ಸುದ್ದಿಗಳು

ತೆರೆ ಮೇಲೆ ಬರಲು ರೆಡಿಯಾಯ್ತು ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್..!!

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜೀವನ ಚರಿತ್ರೆ ಸಿನಿಮಾವಾಗಿ ತೆರೆ ಕಾಣುತ್ತಿದೆ.

ಮುಂಬೈ, ಡಿ.31: ಇತ್ತೀಚಿನ ದಿನಗಳಲ್ಲಿ ಬಯೋಪಿಕ್ ಸಿನಿಮಾಗಳು ಹೆಚ್ಚಾಗಿ ಬರುತ್ತಿರುವುದನ್ನು ನೋಡಿದ್ದೇವೆ. ಆದರೆ ಇದರ ಜೊತೆಗೆ ಇದೀಗ ರಾಜಕೀಯ ಮುಖಂಡರ ಜೀವನ ಚರಿತ್ರೆಗಳು ಕೂಡ ಹೆಚ್ಚಾಗಿ ತೆರೆ ಕಾಣುತ್ತಿವೆ. ಈಗಾಗಲೇ ಎನ್ಟಿಆರ್, ಜಯಲಲಿತ ಸೇರಿದಂತೆ ಹಲವಾರು ಸಿನಿಮಾಗಳು ಚಿತ್ರೀಕರಣ ಹಂತದಲ್ಲಿದ್ದರೆ ಕೆಲವೊಂದು ಸಿನಿಮಾಗಳು ಬಿಡುಗಡೆಗೂ ಸಜ್ಜಾಗಿವೆ. ಈ ಬೆನ್ನಲ್ಲೇ ಇದೀಗ ಭಾರತದ ಪ್ರಧಾನಿಯವರ ಸಿನಿಮಾ ತೆರೆ ಕಾಣಲು ಸಿದ್ದವಾಗುತ್ತಿದೆ.

ಮೋದಿ ಸಿನಿಮಾ ಹೆಸರೇನು..?

ಬಾರೀ ಚರ್ಚೆಗೆ ಗ್ರಾಸವಾಗಿದ್ದ ‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನಿಮಾ ಬೆನ್ನಲ್ಲೇ ಇದೀಗ ನರೇಂದ್ರ ಮೋದಿಯವರ ಸಿನಿಮಾ ಕೂಡ ತೆರೆಗೆ ಬರುತ್ತಿದೆಯಂತೆ. ಮನಮೋಹನ್ ಸಿಂಗ್ ಅವರ ಸಿನಿಮಾ ಬರುತ್ತೆ ಹಾಗೂ ಟ್ರೇಲರ್ ಲಾಂಚ್ ಆದಾಗ ಅನೇಕ ಮಂದಿ ಮೋದಿಯವರ ಸಿನಿಮಾ ಯಾಕೆ ಬರುತ್ತಿಲ್ಲ ಎಂಬ ಮಾತುಗಳನ್ನು ಆಡಿದ್ದರು. ಆದ್ರೀಗ ಅವರ ಮಾತಿನಂತೆ ನರೇಂದ್ರ ಮೋದಿಯವರ ಸಿನಿಮಾ ಕೂಡ ತೆರೆಗೆ ಅಪ್ಪಳಿಸಲಿದೆ.

Image result for narendra modi biopic

ವಿವೇಕ್ ಒಬೆರಾಯ್ ಮೋದಿ ಪಾತ್ರದಲ್ಲಿ..?

ಹೌದು, ನರೇಂದ್ರ ಮೋದಿಯವರ ಸಿನಿಮಾವನ್ನು ಕ್ರಿಶ್-೩ ನಿರ್ದೇಶನ ಮಾಡಿದ್ದ ಒಮಂಗ್ ಕುಮಾರ್ ಅವರು ನಿರ್ದೇಶನ ಮಾಡಲಿದ್ದಾರಂತೆ. ಇನ್ನು ಮೋದಿಯ ಪಾತ್ರಕ್ಕೆ ವಿವೇಕ್ ಒಬೆರಾಯ್ ನಟಿಸುತ್ತಿದ್ದಾರೆ ಎಂಬ ಮಾತುಗಳು ಸಿನಿಮಾ ರಂಗದಲ್ಲಿ ಓಡಾಡುತ್ತಿವೆ. ಈಗಾಗಲೇ ಎಲ್ಲ ಆ ಮಾತು ಕಥೆ ಮುಗಿದಿದ್ದು, ಜನವರಿಯಲ್ಲಿ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ ಅಂತಾ ವರದಿಗಳಾಗಿವೆ. ಆದರೆ ಈ ವಿಚಾರವಾಗಿ ಅಧಿಕೃತ ಮಾಹಿತಿ ಯಾವುದೂ ಕೂಡ ಚಿತ್ರತಂಡದಿಂದ ಹೊರ ಬಿದ್ದಿಲ್ಲ.

Tags