ಸುದ್ದಿಗಳು

ಸೇಡಿನ ಕಥೆ ಹೇಳಲು ಬಂದ ಹೊಸಬರು

ಉತ್ತರ ಕರ್ನಾಟಕ ಭಾಗದಲ್ಲಿ ಸೇಡು ಎನ್ನುವುದನ್ನು ಆಡುಮಾತಿನಲ್ಲಿ ‘ಸೇಡ್’ ಎನ್ನುತ್ತಾರೆ. ಅದೇ ರೀತಿ ಈ ‘ಸೇಡ್’ ಚಿತ್ರವು ರಿವೇಂಜ್ ಗೆ ಸಂಬಂಧಪಟ್ಟ ಕಥೆಯಂತೆ.

ಬೆಂಗಳೂರು, ಅ. 01: ಕನ್ನಡದಲ್ಲಿ ಈಗಾಗಲೇ ಸತ್ಯ ಘಟನೆ ಆಧರಿತ ಚಿತ್ರಗಳು ಚಿತ್ರಗಳು ಬಂದಿವೆ. ಅವುಗಳ ಸಾಲಿನಲ್ಲಿ ‘ಸೇಡ್’ ಎಂಬ ಶೀರ್ಷಿಕೆಯನ್ನಿಟ್ಟುಕೊಂಡ ಹೊಸಬರ ತಂಡವೊಂದು ಚಂದನವನದ ಅಂಗಳಕ್ಕೆ ಬಂದು ನಿಂತಿದೆ.

ರಿವೇಂಜ್ ಕಥೆ

ಇದೊಂದು ಪ್ರಯಾಣದ ಸುತ್ತ ಹೆಣೆದ ಕಥೆಯಾಗಿದ್ದು ಕಥೆಯು ದೆಹಲಿಯಿಂದ ದಾವಣಗೆರೆಗೆ ಸಾಗುವ ಜರ್ನಿಯ ಕಥೆಯನ್ನು ಒಳಗೊಂಡಿದೆ. “ಚಿತ್ರದಲ್ಲಿ ಒಟ್ಟು ಐವರು ಸ್ನೇಹಿತರು ಇಬ್ಬರು ನಾಯಕಿಯರಿದ್ದು, ಶೇ. 90 ಭಾಗ ಬರೀ ಸುತ್ತಾಟ, ಇನ್ನುಳಿದ ಭಾಗದಲ್ಲಿ ಕಾಲೇಜು, ಪಾರ್ಟ್ಟೈಮ್ ಕೆಲಸದಂತಹ ಪ್ರಸಂಗಗಳನ್ನು ಚಿತ್ರದಲ್ಲಿ ತೋರಿಸಲಾಗುತ್ತಿದ್ದು, ನಮ್ಮ ಚಿತ್ರವು ನೈಜ ಘಟನೆಯನ್ನು ಆಧರಿಸಿದೆ” ಎಂದು ಚಿತ್ರತಂಡದವರು ಹೇಳುತ್ತಾರೆ.

ಸೇಡು

ಉತ್ತರಕರ್ನಾಟಕ ಭಾಗದಲ್ಲಿ ಸೇಡು ಎನ್ನುವುದನ್ನು ಆಡುಮಾತಿನಲ್ಲಿ ಸೇಡ್ ಎನ್ನುತ್ತಾರೆ. ಅದೇ ರೀತಿ ಈ ಚಿತ್ರವು ಸೇಡಿಗೆ ಸಂಭಂದ ಪಟ್ಟಿದ್ದರಿಂದ ಚಿತ್ರಕ್ಕೆ ಸೇಡ್ ಎಂಬ ಹೆಸರನ್ನು ಇಟ್ಟಿದ್ದಾರಂತೆ.

ತಾರಾಬಳಗ

ಚಿತ್ರಕ್ಕೆ ಯುವರಾಜ್. ಜೆ.ಎಸ್. ಮಹೇಶ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಬಿಹಾರ ಮೂಲದ ರಿಪ್ಪನ್ ಕುಮಾರ್ ಗುಪ್ತ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಾಯಕ ಯುವರಾಜ್ ನಿಗೆ ನಾಯಕಿಯಾಗಿ ಬೀದರ್ ಮೂಲದ ಸುಲಕ್ಷಾ ನಟಿಸಿದರೆ, ರತ್ನಾ ಎಂಬುವವರು ನೆಗೆಟಿವ್ ಪಾತ್ರ ನಿಭಾಯಿಸಿದ್ದಾರೆ. ವಿಜಯ್ ಕಾರ್ತಿಕ್, ಶ್ರೀನಿಧಿ, ಲಕ್ಷ್ಮೀಶ, ಯತೀಶ್ ಅವರುಗಳು ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಲ್.ಎನ್.ಶಾಸ್ತ್ರಿ ಸಂಗೀತ, ರವಿಕುಮಾರ್ ಛಾಯಾಗ್ರಹಣ ಮಾಡಿದ್ದಾರೆ.

Tags