ಸುದ್ದಿಗಳು

ನವೀನ್ ಕೃಷ್ಣ ಧ್ವನಿ ನೀಡಿರುವ ‘ಡೆಣ್ಣಾ ಡೆಣ್ಣಾ’.. ಸಾಂಗ್ ರಿಲೀಸ್

ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾ

ಬೆಂಗಳೂರು.ಮಾ.14: ಎ.ಪಿ ಪ್ರೊಡಕ್ಷನ್ , ಸ್ವಪ್ನಾ ಸಿನಿ ಕ್ರಿಯೇಷನ್ಸ್ ತಯಾರಾಗಿರುವ ‘ಕಮರೊಟ್ಟು ಚೆಕ್ ಪೋಸ್ಟ್’ ಚಿತ್ರದ ‘ಡೆಣ್ಣಾ ಡೆಣ್ಣಾ ‘ ಎಂಬ ಸಾಲಿನ ಹಾಡು ಬಿಡುಗಡೆಯಾಗಿದ್ದು ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ. ವಿಶೇಷವೆಂದರೆ, ಈ ಹಾಡನ್ನು ನಟ ನವೀನ್ ಕೃಷ್ಣ ಹಾಡಿದ್ದಾರೆ.

ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಕನ್ನಡದ ಚಿತ್ರದಲ್ಲಿ ತುಳು ಭಾಷೆಯ ಹಾಡನ್ನು ಬಳಸಿಕೊಂಡಿದ್ದು, ಭೂತಾರಾಧನೆ ಹಾಡನ್ನು ಇದೇ ಮೊದಲ ಬಾರಿಗೆ ಚಿತ್ರಕ್ಕಾಗಿ ಬಳಸಿಕೊಳ್ಳಲಾಗಿದೆ. ಈ ಹಾಡನ್ನು ನವೀನ್, ಎ.ಟಿ ರವೀಶ್ ಬರೆದಿದ್ದು, ಎ.ಟಿ ರವೀಶ್ ಸಂಗೀತ ನೀಡಿದ್ದಾರೆ.

ಸತ್ಯ ಘಟನೆಯನ್ನು ಆಧಾರವಾಗಿಟ್ಟುಕೊಂಡು ತಯಾರಾಗುತ್ತಿರುವ ಈ ಚಿತ್ರಕ್ಕೆ ಸನತ್ ಹಾಗೂ ಉತ್ಪಲ್ ನಾಯಕರಾಗಿದ್ದಾರೆ. ಅವರಿಗೆ ಜೋಡಿಯಾಗಿ ಅಹಲ್ಯ ಮತ್ತು ಸ್ವಾತಿಕೊಂಡೆ ನಟಿಸಿದ್ದಾರೆ. ಇನ್ನು ತಿಥಿ’ ಖ್ಯಾತಿಯ ಕಲಾವಿದ ಗಡ್ಡಪ್ಪ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಇದೊಂದು ಸಸ್ಪೆನ್ಸ್ ಮತ್ತು ಹಾರರ್ ಚಿತ್ರವಾಗಿದ್ದು, ಚೆಕ್ ಪೋಸ್ಟ್ ಬಳಿ ನಡೆದ ಅಪಘಾತವೊಂದರ ಸತ್ಯಘಟನೆ ಆಧರಿಸಿ ಚಿತ್ರ ಮಾಡಲಾಗುತ್ತಿದೆ. ನಿರ್ದೇಶಕ ಪರಮೇಶ್ ಅವರ ಗೆಳೆಯರೊಬ್ಬರ ಜೀವನದಲ್ಲಿ ನಡೆದ ಅಪಘಾತದ ಬಳಿಕ ಏನೆಲ್ಲಾ ಆಯಿತೆಂದು ಈ ಚಿತ್ರದ ಮೂಲಕ ತೋರಿಸಲಾಗುತ್ತಿದೆ.

ಇನ್ನು ಚಿತ್ರದ ಹೆಸರು ಕೇಳುತ್ತಿದ್ದಂತೆ ‘ರಂಗಿತರಂಗ’ ಚಿತ್ರದ ಹಾಡು ನೆನಪಾಗುತ್ತದೆ. ಇದೀಗ ಇದೇ ಹೆಸರನ್ನು ಇಟ್ಟುಕೊಂಡು ‘ಮಾಮು ಟೀ ಅಂಗಡಿ’ ಚಿತ್ರದ ನಿರ್ದೇಶಕ ಪರಮೇಶ್ ಈ ಚಿತ್ರವನ್ನು ಮಾಡಿದ್ದಾರೆ.

ರುಚಿಕರವಾದ ಆಹಾರಕ್ಕಾಗಿ ಈ ಸುಂದರ ಬೀಚ್ ಗಾಗಿ ಇಲ್ಲಿಗೆ ಬೇಟಿ ನೀಡಿ ಎಂದ ಸಿಂಡ್ರೆಲಾ!!

#naveenakrishna, #filmsongs, #balkaninews #kannadasuddigalu, #sanath, #uptal

Tags

Related Articles