ಸುದ್ದಿಗಳು

25 ನೇ ಚಿತ್ರದ ತಯಾರಿಯಲ್ಲಿ ‘ನೆನಪಿರಲಿ’ ಪ್ರೇಮ್

ಬರೋಬ್ಬರಿ ನಾಲ್ಕು ಗೆಟಪ್ ಗಳಲ್ಲಿ ನಟಿಸುತ್ತಿರುವ ಪ್ರೇಮ್

ಬೆಂಗಳೂರು.ಮಾ.16: ‘ಪ್ರಾಣ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟ ಪ್ರೇಮ್ ಕುಮಾರ್. ನಂತರ ನಟಿಸಿದ ‘ನೆನಪಿರಲಿ’, ‘ಜೊತೆ ಜೊತೆಯಲಿ’ ಹಾಗೂ ‘ಪಲ್ಲಕ್ಕಿ’ ಚಿತ್ರಗಳು ಯಶಸ್ವಿಯಾದವು. ಹಾಗೆಯೇ ಪ್ರೇಕ್ಷಕರ ಮನಸ್ಸನ್ನು ಗೆದ್ದರು. ವಿಶೇಷವೆಂದರೆ, ಈಗ ಅವರು 25 ನೇ ಚಿತ್ರದ ಸಿದ್ದತೆಯಲ್ಲಿದ್ದಾರೆ.

ಹೌದು , ‘ನೆನಪಿರಲಿ’ ಪ್ರೇಮ್ ಅತಿ ಕಡಿಮೆ ಅವಧಿಯಲ್ಲಿಯೇ 24 ಚಿತ್ರಗಳನ್ನು ಪೂರೈಸಿದ್ದು, 25 ನೇ ಚಿತ್ರದತ್ತ ಗಮನ ಹರಿಸಿದ್ದಾರೆ. ಈಗಾಗಲೇ ಚಿತ್ರವು ಶುರುವಾಗುತ್ತಿದ್ದು, ಚಿತ್ರಕ್ಕೆ ನ್ಯೂರೋಲಾಜಿಸ್ಟ್ ಆಗಿರುವ ಡಾ. ರಾಘವೇಂದ್ರ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಪ್ರೇಮ್ ನಾಲ್ಕು ವಿಭಿನ್ನ ಬಗೆಯ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನೂ ಹೆಸರಿಡದ ಈ ಹೊಸ ಚಿತ್ರದ ಬಗ್ಗೆ ಈಗಾಗಲೇ ಕುತೂಹಲ ಹೆಚ್ಚಾಗಿದೆ. ಚಿತ್ರದ ಬಗ್ಗೆ ಹೆಚ್ಚೇನು ಬಿಟ್ಟುಕೊಡದ ಚಿತ್ರತಂಡ ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇನ್ನು ತಮ್ಮ 25ನೇ ಸಿನಿಮಾ ಸ್ವಲ್ಪ ವಿಭಿನ್ನವಾಗಿರಬೇಕೆಂದು ಸಿನಿಮಾ ನಿರ್ದೇಶನದ ಹೊಣೆಯನ್ನು ಹೊಸ ನಿರ್ದೇಶಕರಿಗೆ ಕೊಟ್ಟಿದ್ದಾರೆ ಪ್ರೇಮ್.

ಇನ್ನು ರತ್ನಜ ನಿರ್ದೇಶನದ ‘ನೆನಪಿರಲಿ’ ಚಿತ್ರದ ಮೂಲಕ ಸ್ಟಾರ್ ಆದವರು ಪ್ರೇಮ್. ಅದೇ ಸಿನಿಮಾದ ನಟನೆಗಾಗಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಸಹ ಪಡೆದಿದ್ದರು. ಅಲ್ಲಿಂದ ಸುಮಾರು ಏಳು ಬೀಳುಗಳನ್ನು ಕಂಡಿದ್ದರು. ಕಳೆದ ವರ್ಷ ಅವರ ‘ಲೈಫ್ ಜೊತೆ ಒಂದು ಸೆಲ್ಪೀ’ ಬಿಡುಗಡೆಯಾಗಿತ್ತು. ಈಗ 25 ನೇ ಸಿನಿಮಾ ಶುರುವಾಗುತ್ತಿದೆ, ಅವರಿಗೆ ಶುಭವಾಗಲಿ.

ದರ್ಶನ್ ರವರಿಂದ ಬಿಡುಗಡೆಯಾಯ್ತು ಚಿರು ಅಭಿನಯದ ‘ಸಿಂಗ’ ಟೀಸರ್ ಲಾಂಚ್

#nenapiraliprem, #25thmovie, #balkaninews #kannadasuddigalu, #pallakki,

Tags