ಸುದ್ದಿಗಳು

ಬಯೋಪಿಕ್ ಆಯ್ತು ಇದೀಗ ಮೋದಿ ವೆಬ್ ಸರಣಿ ಶುರು

ಮುಂಬೈ, ಮಾ.14:

ಸದ್ಯ ಬಯೋಪಿಕ್ ಸಿನಿಮಾಗಳು ಒಂದಾದ ಮೇಲೊಂದರಂತೆ ಬರುತ್ತಲೇ ಇವೆ. ಅದರಲ್ಲೂ ರಾಜಕೀಯ ನಾಯಕರ ಸಿನಿಮಾಗಳಿಗೇನು ಕಡಿಮೆ ಇಲ್ಲ. ಬಹಳಷ್ಟು ಜನ ನಾಯಕರ ಸಿನಿಮಾಗಳು ಭಿನ್ನ ವಿಭಿನ್ನವಾಗಿ ತೆರೆ ಕಂಡಿವೆ. ಇದೀಗ ಬಾರೀ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾದ ಪ್ರಧಾನ ಮಂತ್ರಿಯವರ ಜೀವನಾಧಾರಿತ ಸಿನಿಮಾ ತೆರೆ ಕಾಣಲು ಸಿದ್ದತೆ ನಡೆಸಿದೆ. ಈ ಬೆನ್ನಲ್ಲೇ ಇದೀಗ ಇವರ ವೆಬ್ ಸೀರಿಸ್ ಕೂಡ ಪ್ರಾರಂಭವಾಗುತ್ತಿದೆ.

ಮೋದಿ ಜೀವನ ವೆಬ್ ಸೀರೀಸ್ ನಲ್ಲಿ

ಒಮಂಗ್ ಕುಮಾರ್, ಮೋದಿ ಬಯೋಪಿಕ್ ನಿರ್ದೇಶಿಸುತ್ತಿದ್ದಾರೆ. ಮೋದಿ ಹುಟ್ಟೂರು ಗುಜರಾತ್ ಸೇರಿದಂತೆ ದೆಹಲಿ, ಉತ್ತರಾಖಂಡ್, ಹಿಮಾಚಲ ಪ್ರದೇಶ ಮುಂತಾದೆಡೆ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಬಾಲಿವುಡ್ ಖ್ಯಾತ ನಟ ವಿವೇಕ್ ಒಬೇರಾಯ್ ಈ ಬಯೋಪಿಕ್‌ ನಲ್ಲಿ ಮೋದಿ ಪಾತ್ರ ನಿಭಾಯಿಸುತ್ತಿದ್ದಾರೆ. ಈ ಸಿನಿಮಾ ಬೆನ್ನಲ್ಲೇ ಇದೀಗ ಇವರ ಬಯೋಪಿಕ್ ವೆಬ್ ಸರಣಿ ಕೂಡ ತೆರೆ ಕಾಣುವುದಕ್ಕೆ ರೆಡಿಯಾಗಿದೆ. ಉಮೇಶ್ ಶುಕ್ಲಾ ನಿರ್ದೇಶನದಲ್ಲಿ ವೆಬ್ ಸರಣಿ ಪ್ರಾರಂಭ ವಾಗುತ್ತಿದೆ.

ಮೊದಲ ನೋಟ ಬಿಡುಗಡೆ

ಗುಜರಾತ್, ಸಿದ್ದಪುರ ಮತ್ತು ವಾಡ್ನಗರ್ನಲ್ಲಿ ಮೋದಿ ಬೆಳೆದ ನೈಜ ಸ್ಥಳಗಳಲ್ಲಿ ಸರಣಿಗಳನ್ನು ಚಿತ್ರೀಕರಿಸಲಾಗಿದೆ. ಮೋರಿಸ್ ಎಂಬ ಹೆಸರಿನ ವೆಬ್ ಸರಣಿಯನ್ನು ಎರೋಸ್ ನೌ ಮತ್ತು ಬೆಂಚ್ಮಾರ್ಕ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಸದ್ಯ ಈ ವೆಬ್ ಸೀರಿಸ್ 10 ಭಾಗಗಳಾಗಿ ತೆರೆ ಕಾಣುತ್ತಿದೆ. ಇನ್ನೂ ಏಪ್ರಿಲ್ ನಿಂದ ವೆಬ್ ಸರಣಿ ಬರಲಿದೆ. ಈಗಾಗಲೇ ಬಾರೀ ನಿರೀಕ್ಷೆಯ ಸಿನಿಮಾದ ಜೊತೆಗೆ ವೆಬ್ ಸೀರೀಸ್ ಬರುಡ ಬರುತ್ತಿದೆ. ಇನ್ನು ಈಗಾಗಲೇ ಇದರ ಮೊದಲ ಲುಕ್ ಬಿಡುಗಡೆಯಾಗಿದೆ.

ಪಟ್ಟಣದ ಹೈ ಫೈ ಲೈಫ್ !! ಹಳ‍್ಳಿಯಲ್ಲಿ ಆದರೆ ಇದು ಸಿಗುತ್ತದೆಯೇ?

#balkaninews #taranadarsh #taranadarshtwitter #modiwebseries #umeshshukla #ashishwagh #modibiopic

Tags