ಸುದ್ದಿಗಳು

ನಾಳೆ ‘ನಾತಿಚರಾಮಿ’ ಚಿತ್ರದ ವಿಶೇಷ ಪ್ರದರ್ಶನ

ಸಂಚಾರಿ ವಿಜಯ್, ಶೃತಿ ಹರಿಹರನ್ ನಟಿಸಿರುವ ಸಿನಿಮಾ

ಬೆಂಗಳೂರು.ಫೆ.16

ಮಂಸೋರೆ ನಿರ್ದೇಶನದ ‘ನಾತಿಚರಾಮಿ’ ಚಿತ್ರವು ನೋಡುಗರಿಂದ ಮೆಚ್ಚುಗೆ ಪಡೆದಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಗಂಡನನ್ನು ಕಳೆದುಕೊಂಡ ನಾಯಕಿಯ ಅಂತರಂಗದ ಕಾಮನೆಯನ್ನು ಈ ಚಿತ್ರವು ವಿವರವಾಗಿ ವಿವರಿಸಿತ್ತು. ಗೌರಿಯ ಪಾತ್ರದಲ್ಲಿ ನಟಿ ಶೃತಿ ಹರಿಹರನ್ ಕಮಾಲ್ ಮಾಡಿದ್ದರು.

ಅವಿರತ ತಂಡದಿಂದ ವಿಶೇಷ ಪ್ರದರ್ಶನ

ನಾಳೆ ಭಾನುವಾರ, ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ, ಚಾಮರಾಜಪೇಟೆಯಲ್ಲಿ ಅವಿರತ ತಂಡದವರು ‘ನಾತಿಚರಾಮಿ’ ಚಿತ್ರವನ್ನು ಪ್ರದರ್ಶಿಸಲಿದೆ. ಹಾಗೆಯೇ ಚಿತ್ರ ತಂಡದೊಂದಿಗೆ ಸಂವಾದವೂ ಇರಲಿದೆ. ಈ ಮೂಲಕ ಚಿತ್ರಮಂದಿರದಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರಿಗೆ ಮತ್ತೊಂದು ಅವಕಾಶ ಸಿಕ್ಕಿದೆ. ಟಿಕೆಟ್ ಬೆಲೆ 200 ರೂಪಾಯಿ ನಿಗಧಿ ಮಾಡಲಾಗಿದೆ.

ಅಭಿಪ್ರಾಯ ಹಂಚಿಕೊಳ್ಳಿ

ಈ ಪ್ರದರ್ಶನವು ನಾಳೆ ಸಂಜೆ 4 ಗಂಟೆಗೆ ಇರಲಿದ್ದು, ಮುಂಗಡವಾಗಿ ಬುಕ್ ಮೈ ಶೋ ಆ್ಯಪ್ ನಲ್ಲಿಯೂ ಸಹ ಬುಕ್ಕಿಂಗ್ ಮಾಡುವ ಸೌಲಭ್ಯವೂ ಇರಲಿದೆ. ಈ ಪ್ರದರ್ಶನದಲ್ಲಿ ಚಿತ್ರತಂಡದವರೂ ಸಹ ಭಾಗಿಯಾಗಲಿದ್ದು, ಅವರ ಜೊತೆಗೆ ಸಿನಿಮಾವನ್ನು ನೋಡಬಹುದಾಗಿದೆ. ನಂತರ ಅವರೊಂದಿಗೆ ಅಭಿಪ್ರಾಯವನ್ನು ಹಂಚಿಕೊಳ್ಳಬಹುದಾಗಿದೆ.

ಮಂಸೋರೆ ನಿರ್ದೇಶನದ ಈ ಚಿತ್ರವನ್ನು ಜಗನ್ಮೋಹನ್ ರೆಡ್ಡಿ, ಶಿವಕುಮಾರ್ ರೆಡ್ಡಿ ನಿರ್ಮಾಣ ಮಾಡಿದ್ದರು. ತಾರಾಗಣದಲ್ಲಿ ಶೃತಿ ಹರಿಹರನ್, ಸಂಚಾರಿ ವಿಜಯ್, ಪೂರ್ಣ ಚಂದ್ರ ಮೈಸೂರು, ಬಾಲಾಜಿ ಮನೋಹರ್ ಸೇರಿದಂತೆ ಅನೇಕರು ನಟಿಸಿದ್ದಾರೆ.

ನೋಡ್ರಪ್ಪೊ ನೋಡಿ ಕಿರಿಕ್ ಬೆಡಗಿಯ ಮೊದಲ ಮ್ಯಾಗಜಿನ್ ಫೋಟೋಶೂಟ್

#nathicharami, #balkaninews #filmnews, #kannadasuddigalu, #specialshow, #kalavidarasangha, #sancharivijay, #sruthihariharan

Tags

Related Articles