ಸುದ್ದಿಗಳು

ಮಣಿರತ್ನಂ ಸಿನಿಮಾದಲ್ಲಿ ಮಲ್ಟಿಸ್ಟಾರ್ಸ್ ಫುಲ್ ಮಿಂಚಿಂಗ್!

ಇಂಡಿಯನ್ ಲೆಜೆಂಡರಿ ಡೈರೆಕ್ಟರ್ ಮಣಿರತ್ನಂ ಅವರು ನೂತನ ಕಥೆಯೊಂದಿಗೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಮಣಿರತ್ನಂ  ಅವರು ತಮ್ಮ ಸಂಪ್ರದಾಯದಂತೆ ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ದೇಶನ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಹರ್ಷದ ಹೊನಲಿನಲ್ಲಿ ಸಂಭ್ರಮದ ಮನೆ ಮಾಡಿದೆ ಎನ್ನಲಾಗಿದೆ.

ತೆಲುಗಿನಲ್ಲಿ ‘ನವಾಬ್’ ಹಾಗು ತಮಿಳಿನಲ್ಲಿ ‘ಚೆಕ್ಕ ಚೀವಂತ ವಾನಂ’ ಎನ್ನುವ ಶೀರ್ಷಿಕೆಯೊಂದಿಗೆ ಏಕಕಾಲದಲ್ಲಿ ತೆರೆ ಕಾಣಲು ಪೂರ್ವ ತಯಾರಿ ನಡೆಸುತ್ತಿದೆ ಎಂದು ಮಣಿರತ್ನಂ ಫಿಲ್ಮ್ ಪ್ಯಾಕ್ಟರಿಯಲ್ಲಿ ಗುಸು ಗುಸು ಶರುವಾಗಿದೆ.

ಈ ಸಿನಿಮಾದಲ್ಲಿ ‘ರೋಜಾ’ ಸಿನಿಮಾದ ಖ್ಯಾತಿಯ ಅರವಿಂಧ ಸ್ವಾಮಿ , ಹಾಗು ಶಿಂಬು,ವಿಜಯ್ ಸೇತುಪತಿ,ಅರುಣ್ ವಿಜಯ್, ಜ್ಯೋತಿಕಾ, ಅದಿತಿ ರಾವ್, ಐಶ್ವರ್ಯ ರಾಜೇಶ್, ಪ್ರಕಾಶ್ ರಾಜ್, ಜಯಸುದಾ ಸೇರಿದಂತೆ ಹಲವಾರು ನಟ ನಟಿಯರು ದೊಡ್ಡ ತಾರಾಗಣದೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಲೈಕಾ ಪ್ರೊಡಕ್ಷನ್ಸ್ ಹಾಗು ಮದ್ರಾಸ್ ಟಾಕೀಸ್ ಸಂಯುಕ್ತದಲ್ಲಿ ನಿರ್ಮಿಸುತ್ತಿರುವ  ಈ ಸಿನಿಮಾಕ್ಕೆ ಇಂಡಿಯನ್ ಮ್ಯೂಸಿಕ್ ಲೆಜಂಡರಿ ಎ.ಆರ್.ರೆಹಮಾನ್ ಅವರು ಸಂಗೀತ ಸಂಯೋಜಿಸಲಿದ್ದಾರೆ. ವಿಶೇಷವಾಗಿ ಈ ಸಿನಿಮಾದಲ್ಲಿ ನಾಲ್ಕು ಜನರ ಜೀವನವನ್ನು ವಿಶ್ಲೇಷಿಸುವುದರ ಮೂಲಕ ಪ್ರಸ್ತುತ ಸಾಮಾಜಿಕ ಹಾಗು ರಾಜಕೀಯ ಸಮಸ್ಯೆಗಳನ್ನು ಸೇರಿಸಿ ಕಥೆ ಎಣೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಗು ಈ ಚಿತ್ರದ ಚಿತ್ರೀಕರಣ ಪ್ರಸ್ತುತ ಚೆನ್ನೈನಲ್ಲಿ ಭರದಿಂದ ಸಾಗುತ್ತಿದ್ದು ಶೀಘ್ರದಲ್ಲೇ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ.

Tags