ಸುದ್ದಿಗಳು

ಮತದಾನದ ಅರಿವು ಮೂಡಿಸುವಂತೆ ಮೋದಿ ಕರೆ

ಬೆಂಗಳೂರು, ಮಾ.13:

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಬೆನ್ನಲ್ಲೇ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯಗಳು ಭರದಿಂದ ಸಾಗಿದೆ. ಇದೀಗ ಚುನಾವಣಾ ಆಯೋಗ ಕೂಡ ಚುನಾವಣೆಗೆ ಬೇಕಾದಂತಹ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಈ ಬಾರಿಯ ಲೋಕಸಭೆ ಚುನಾವಣೆ 7 ಹಂತದಲ್ಲಿ ನಡೆಯಲಿದ್ದು, ಏಪ್ರಿಲ್ 11 ರಿಂದ ಪ್ರಾರಂಭವಾಗುವ ಚುನಾವಣೆ ಮೇ 19ಕ್ಕೆ ಕೊನೆಗೊಳ್ಳಲಿದೆ. ಮೇ 23ಕ್ಕೆ ಈ ಚುನಾವಣೆಯ ಪಲಿತಾಂಶ ಹೊರ ಬೀಳಲಿದೆ.

100ರಷ್ಟು ಮತದಾನವಾಗಬೇಕೆಂದ ಪ್ರಧಾನ ಮಂತ್ರಿಗಳು

ಇದೀಗ ಚುನಾವಣೆಗಳು ಬಂದರ ಸಾಕು ಮತ ಹಾಕುವವರ ಸಂಖ್ಯೆ ಕೂಡ ಕಡಿಮೆಯಾಗುತ್ತದೆ. ಚುನಾವಣಾ ಆಯೋಗ ಏನೇ ಸೌಲಭ್ಯ ನೀಡಿದರು ಕೂಡ 100ಕ್ಕೆ 100ರಷ್ಟು ಮತದಾನ ಆಗೋದು ಡೌಟ್. ಇದೀಗ ಈ ಬಾರೀಯಾದ್ರೂ 100ರಷ್ಟು ಮತದಾನವಾಗಲೀ ಅಂತಾ ಪ್ರಧಾನಿ ಮೋದಿ ಮತದಾನದ ಅರಿವು ಮೂಡಿಸುವಂತೆ ಸಿನಿ ಮಂದಿಗೆ ಮನವಿ ಮಾಡಿದ್ದಾರೆ.

ಸಿನಿ ದಿಗ್ಗಜರಿಗೆ ಮೋದಿ ಕರೆ

ಈ ಬಗ್ಗೆ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನ ಮಂತ್ರಿಗಳು, ಜನಸಾಮಾನ್ಯರಲ್ಲಿ ಅರಿವು ಮೂಡಿಸುವಂತಹ ಕೆಲಸವನ್ನ ಕಲಾವಿದರು ಮಾಡಬೇಕು. ಸೆಲೆಬ್ರಿಟಿಗಳು ಮುಂದೆ ಬಂದು ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗಬೇಕಾದರೆ ಸೆಲೆಬ್ರಿಟಿಗಳ ಪಾತ್ರವು ಇರಬೇಕೆಂದು ಟ್ವಿಟ್ ಮಾಡಿದ್ದಾರೆ. ಇನ್ನೂ ಮತ್ತೊಂದು ಟ್ವಿಟ್ ನಲ್ಲಿ ಬಾಲಿವುಡ್ ನ ಖ್ಯಾತ ನಟರಾದ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ಆಯುಷ್ಮಾನ್ ಖುರಾನ, ಭೂಮಿ ಪಡ್ನೆಕರ್ ಸೇರಿದಂತೆ ಎಲ್ಲರೂ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಎಂದು ಕರೆ ನೀಡಿದ್ದಾರೆ.

ಗಾಯನಕ್ಕೂ ಸೈ, ನೃತ್ಯಕ್ಕೂ ಜೈ ಎಂದ ಆರ್ ಜೆ ದಿವ್ಯ ಶ್ರೀ

#balkaninews #narendramodi #bollywood #politics #politicspublicity

Tags