ಸುದ್ದಿಗಳು

ಮೋದಿ ಬಯೋಪಿಕ್ ನ ಹೊಸ ಚಿತ್ರಗಳು

ಮುಂಬೈ, ಮಾ.18:

ಸದ್ಯ ನರೇಂದ್ರ ಮೋದಿಯವರ ಜೀವನಾಧಾರಿತ ಸಿನಿಮಾ ತೆರೆ ಕಾಣುವುದಕ್ಕೆ ಸಿದ್ದವಾಗಿದೆ. ಈಗಾಗಲೇ ಸಿನಿಮಾ ಶೂಟಿಂಗ್ ಕೂಡ ಕೊನೆಯ ಹಂತ ತಲುಪಿದ್ದು, ಇನ್ನೇನು ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್‌ ನಲ್ಲಿ ಭಾಗಿಯಾಗಿದೆ. ಇದೀಗ ಈ ಬೆನ್ನಲ್ಲೇ ಸಿನಿಮಾ ತಂಡ ಒಂದಿಷ್ಟು ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಪೋಸ್ಟರ್‌ ನಲ್ಲಿ ಮೋದಿಯವರ ಜೀವನ ಚಿತ್ರಗಳ ಹಂತವನ್ನು ಕಾಣಬಹುದಾಗಿದೆ.

9 ಪೋಸ್ಟರ್ ರಿಲೀಸ್

ಹೌದು, ಓಮಂಗ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೋದಿ ಬಯೋಪಿಕ್ ಸಿನಿಮಾದಲ್ಲಿ ನಟ ವಿವೇಕ್ ಓಬೆರಾಯ್ ಮೋದಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ ವಿವೇಕ್ ಲುಕ್‌ ಗಳು ಕೂಡ ಬಿಡುಗಡೆ ಮಾಡಿದ್ದ ಚಿತ್ರತಂಡ ಇದೀಗ ಮತ್ತೊಂದಿಷ್ಟು ಪೋಸ್ಟರ್‌ ಗಳನ್ನು ಬಿಡುಗಡೆ ಮಾಡಿದೆ. ಖ್ಯಾತಸಿನಿಮಾ ವಿಮರ್ಶಕ ತರಣ್ ಆದರ್ಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಮೋದಿ ಬಯೋಪಿಕ್ ನ ಕೆಲವೊಂದಿಷ್ಟು ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮೋದಿಯವರ ಜೀವನ ಶೈಲಿಯ ಒಂದೊಂದು ಹಂತದ ಫೋಟೋಗಳು ಪ್ರೇಕ್ಷಕರಿಗೆ ಹತ್ತಿರವಾಗಿಸುವಂತಿದೆ.

ಏಪ್ರಿಲ್ 12ರಂದು ತೆರೆಗೆ

ಇನ್ನೂ ಮೋದಿಯವರ ಪಾತ್ರಕ್ಕೆ ವಿವೇಕ್ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ ಎನ್ನಲಾಗಿದೆ. ಸುಮಾರು 7 ರಿಂದ 8 ಗಂಟೆಗಳ ಕಾಲ ಮೇಕಪ್ ಮಾಡಿಸಿಕೊಳ್ಳುತ್ತಿದ್ದರಂತೆ. ಸದ್ಯ ಈ ಸಿನಿಮಾ ಏಪ್ರಿಲ್ 12 ರಂದು ತೆರೆ ಕಾಣುತ್ತಿದೆ. ಚುನಾವಣಾ ಸಮಯದಲ್ಲಿ ಈ ಚಿತ್ರ ಕಾಣುತ್ತಿರುವುದರಿಂದ ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತ ಪಡಿಸಿದೆ.

ಮಲೆಯಾಳಿ ಹುಡುಗಿ ಸೀರೆ ಚೆಂದ…

#balkaninews #hindimovies #bollywood #vivekoberoi #narendramodibiopic

Tags