ಸುದ್ದಿಗಳು

ನಯನಾ ತಾರ ಈ ವರ್ಷ ಮದುವೆಯಾಗುತ್ತಾರಂತೆ, ಭವಿಷ್ಯ ನುಡಿದ ಜ್ಯೋತಿಷಿ

ನಟಿ ನಯನಾ ತಾರ ಈ ವರ್ಷ ಮದುವೆಯಾಗುತ್ತಾರಂತೆ! ಹೀಗೆಂದು ಹೇಳಿದವರು ಯಾರು ಗೊತ್ತಾ? ತಮಿಳುನಾಡಿನ ಖ್ಯಾತ ಜ್ಯೋತಿಷಿ. ಅವರ ಬಳಿ ನಯನಾ ತಾರ ಜಾತಕವಿದ್ದು, ಆ ಪ್ರಕಾರ ಈ ವರ್ಷ ನಯನಾ ತಾರ ಮದುವೆಯಾಗಲಿದ್ದಾರಂತೆ.

ಅಂದಹಾಗೆ ಈ ಯಂಗ್ ಜ್ಯೋತಿಷಿ ಬಾಲಾಜಿ ಅವರು ವರ್ಲ್ಡ್ ಕಪ್ ಬಗ್ಗೆ ಭವಿಷ್ಯ ನುಡಿದು ರಾತ್ರೋ ರಾತ್ರಿ ಸುದ್ದಿಯಾದರು. ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಇವರು ಸೆಮಿ ಫೈನಲ್ ಗೆ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಬರುತ್ತವೆ ಅಂದಿದ್ದರು. ಅವರು ಹೇಳಿದ ಹಾಗೆ ಟಾಪ್ 4 ನಲ್ಲಿ ಇಷ್ಟು ದೇಶಗಳು ಇದ್ದವು. ಅಷ್ಟೇ ಅಲ್ಲ, ಸೆಮಿ ಫೈನಲ್ ನಲ್ಲಿ ಭಾರತ ನ್ಯೂಜಿಲೆಂಡ್ ಅಥವಾ ಇಂಗ್ಲೆಂಡ್ ಜೊತೆ ಸೆಣಸಾಡುತ್ತದೆ ಅಂದಿದ್ದರಂತೆ. ಮುಂದೇನಾಯ್ತು ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ…

Image result for nayanthara vignesh shivan

ನಯನಾ ತಾರ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸುತಿದ್ದು, ಅವರಿಬ್ಬರು ಜೊತೆಗಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ‘ನಾನುಂ ರೌಡಿ ಥಾನ್’ ಚಿತ್ರದಲ್ಲಿ ವಿಘ್ನೇಶ್ ಶಿವನ್ ಹಾಗೂ ನಯನಾ ತಾರ ಒಟ್ಟಿಗೆ ಕೆಲಸ ಮಾಡಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಒಟ್ಟಾರೆ ಜ್ಯೋತಿಷಿ ಬಾಲಾಜಿ ಅವರ ಪ್ರಕಾರ, ನಯನತಾರಾ ಅವರ ವಿವಾಹ ಸುದ್ದಿ ಸದ್ಯದಲ್ಲೇ ಕೇಳಿಬರಲಿದೆ.

‘ನನ್ನನ್ನು ಅಸಿಸ್ಟೆಂಟ್ ಡೈರೆಕ್ಟರ್ ತರಹ ನೋಡು’ ಎಂದು ವಿಕ್ರಮ್ ಮಗನಿಗೆ ಹೇಳಿದ್ದೇಕೆ?

#balkaninews #nayanthara #marriage #astrologerbalajihassan

Tags