ಸುದ್ದಿಗಳು

ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ‘ನವ ಇತಿಹಾಸ’ ಸಿನಿಮಾ

ಈಗಾಗಲೇ ಹೆಣ್ಣು ಭ್ರೂಣಹತ್ಯೆ ಮಹಾ ಪಾಪ ಎಂಬ ಸಂದೇಶವನ್ನು ಹೇಳುವ ಹಲವಾರು ಸಿನಿಮಾಗಳು ತೆರೆಕಂಡಿವೆ. ಅವುಗಳ ಸಾಲಿನಲ್ಲೀಗ ಹೊಸ ಸಿನಿಮಾವೊಂದು ತೆರೆಗೆ ಬರಲು ಸಿದ್ದತೆ ನಡೆಸುತ್ತಿದೆ.

ಹೌದು, ‘ನವ ಇತಿಹಾಸ’ ಹೆಸರಿನ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದ್ದು, ಸದ್ಯ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ಸಮರ್ಥ ನಿರ್ದೇಶನ ಮಾಡಿದ್ದು, ಚಿತ್ರದ ಬಗ್ಗೆ ಹೀಗೆ ಹೇಳಿದ್ದಾರೆ.

 

‘ಹೆಣ್ಣು ಇಲ್ಲದ ಸಮಾಜವನ್ನು ಊಹಿಸುವುದೂ ಕಷ್ಟ. ಆದ್ದರಿಂದ ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ ಎಂಬ ಸಂದೇಶವನ್ನು ಈ ಚಿತ್ರದಲ್ಲಿ ಹೇಳಲು ಹೊರಟಿದ್ದು, ಈಗಾಗಲೇ ಚಿತ್ರದ ಸೆನ್ಸಾರ್ ಆಗಿದ್ದು, ಶೀಘ್ರವೇ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ’

ಇನ್ನು ಈ ಚಿತ್ರವನ್ನು ಅಮೃತ ವಿ ರಾಮ್ ನಿರ್ಮಿಸಿದ್ದು ಅಲ್ಲದೇ ಅವರೇ ನಾಯಕಿಯಾಗಿ ನಟಿಸಿದ್ದಾರೆ. ವಿಕ್ರಮ್ ಈ ಚಿತ್ರದ ನಾಯಕನಟರಾಗಿದ್ದು, ಚಿತ್ರಕ್ಕೆ ‘ಹೆಣ್ಣೆ ಸಿಗ್ತಿಲ್ಲ’ ಎಂಬ ಟ್ಯಾಗ್ ಲೈನ್ ಇದೆ.

‘ಹಿಂದಿನ ಕಾಲದಲ್ಲಿ ಕೆಲವರು ಎರೆಡೆರಡು ಮದುವೆಯಾಗುತ್ತಿದ್ದರು. ಆದರೆ, ಇದೀಗ ವಿಳಂಬವಾಗುತ್ತಿದೆ. ಹೀಗಾಗಿ ಸಾಮಾನ್ಯವಾಗಿ ‘ಹೆಣ್ಣು ಸಿಗ್ತಿಲ್ಲ’ ಎಂಬ ಮಾತುಗಳು ಕೇಳಿ ಬರುತ್ತವೆ. ಯಾರನ್ನಾದರೂ ಲವ್ ಮಾಡಬೇಕೆಂದರೆ, ಚಿಕ್ಕವರಿದ್ದಾಗಲೇ ಬುಕ್ ಆಗಿ ಬಿಟ್ಟಿರುತ್ತಾರೆ. ಇವುಗಳ ಕುರಿತಂತೆ ಇಲ್ಲಿ ತೋರಿಸಲಾಗಿದೆ’ ಎಂದು ಚಿತ್ರತಂಡದವರು ಹೇಳಿದ್ದಾರೆ.

ನಾಡಿದ್ದು ಕಲಾ ಗಂಗೋತ್ರಿಯವರ ‘ಮುಖ್ಯಮಂತ್ರಿ’ ಪ್ರದರ್ಶನ

#navaithihaasa, #movie, #news, #balkaninews #filmnews, #kannadasuddigalu

Tags