ಸುದ್ದಿಗಳು

ಮಿಲ್ಕಿ ಬ್ಯೂಟಿ ಅಭಿನಯದ ‘ನಾ ನುವ್ವೆ’ ಟ್ರೈಲರ್ ಹೆಂಗಿದೆ ಗೊತ್ತಾ?

ನಂದಮುರಿ ಕಲ್ಯಾಣರಾಮ್ ಮತ್ತು ತಮಾನ್ನಾ ಅಭಿನಯಿಸುತ್ತಿರುವ ‘ನಾ ನುವ್ವೆ’ ಚಿತ್ರದ ನಿರೀಕ್ಷಿತ ಟ್ರೈಲರ್ ಬಿಡುಗಡೆಯಾಗಿದೆ. ಕಲ್ಯಾಣ್ ರಾಮ್ ಮತ್ತು ತಮಾನ್ನಾ ನಡುವಿನ ನಿಗೂಢ ಸಂಬಂಧವನ್ನು ಟ್ರೇಲರ್ ತೋರಿಸುತ್ತದೆ. ಕಲ್ಯಾಣರಾಮ್ ಮತ್ತು ಅವರ ಹೊಸ ಲುಕ್ ಹಾಗೂ ಅದ್ಭುತ ರೂಪಾಂತರವು ಆಕರ್ಷಕವಾಗಿದೆ ಮತ್ತು ಎಲ್ಲೆಡೆ ಮೆಚ್ಚುಗೆ ಪಡೆದಿದೆ. ಟ್ರೈಲರ್ ಹೊಸ ವಯಸ್ಸಿನ ಪ್ರೇಮ ಕಥೆಯ ಭರವಸೆಯನ್ನು ನೀಡುತ್ತದೆ.

ಶರತ್ ಅವರ ಸುಂದರ ಹಿನ್ನಲೆ ಸಂಗೀತ, ಹಾಗೂ  ಪಿಸಿ ಶ್ರೀ ರಾಮ್ ಅವರ ಛಾಯಾಗ್ರಹಣ ಮತ್ತು ಕಲ್ಯಾಣ್ ರಾಮ್- ತಮನ್ನ ರವರ ಕಾಂಬೀನೇಷನ್ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಜಯೇಂದ್ರರ ನಿರ್ದೇಶನದ ಈ ಚಿತ್ರವು ಪ್ರಣಯ ಹಾಗೂ ಮನೋರಂಜನೆಯೊಂದಿಗೆ ಪ್ರೇಕ್ಷರಿಗೆ ಹಬ್ಬದೂಟವಾಗಲಿದೆ. ಈ ಚಿತ್ರದ ಮೂಲಕ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಕಲ್ಯಾಣ್ ರಾಮ್ ಪ್ರಣಯ ರಾಜನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ವಿಶೇಷದ ಸಂಗತಿಯಾಗಿದೆ. ಮೂಲಗಳ ಪ್ರಕಾರ ಈ ಚಲನಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿದಿದೆ. ಈ ಚಿತ್ರ ಮೇ 25 ರಂದು ಪರದೆಯ ಮೇಲೆ ಗುಲ್ಲೆಬ್ಬಿಸಲಿದೆ ಎಂದು ಹೇಳಲಾಗುತ್ತಿದೆ

Tags

Related Articles

Leave a Reply

Your email address will not be published. Required fields are marked *