ಸುದ್ದಿಗಳು

‘ನನ್ನಪ್ರಕಾರ’ ಟ್ರೇಲರ್ ಲಾಂಚ್ ಮಾಡಿದ ದಾಸ!

ಹೊಸಬರು ಚಿತ್ರರಂಗಕ್ಕೆ ಎಂಟ್ರಿ ಕೊಡುವುದು, ಅಲ್ಲಿ ಕಾಲೂರಿ ನಿಲ್ಲುವುದು ಎಂಥಾ ಸಾಹಸ ಎಂಬುದು ಅನುಭವಿಸಿದವರಿಗೆ ಮಾತ್ರವೇ ಗೊತ್ತಿರುವ ಸತ್ಯ. ಕನ್ನಡ ಚಿತ್ರರಂಗ ಎಂದೂ ಮರೆಯದ ಮೇರು ನಟನ ಮಗನಾಗಿದ್ದರೂ ಅಂಥಾ ಕಷ್ಟಗಳಿಗೆ ಎದೆಗೊಟ್ಟು ಸ್ಟಾರ್ ನಟನಾಗಿ ನೆಲೆ ಕಂಡುಕೊಂಡವರು ಚಾಲೆಂಜಿಂಗ್ ಸ್ಟಾರ್ ದರ್ಶನ್.

ಅಂಥಾ ನೆನಪುಗಳನ್ನು ಆಗಾಗ ಮೆಲುಕು ಹಾಕುತ್ತಾ, ಅಂಥಾದ್ದೇ ಹಾದಿಯಲ್ಲಿರೋ ಹೊಸಬರಿಗೆ ಬೆಂಬಲ ನೀಡೋದು ದಾಸನ ದೊಡ್ಡ ಗುಣ. ಅದರನ್ವಯ ಇದೀಗ ‘ನನ್ನಪ್ರಕಾರ’ ಚಿತ್ರತಂಡಕ್ಕೂ ಅವರು ಬೆಂಬಲವಾಗಿ ನಿಂತಿದ್ದಾರೆ. ಕೊಟ್ಟ ಮಾತಿನಂತೆಯೇ ಇದರ ಟ್ರೇಲರ್ ಅನ್ನು ಬಿಡುಗಡೆಗೊಳಿಸಿದ್ದಾರೆ.

ಚೊಕ್ಕವಾದ ಕಾರ್ಯಕ್ರಮವೊಂದರ ಮೂಲಕ ಈ ಟ್ರೇಲರ್ ಲಾಂಚ್ ಮಾಡಿರೋ ದರ್ಶನ್ ಅವರು ಅದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕ್ರಿಯಾಶೀಲತೆಯನ್ನೇ ಬಂಡವಾಳವಾಗಿಸಿಕೊಂಡಿರೋ ಈ ಹೊಸಬರ ತಂಡ ಗೆದ್ದು ನೆಲೆ ಕಂಡುಕೊಳ್ಳಲಿ ಎಂದು ಹಾರೈಸಿದ್ದಾರೆ. ಹಾಗೆ ಲಾಂಚ್ ಆದ ಈ ಟ್ರೇಲರ್ ಹೆಚ್ಚು ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ ಮುನ್ನುಗ್ಗುತ್ತಿದೆ. ವಿಭಿನ್ನ ಜಾಡಿನ ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ, ಗಟ್ಟಿ ಕಥೆ ಹೊಂದಿರೋ ಚಿತ್ರವಾಗಿ ‘ನನ್ನಪ್ರಕಾರ’ವನ್ನು ಪ್ರೇಕ್ಷಕ ವಲಯದಲ್ಲಿ ನೆಲೆಗಾಣಿಸುವಲ್ಲಿಯೂ ಈ ಟ್ರೇಲರ್ ಗೆದ್ದಿದೆ.ಒಟ್ಟಾರೆಯಾಗಿ ಈಗಾಗಲೇ ಸಕಾರಾತ್ಮಕ ಅಭಿಪ್ರಾಯಗಳಿಗೆ ಪಾತ್ರವಾಗಿರೋ ಈ ಚಿತ್ರಕ್ಕೆ ದರ್ಶನ್ ಅವರ ಬೆಂಬಲ ಆನೆ ಬಲ ತಂದುಕೊಟ್ಟಿದೆ. ಅವರು ಅಷ್ಟೊಂದು ಪ್ರೀತಿ ಮತ್ತು ಭರವಸೆಯಿಟ್ಟು ಬಂದು ಟ್ರೇಲರ್ ಲಾಂಚ್ ಮಾಡಿದ್ದಕ್ಕೂ ಸಾರ್ಥಕತೆ ಸಿಗುವಂತೆ ಎಲ್ಲ ದಿಕ್ಕುಗಳಿಂದಲೂ ಒಳ್ಳೆಯ ಅಭಿಪ್ರಾಯಗಳೇ ಕೇಳಿ ಬರುತ್ತಿವೆ.

ಇದರಲ್ಲಿನ ವೇಗವಾದ ನಿರೂಪಣೆ, ಕಥೆ, ಚಿತ್ರವಿಚಿತ್ರ ಪಾತ್ರಗಳು, ಉಸಿರು ಬಿಗಿಹಿಡಿಯುವಂಥಾ ಕ್ಯೂರಿಯಾಸಿಟಿಯ ಸುಳಿವಿನ ಕಾರಣದಿಂದಲೇ ಈ ಟ್ರೇಲರ್ ವ್ಯಾಪಕ ವೀಕ್ಷಣೆ ಪಡೆದುಕೊಳ್ಳುತ್ತಿದೆ. ಈ ಮೂಲಕವೇ ಮತ್ತಷ್ಟು ಪ್ರೇಕ್ಷಕರನ್ನು ಸೆಳೆದುಕೊಂಡಿರೋ ಈ ಚಿತ್ರ ಇದೇ ತಿಂಗಳ 23ರಂದು ಬಿಡುಗಡೆಯಾಗಲಿದೆ.

ಗುರುತೇ ಸಿಗದಷ್ಟು ಬದಲಾದ ‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ರಾಜೇಶ್ವರಿ

#balkaninews #nannaprakarakannadamovie #darshan #nannaprakaramovietrailer #mayuri #kishor #priyamani

Tags