ಸುದ್ದಿಗಳು

ಮತ ಹಾಕುವಂತೆ ಕರೆ ನೀಡಿದ ಮೋದಿಗೆ ಇದೀಗ ರಮ್ಯಾ ಟಾಂಗ್

ಬೆಂಗಳೂರು, ಮಾ.14:

ಲೋಕ ಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಈಗಾಗಲೇ ಪಕ್ಷಗಳು ಚುನಾವಣಾ ಪ್ರಚಾರ ಕೂಡ ಭರದಿಂದ ಸಾಗುತ್ತಿದೆ. ಈಗಾಗಲೇ ಚುನಾವಣಾ ಆಯೋಗ ಕೂಡ ಚುನಾವಣೆಯ ಸಿದ್ದತೆಗಳನ್ನು ಮಾಡಿಕೊಂಡಿದೆ. ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನೂರರಷ್ಟು ಮತ ಹಾಕುವಂತೆ ಸೆಲಿಬ್ರಿಟಿಗಳು ಅರಿವು ಮೂಡಿಸಿ ಎಂದಿದ್ದರು. ಇದೀಗ ಈ ಮಾತಿಗೆ ನಟಿ ರಮ್ಯಾ ಕಾಲೆಳೆದಿದ್ದಾರೆ.

ಚುನಾವಣಾ ವಿಚಾರವಾಗಿ ಮೋದಿಗೆ ಟಾಂಗ್

ಹೌದು, ಸದಾ ಮೋದಿ ಮಾಡುವ ಕೆಲಸಕ್ಕೆ ಟ್ವಿಟ್ಟರ್ ನಲ್ಲಿಯೇ ಕಾಲೆಳೆಯುವ ರಮ್ಯಾ, ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಸಿನಿಮಾದಿಂದ ದೂರ ಉಳಿದ ಈ ನಟಿ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್ ಆಗಿ ಇರ್ತಾರೆ. ಮೋದಿ ಹಾಕುವ ಟ್ವಿಟ್ ಹಾಗೂ ಬಿಜೆಪಿ ಮಾಡುವ ಟ್ವಿಟ್ ಗೆ ರಿಪ್ಲೇ ಮಾಡುವ ಈ ನಟಿ ಚುನಾವಣೆ ಬಗ್ಗೆ ಮಾಡಿರುವ ಟ್ವಿಟ್ ಗೆ ಇದೀಗ ಮತ್ತೆ ಕಾಲೆಳೆದಿದ್ದಾರೆ.

ನೀವು ಲೇಟಾಗಿ ಹೇಳಿದ್ರಿ ಎಂದ ರಮ್ಯಾ

ನೀವು ಹೇಳುವ ಮೊದಲೇ ಇದನ್ನು ಮಾಡಿದ್ದೇವೆ ಮೋದಿ ಜಿ. ಚುನಾವಣೆ ದಿನಾಂಕ ನಿಗಧಿಯಾದಾಗಿನಿಂದಲೂ ಈ ಕೆಲಸ ಮುಂದುವರೆದಿದೆ. ರಿಜಿಸ್ಟರ್ ಟು ಓಟ್ ನಲ್ಲಿ ಆಗಲೇ ನಮ್ಮ ಕೆಲಸ ಮುಂದುವರೆಸಿದ್ದೇವೆ. ನೀವು ಹೇಳುತ್ತಿರುವುದು ಲೇಟಾಗಿದೆ. ರಾಹುಲ್ ಗಾಂಧಿ ಜಿ ಕೂಡ ಎಲ್ಲರ ಬಳಿ ಇಂಟರ್ಯ್ಯಾಕ್ಟ್ ಮಾಡಿದ್ದಾರೆ ಅಂತಾ ಟ್ವಿಟ್ ಮಾಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರರ ಪತ್ನಿ ಪ್ರಿಯಾಂಕಾ ಹಾಗೂ ಮಗಳು ಐಶ್ವರ್ಯ ನಟಿಸಿರುವ ‘ದೇವಕಿ’ ಚಿತ್ರದ ಟೀಸರ್ ರಿಲೀಸ್

#narendramodi #ramya #ramyaandnarendramodi #balkaninews #politics #mandyapolitics

Tags