಾಲಿನ ಪ್ರತಿಷ್ಟಿತ 65ನೇ ರಾಷ್ಟ್ರೀಯ ಪ್ರಶಸ್ತಿಯ ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿಕೊಂಡಿತ್ತು.

ನಂಜುಂಡೇ ಗೌಡರು ನೂರು ಕಾಲ ಸದಾ ಸಂತೋಷದಿಂದಿರಲಿ ಹಾಗೂ ತಮ್ಮ ವಿಭಿನ್ನ ಬಗೆಯ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೋಡುವ ಮೂಲಕ ಮನರಂಜನೆ ನೀಡಲಿ ಎಂದು ಮತ್ತೊಮ್ಮೆ ಇವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

ನಿನ್ನೊಲುಮೆಯಿಂದಲೇ ಜೋಗುಳ ಹಾಡಿದ ಲವಲವಿಕೆಯ ಕಿನ್ನರಿ…!

#nanjundegowda, #birthday, #balkaninews #kannadasuddigalu, #filmnews

Tags

Related Articles