ಸುದ್ದಿಗಳು

ರಾಷ್ಟ್ರೀಯ ಪುರಸ್ಕಾರ ಪ್ರಕಟ: ಅತಿ ಹೆಚ್ಚು ಪ್ರಶಸ್ತಿ ಪಡೆದ ಕನ್ನಡದ 3 ಸಿನಿಮಾಗಳು

ಇವತ್ತು ವರಮಹಾಲಕ್ಷ್ಮಿ ಹಬ್ಬ, ಮತ್ತೊಂದೆಡೆ ‘ಕುರುಕ್ಷೇತ್ರ’ ಹಾಗೂ ‘ಕೆಂಪೇಗೌಡ-2’ ಚಿತ್ರಗಳು ಬಿಡುಗಡೆ, ಈ ಸಂಭ್ರಮದ ನಡುವೆಯೂ ಮತ್ತೊಂದು ಸಿಹಿಸುದ್ದಿ ಬಂದಿದೆ. ಹೌದು, ಖುಷಿಯ ವಿಚಾರವೆಂದರೆ, 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2018 ಪ್ರಕಟವಾಗಿದ್ದು, ಒಟ್ಟು 11 ಪ್ರಶಸ್ತಿಗಳನ್ನು ಕನ್ನಡ ಸಿನಿಮಾಗಳು ಪಡೆದಿವೆ.

ಉದಯೋನ್ಮುಖ ನಿರ್ದೇಶಕ ಮಂಸೋರೆ ನಿರ್ದೇಶನದ ‘ನಾತಿಚರಾಮಿ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪುರಸ್ಕಾರ ದೊರೆತಿದ್ದು, ಈ ಚಿತ್ರಕ್ಕೆ ಒಟ್ಟು 5 ಪ್ರಶಸ್ತಿಗಳು ದೊರೆತಿವೆ.

‘ನಾತಿಚರಾಮಿ’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಂಕಲನ ಅತ್ಯುತ್ತಮ ಮಹಿಳಾ ಗಾಯಕಿ, ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಜೊತೆಗೆ ಶ್ರುತಿ ಹರಿಹರನ್ ಈ ಸಿನಿಮಾದ ನಟನೆಗಾಗಿ ವಿಶೇಷ ಪ್ರಶಸ್ತಿ ಪಡೆದಿದ್ದಾರೆ.

ಇನ್ನು ಯಶ್ ನಟನೆಯ ‘ಕೆ.ಜಿ.ಎಫ್’ ಚಿತ್ರವು ಅತ್ಯುತ್ತಮ ವಿಎಫ್ಎಕ್ಸ್ ಚಿತ್ರ ಹಾಗೂ ಅತ್ಯುತ್ತಮ ಸಾಹಸ ಸಿನಿಮಾ ಎಂಬ 2 ಪ್ರಶಸ್ತಿಗಳನ್ನು ಪಡೆದಿದೆ.

ಇನ್ನು ‘ಒಂದಲ್ಲಾ ಎರಡಲ್ಲಾ’ ಚಿತ್ರವು ಅತ್ಯುತ್ತಮ ಬಾಲ ಕಲಾವಿದ, ಅತ್ಯುತ್ತಮ ರಾಷ್ಟೀಯ ಏಕತಾ ಸಿನಿಮಾ ಎಂಬ 2 ಪ್ರಶಸ್ತಿಯನ್ನು ಪಡೆದಿದೆ. ಉಳಿದಂತೆ’ಮೂಕಜ್ಜಿಯ ಕನಸುಗಳು’ ಹಾಗೂ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರಗಳಿಗೆ ತಲಾ ಒಂದು ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ವರಮಹಾಲಕ್ಷ್ಮಮಿ ಹಬ್ಬಕ್ಕೆ ತುಪ್ಪದ ಬೆಡಗಿ ವಿಶ್!!

#nationalfilmawards2019 #kannadamovies #kannadafilm, #kannadamovie, #kannadanews, #kannadanewmovie, #kannadacine, #latestkannadamovie

Tags