ಸುದ್ದಿಗಳು

‘ಚಾರ್ಲಿ ಚಾಪ್ಲಿನ್’ ಚಿತ್ರಕ್ಕೆ ನಾಯಕನಟರಾದ ಬಿಗ್ ಬಾಸ್ ಖ್ಯಾತಿಯ ಗಾಯಕ ನವೀನ್ ಸಜ್ಜು..!

‘ಕೆಮೆಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ನಿರ್ದೇಶಕರ ಸಿನಿಮಾ

ಬೆಂಗಳೂರು.ಮೇ.15: ‘ಕನ್ನಡ ಬಿಗ್ ಬಾಸ್ 6’ ಖ್ಯಾತಿಯ ಸ್ಪರ್ಧಿ, ಗಾಯಕ ಮತ್ತು ಸಂಗೀತ ನಿರ್ದೇಶಕ ನವೀನ್ ಸಜ್ಜು ಇದೀಗ ಮತ್ತೊಂದು ಸಾಧನೆ ಮಾಡಲು ಸಜ್ಜಾಗುತ್ತಿದ್ದಾರೆ. ಹೌದು, ನವೀನ್ ಸಜ್ಜು ಅವರೀಗ ‘ಚಾರ್ಲಿ ಚಾಪ್ಲಿನ್’ ಹೆಸರಿನ ಚಿತ್ರದ ಮೂಲಕ ನಾಯಕನಟರಾಗಿ ಎಂಟ್ರಿ ಕೊಡುತ್ತಿದ್ದಾರೆ.

Related image

ಈ ಹಿಂದೆ ನವೀನ್ ಸಜ್ಜು ತಮಗೆ ನಾಯಕನಟರಾಗಿ ಮಿಂಚಬೇಕೆಂಬ ಆಸೆಯಿದೆ ಎಂದಿದ್ದರು. ಅದೀಗ ನೆರವೇರುತ್ತಿದೆ. ಇನ್ನು ‘ಕೆಮೆಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಬಳಿಕ ಕುಮಾರ್ ಇದೀಗ ‘ಚಾರ್ಲಿ ಚಾಪ್ಲಿನ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ನವೀನ್ ಸಜ್ಜು ಕಾಣಿಸಿಕೊಳ್ಳುತ್ತಿದ್ದಾರೆ.

Image result for naveen sajju music director

‘ಚಾರ್ಲಿ ಚಾಪ್ಲಿನ್’… ಎಂಬ ಹೆಸರಿಗೆ ತಕ್ಕಂತೆ ಇದೊಂದು ಕಾಮಿಡಿ ಚಿತ್ರವಾಗಿದ್ದು, ಹಾಸ್ಯ ಭರಿತ ಈ ಔಟ್ ಆ್ಯಂಡ್ ಔಟ್ ಮನರಂಜನೆಯ ಸಿನಿಮಾದಲ್ಲಿ ನವೀನ್ ನಾಯಕನಾಗಿ ಮಿಂಚಲಿದ್ದಾರೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಖುಷಿಯಲ್ಲಿರುವ ನಿರ್ದೇಶಕ ಕುಮಾರ್ ಅದೆ ಸಂತಸದಲ್ಲಿ ‘ಚಾರ್ಲಿ ಚಾಪ್ಲಿನ್’ ಕೈಗೆತ್ತಿಕೊಂಡಿದ್ದಾರೆ.Image result for naveen sajju music directorಹೌದು, ಇದೊಂದು ಜರ್ನಿ ಬೇಸ್ಡ್ ಸಿನಿಮಾವಾಗಿದೆ. ಬೆಂಗಳೂರಿನಿಂದ ಮಡಿಕೇರಿಗೆ ಹೋಗುವ ಒಂದು ತಂಡ ಅಲ್ಲಿ ಏನೆಲ್ಲ ಆಗುತ್ತದೆ ಎಂಬುವುದನ್ನು ‘ಚಾರ್ಲಿ ಚಾಪ್ಲಿನ್’ ಚಿತ್ರದ ಮೂಲಕ ನಿರ್ದೇಶಕರು ತೋರಿಸಲಿದ್ದು, ಚಿತ್ರಕ್ಕೆ ನಾಯಕಿಯಾಗಿ ಸಂಜನಾ ಆನಂದ್ ನಟಿಸುತ್ತಿದ್ದಾರೆ.

ಅಂದ ಹಾಗೆ ‘ಲೂಸಿಯಾ’ ಚಿತ್ರದ ಮೂಲಕ ಗಾಯಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನವೀನ್, ‘ಏನ್ ನಿನ್ ಪ್ರಾಬ್ಲಮ್’ ಹಾಗೂ ‘ಕನಕ’ ಚಿತ್ರದಿಂದ ಸಂಗೀತ ನಿರ್ದೇಶಕರಾದರು. ‘ಬಿಗ್ ಬಾಸ್’ ರಿಯಾಲಿಟಿ ಶೋನಲ್ಲಿ ರನ್ನರ್ ಆಪ್ ಆಗಿಯೂ ಹೆಸರು ಮಾಡಿದರು. ಇದೀಗ ಬೆಳ್ಳಿತೆರೆಯ ಮೇಲೆ ಹೀರೋ ಆಗಿ ಮಿಂಚುವುದಕ್ಕೆ ತಯಾರಿ ನಡೆಸಿದ್ದಾರೆ. ಇವರೊಂದಿಗೆ ತಬಲಾ ನಾಣಿಯವರು ಸಹ ಇರಲಿದ್ದಾರೆ.

ವಿಜಯ್ ದೇವರಕೊಂಡ ಅತ್ತಿದ್ಯಾಕೆ?

#naveensajju, #now, #hero, #balkaninews #filmnews, #kannadasuddigalu

Tags