ಸುದ್ದಿಗಳು

‘ನಟಸಾರ್ವಭೌಮ’ ಚಿತ್ರ ನೋಡಲು ರಜೆ ಕೋರಿ ಪತ್ರ!!

ಬೆಂಗಳೂರು,ಜ.30: ನಟಸಾರ್ವಭೌಮ ಫೆ.7 ರಂದು ರಾಜ್ಯಾದ್ಯಾಂತ ಬಿಡುಗಡೆಯಾಗಲಿದೆ.. ನಟಸಾರ್ವಭೌಮ ಚಿತ್ರವನ್ನು ನೋಡಲು ಎಲ್ಲರೂ ತುದಿಗಾಲಿನಲ್ಲಿ ನಿಂತಿದ್ದಾರೆ.. ಅದರಲ್ಲೂ ಕಾಲೇಜು ಯುವಕ-ಯುವತಿಯರು ತುದಿಗಾಲಿನಲ್ಲಿ ನಿಂತಿದ್ದಾರೆ..

ಮೈಸೂರಿನ ಮಹಾರಾಣಿ ಕಾಲೇಜು ವಿದ್ಯಾರ್ಥಿನಿ

ಸಿನಿಮಾವನ್ನು ನೋಡಲು ಏನೋ ಒಂದು ಕಾರಣ ಹೇಳಿ ಕಾಲೇಜ್ ಗೆ ಬಂಕ್ ಹಾಕುವವರನ್ನು ಕಂಡಿದ್ದೇವೆ.. ಆದರೆ ಈಗ ಹಾಗಿಲ್ಲ.. ಇಲ್ಲಿ ಒಬ್ಬಳು ಸಿನಿಮಾ ನೋಡಲು ಡೈರೆಕ್ಟ್ ಆಗಿ ಲೀವ್ ಲೆಟರ್ ಬರೆದಿದ್ದಾಳೆ..  ಮೈಸೂರಿನ ಮಹಾರಾಣಿ ಕಾಲೇಜು ವಿದ್ಯಾರ್ಥಿನಿ ನಿಸರ್ಗ,  ‘ನಟಸಾರ್ವಭೌಮ’ ಚಿತ್ರ ನೋಡಲು ರಜೆ ಕೋರಿ ಪತ್ರ ಬರೆದಿದ್ದಾಳೆ…..

ನಾನು ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ

“ನಟಸಾರ್ವಭೌಮ” ಸಿನಿಮಾ ಕುಟುಂಬ ಸಮೇತರಾಗಿ ಬಂದು ನೋಡುವಂತಹ ಒಳ್ಳೆಯ ಚಿತ್ರವಾಗಿದ್ದು, ನಮ್ಮ ರಾಜ್​ಕುಮಾರ್ ರವರ ಹೆಮ್ಮೆಯ ​ ತೃತೀಯ ಪುತ್ರ ಪುನೀತ್​ ರಾಜ್​ಕುಮಾರ್​ ಅವರಾಗಿದ್ದು ಈಗಿನ ಮಕ್ಕಳ ಅಚ್ಚುಮೆಚ್ಚಿನ ನಟರಾಗಿದ್ದಾರೆ.. ಹಾಗಾಗಿ ನಟಸಾರ್ವಭೌಮ ಚಿತ್ರವನ್ನು ನೋಡಲು ಫೆ.8ನೇ ತಾರೀಖಿಗೆ  ಆನ್ ಲೈನ್ ಟಿಕೆಟ್​ ಬುಕ್ಕಿಂಗ್​ ಮಾಡಿರುವೆ, ನಾನು ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ನೀವು ರಜೆ ನೀಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಪತ್ರ ಬರೆದಿದ್ದಾಳೆ..

ಫೆ.15 ಕ್ಕೆ ರಿಷಬ್ ಶೆಟ್ಟಿ ನಟಿಸಿರುವ ‘ಬೆಲ್ ಬಾಟಂ’ ರಿಲೀಸ್

#balknainews #natasrvabhowma #puneethrajkumar

Tags