ಸುದ್ದಿಗಳು

ನರೇಂದ್ರ ಮೋದಿ ವೆಬ್ ಸೀರೀಸ್ ಟ್ರೇಲರ್ ಲಾಂಚ್

ಮುಂಬೈ, ಮಾ.29:

ನರೇಂದ್ರ ಮೋದಿ ಅವರ ಸಿನಿಮಾ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಪೋಸ್ಟರ್ ಮೂಲಕ ಬಹಳಷ್ಟು  ಸದ್ದು ಮಾಡಿರುವ ನರೇಂದ್ರ ಮೋದಿ ಅವರ ಬಯೋಪಿಕ್ ಸಿನಿಮಾ ಇನ್ನೇನು ಬಿಡುಗಡೆ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಬಹಳಷ್ಟು ಅಭಿಮಾನಿಗಳು ಕೂಡ ನರೇಂದ್ರ ಮೋದಿಯವರ ಬಯೋಪಿಕ್ ಸಿನಿಮಾಗೆ ಕಾದಿದ್ದಾರೆ. ಇದರ ಜೊತೆಜೊತೆಗೆ ಇದೀಗ ನರೇಂದ್ರ ಮೋದಿಯವರ ಆರಂಭವಾಗಿದೆ. ಇದರ ಮುನ್ನ ಭಾಗವಾಗಿ ಇದೀಗ ಈ ವೆಬ್ ಸೀರೀಸ್ ನ ಟ್ರೈಲರ್ ಲಾಂಚ್ ಆಗಿದೆ.

ಟ್ರೇಲರ್ ನಲ್ಲಿ ಯಾರೆಲ್ಲಾ ಇದ್ದಾರೆ..?

ಮೋದಿ ಜರ್ನಿ ಅಫ್ ಎ ಕಾಮನ್ ಮ್ಯಾನ್ ಎಂಬ ವೆಬ್ ಸೀರೀಸ್ ಸದ್ಯ ರಿಲೀಸ್ ಆಗ್ತಾ ಇದೆ. ಮೋದಿ ಅವರ ಬಗ್ಗೆ ಪ್ರಾರಂಭವಾಗುತ್ತಿರುವ ಈ ಬಯೋಪಿಕ್ ವೆಬ್ ಸೀರೀಸ್ ನ ಟ್ರೇಲರ್ ಲಾಂಚ್ ಆಗಿದೆ. ಏರೋಸ್ ನೋ ನಲ್ಲಿ ಏಪ್ರಿಲ್ ನಿಂದ ಪ್ರಸಾರವಾಗಲಿದೆ ಈ ವೆಬ್ ಸೀರೀಸ್. ಬಾಲ್ಯದಲ್ಲಿ ಫೈಸಲ್ ಖಾನ್, ಮಧ್ಯವಯಸ್ಸಿನಲ್ಲಿ ಆಶಿಶ್ ಶರ್ಮ ಹಾಗೂ ಪ್ರಸ್ತುತ ಮೋದಿಯವರ ಪಾತ್ರದಲ್ಲಿ ಮಹೇಶ್ ಠಾಕೂರ್ ನಟಿಸಿರೋದು ಟ್ರೈಲರ್ ನಲ್ಲಿ ಬಹಿರಂಗವಾಗಿದೆ.

ಟ್ರೇಲರ್ ನಲ್ಲಿ ಏನಿದೆ..?

ಮೋದಿಯವರ ವೆಬ್ ಸೀರಿಸ್ ಟ್ರೈಲರ್ ನಲ್ಲಿ ನಡೆದು ಬಂದ ದಾರಿ, ಮೊದಮೊದಲು ಕಾಲೇಜು ದಿನಗಳಲ್ಲಿ ಅನುಭವಿಸಿದ ಕಹಿ ಘಟನೆಗಳು, ಮನೆ ಬಿಟ್ಟು ಬಂದ ಘಟನೆ ಸಮಾಜದಲ್ಲಿ ನಡೆಯುತ್ತಿರುವ ಕಹಿ ಘಟನೆಗಳನ್ನು ನೋಡಿದ ಕಣ್ಣುಗಳು ಹಾಗೂ ಅದನ್ನು ಪರಿಹರಿಸಲು ಏನು ಮಾಡಬೇಕಂಬ ಯೋಚನೆ. ಸಂಘಟನೆಯನ್ನು ಕಟ್ಟುವ ವಿಧಾನ ಸಂಘಟನೆ ಕಟ್ಟುವ ವೇಳೆ ನಡೆದ ಘಟನೆ, ನಂತರದಲ್ಲಿ ಬಿಜೆಪಿ ಸೇರುವ ಬಗ್ಗೆ ಬಿಜೆಪಿ ಸೇರಿದ ನಂತರದ ಘಟನೆಗಳು ಹೀಗೆ ಎಲ್ಲವನ್ನು ಕಣ್ಣಿಗೆ ಕಟ್ಟಿದ ರೀತಿಯಲ್ಲಿ ಟ್ರೈಲರ್ ನಲ್ಲಿ ತೋರಿಸಲಾಗಿದೆ. ಇನ್ನೂ ಅಧಿಕಾರಕ್ಕೆ ಬಂದ ನಂತರದಲ್ಲಿ ನಡೆದ ಘಟನೆಗಳು ರೈಲಿಗೆ ಬೆಂಕಿ ಬಿದ್ದಾಗ ಆ ಸಮಸ್ಯೆಯನ್ನು ಬಗೆಹರಿಸುವ ಪರಿ ಹೀಗೆ ಎಲ್ಲವನ್ನೂ ಕೂಡ ಟ್ರೈಲರ್ ನಲ್ಲಿ ತೋರಿಸಲಾಗಿದೆ. ಮೂರು ನಿಮಿಷದ ಟ್ರೇಲರ್ ಸದ್ಯ ಯೂಟ್ಯೂಬ್ ನಲ್ಲಿ ಸೌಂಡ್ ಮಾಡ್ತಾ ಇದೆ. ಏಪ್ರಿಲ್ ನಲ್ಲಿ ಶುರುವಾಗಲಿದೆ ಈ ವೆಬ್ ಸೀರೀಸ್.

#balkaninews #narendamodi #narendramodibiopic #bollywood #narendramodiwebseries

Tags