ಸುದ್ದಿಗಳು

ಪ್ರಧಾನಿ ನರೇಂದ್ರ ಮೋದಿಗೆ ನಟಿ ರಾಖಿ ಸಾವಂತ್ ಸಲಹೆ

ಮುಂಬೈ, ಜ.24:

ಸದಾ ಒಂದಿಲ್ಲೊಂದು ವಿಚಾರಗಳಿಂದ ಸುದ್ದಿಯ ಜೊತೆಗೆ ಟ್ರೋಲ್ ಗೆ ಗುರಿಯಾಗುವ ನಟಿ ರಾಖಿ ಇದೀಗ ಹೊಸದೊಂದು ವಿಚಾರವಾಗಿ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಮಾಜಿ ಪ್ರಿಯತಮನ ವಿಚಾರವಾಗಿ ವಿಡಿಯೋ ಮೂಲಕ ಮಾತನಾಡಿದ್ದ ಈ ನಟಿ ಇದೀಗ ಮೋದಿಗೆ ಸಲಹೆ ನೀಡುವ ವಿಚಾರವಾಗಿ‌ ಮತ್ತೆ ಸುದ್ದಿಗೆ ಬಂದಿದ್ದಾರೆ. ಅದೇನು ಸಲಹೆ ನೀಡಿದ್ರು ಅಂತೀರಾ ಮುಂದೆ ನೋಡಿ.

ಮೋದಿಗೆ ರಾಖಿ ಸಲಹೆ

ಹೌದು, ಸದಾ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮುಖಾಂತರ ಅಭಿಮಾನಿಗಳನ್ನು ರಂಜಿಸುತ್ತಿರುವ ಡ್ರಾಮಾ ನಟಿ ಅಂತಾನೇ ಫೇಮಸ್ ಆದ ರಾಖಿ ಸಾವಂತ್ ಇದೀಗ ಚುನಾವಣೆ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಲ್ಲಿ ವಿಡಿಯೋ ಹಾಕಿಕೊಂಡಿರುವ ರಾಖಿ ನನ್ನ ಮಾತು ಕೇಳಿದರೆ ಐದು ವರ್ಷ ನೀವೇ ಆಡಳಿತ ನಡೆಸುವ ಲಕ್ ನಿಮ್ಮದಾಗಲಿದೆ ಎಂದು ತಿಳಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ..?

ಹೌದು, ಈ ಬಗ್ಗೆ ನಟಿ ವಿಡಿಯೋ ಒಂದನ್ನು ಮಾಡಿದ್ದಾರೆ. ಹಾಯ್ ಮೋದಿಜಿ, ಎಂದು ಮಾತು ಪ್ರಾರಂಭಿಸಿದ ನಟಿ ರಾಖಿ ಮೋದಿಯವರನ್ನು  ಹೇಗಿದ್ದೀರಾ ಎಂದಿದ್ದಾರೆ. ಇನ್ನು ಇತ್ತೀಚೆಗೆ ನೀವು ಬಾಲಿವುಡ್ ತಾರೆಯರನ್ನು ಹೆಚ್ಚು ಹೆಚ್ಚು ಭೇಟಿಯಾಗುತ್ತಿದ್ದೀರಿ. ಸಿನಿಮಾ ಮಂದಿಯನ್ನು ಭೇಟಿಯಾಗುವ ಮೂಲಕ ಬಾಲಿವುಡ್ ಗೆ ನೀವು ನೀಡುತ್ತಿರುವ ಗೌರವ ನೋಡಿ ನನಗೆ ತುಂಬಾ  ಖುಷಿಯಾಗುತ್ತಿದೆ. ಬಾಲಿವುಡ್ ಸ್ಟಾರ್ ಗಳನ್ನು ಭೇಟಿಯಾಗುವ ಬದಲು ನೀವು ರೈತರು ಮತ್ತು ಬಡವರ ಹತ್ತಿರ ಹೋಗಿ. ಅವರೇ ನಿಜವಾದ ಮತದಾರರು. ಬಾಲಿವುಡ್ ಸೆಲೆಬ್ರೆಟಿಗಳು ಯಾರು ವೋಟ್ ಹಾಕಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರನ್ನು ಭೇಟಿಯಾದ್ರೆ ಚುನಾವಣೆಯಲ್ಲಿ ನಿಮಗೆ ಮತ ಬೀಳಲಿವೆ. ಇದರಿಂದ ಮುಂದಿನ ಬಾರಿ ನೀವೇ ಸರ್ಕಾರ ರಚಿಸಿ ಆಡಳಿತ ನಡೆಸಬಹುದು ಎಂದು ರಾಖಿ ಸಾವಂತ್ ವಿಡಿಯೋದಲ್ಲಿ ಹೇಳಿದ್ದಾರೆ.

View this post on Instagram

Good morning modi ji

A post shared by Rakhi Sawant (@rakhisawant2511) on

 

#rakhisawant  #bollywood #hindimovies #narendramodi #balkaninews

Tags