ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಆಧುನಿಕ ಜಗತ್ತಿನ ನೈಜ ಘಟನಾವಳಿಗಳ ಆವರಣ

ಎರಡು ಮಾಫಿಯಾ, ಎರಡು ಪ್ರೇಮ ಕತೆಗಳ ಸಿನಿಮಾ

ಬೆಂಗಳೂರು.ಮಾ.16: ಚಿತ್ರದ ಹೆಸರು ಕೇಳುತ್ತಿದ್ದಂತೆಯೇ ಇದೊಂದು ಪ್ರೇಮಕಥೆಯೊಂದಿಗೆ ಮಾಫಿಯಾದ ಕಥೆಯೂ ಇರಲಿದೆ ಎಂದು ಅನಿಸುತ್ತದೆ. ಆದರೆ, ಅದು ನಿಜಾ ಅದರೊಂದಿಗೆ ಆಧುನಿಕ ಜಗತ್ತಿನ ನೈಜ ಘಟನಾವಳಿಗಳ ದೃಶ್ಯಗಳು ಇಲ್ಲಿವೆ.

ಹೌದು, ‘ನಾನು ನಮ್ಮುಡ್ಗಿ-ಖರ್ಚಿಗೊಂದು ಮಾಫಿಯಾ’ ಇದೊಂದು ಸಂಪೂರ್ಣ ಹೊಸಬರ ತಂಡದ ಸಿನಿಮಾ. ಈ ಹಿಂದೆ ‘ದಿಲ್ದಾರ್’ ಸಿನಿಮಾ ಮಾಡಿದ್ದ ಅಮರ್ ಸಾಳ್ವ ಮತ್ತು ಚಲ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ಮೂಲಕ ನಿರ್ದೇಶಕರು ಯುವಕರು ಮಾನಭಂಗ ಮಾಡಿದ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು, ಅದನ್ನು ಅಂತರ್ಜಾಲದಲ್ಲಿ ಮಾರಾಟಕ್ಕಿಟ್ಟು ವ್ಯಕ್ತಿತ್ವ ಹರಣ ಮಾಡುವುದು. ನಂತರ ಸೈಬರ್ ಕ್ರೈಂ ಅಧ್ಯಯನಗಳು.. ಹೀಗೆ ವಿಭಿನ್ನ ಕಥಾಹಂದರವನ್ನು ಇಲ್ಲಿ ತೋರಿಸಿದ್ದಾರೆ.

ಈ ಚಿತ್ರವು ಫೊರ್ನೊಗ್ರಫಿ, ಸೈಭರ್ ಕ್ರೈಂ, ಗ್ಯಾಂಗ್ ರೇಪ್, ಇಂಟರ್ ನೆಟ್ ಸುತ್ತಮುತ್ತ ನಡೆಯುವ ಕಥೆಯನ್ನು ಒಳಗೊಂಡಿದೆ. ಚಿತ್ರದ ಟೈಟಲ್ ಹೇಳುವಂತೆ ಹುಡುಗ, ಹುಡುಗಿ, ಖರ್ಚಿಗಾಗಿ ನಡೆಯುವಂತಹ ಮಾಫಿಯಾ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ನಟಿಸಿರುವ ಶ್ಯಾಮ ಸುಂದರ್, ಶ್ರದ್ದ ಬೆನಗಿ, ವರ್ಧನ ಸೇರಿದಂತೆ ಅನೇಕರ ಅಭಿನಯ ಗಮನ ಸೆಳೆಯುತ್ತದೆ.

ಮೊಬೈಲ್ ನೆಟ್ ವರ್ಕ್, ಸಿಸಿಟಿವಿಗಳ ಮೂಲಕ ಇಂಥ ಪ್ರಕರಣಗಳನ್ನು ಪತ್ತೆ ಹಚ್ಚುವ ಕಾಲದಲ್ಲಿ ನಗರದಲ್ಲೇ ಒಂದು ಹುಡುಗಿ ಕಾಣೆಯಾಗುತ್ತಾಳೆ. ಅಪಹರಿಸಿದವರು ಎಟಿಎಂನಿಂದ ಹಣ ತೆಗೆದುಕೊಂಡಿರುವ ಮಾಹಿತಿ ಬರುತ್ತದೆ. ಜೊತೆಗೆ ಕಿಡ್ನಾಪ್ ಗೆ ಒಳಗಾದ ಹುಡುಗಿಯ. ಮೊಬೈಲ್ ಆನ್ ಇದೆ. ಹೀಗೆ ಮುಂದೇನಾಗಲಿದೆ ಎಂಬುದನ್ನು ತೆರೆಯ ಮೇಲೆ ನೋಡಿದರೇನೇ ಚಂದ.

ಒಟ್ಟಾರೆ, ಈಗಿನ ಜಗತ್ತಿನ ಕೆಲವು ಮುಖಗಳನ್ನು ಸಹ ಇಲ್ಲಿ ಕಾಣಬಹುದು. ಚಿತ್ರದಲ್ಲಿ ಎರಡು ಮಾಫಿಯಾ, ಎರಡು ಪ್ರೇಮ ಕತೆಗಳ ಈ ಚಿತ್ರ ಕ್ರೈಮ್ ಲೋಕದ ಮತ್ತೊಂದು ಮುಖ ನೋಡವವರು ಈ ಸಿನಿಮಾ ನೋಡಿ ಎಂಜಾಯ್ ಮಾಡಬಹುದು.

ಚಿತ್ರರಂಗದಲ್ಲಿನ ತನ್ನ 14 ವರ್ಷದ ಪಯಣವನ್ನು ನೆನೆದ ಸ್ವೀಟಿ ಶೆಟ್ಟಿ

#nanunamhudgi, #review, #balkaninews #filmnews, #kannadasuddigalu

Tags