ಸುದ್ದಿಗಳು

ರಮೇಶ್ ಸುರೇಶ್… ಚಂದನವನದಲ್ಲೊಂದು ಪ್ರಯೋಗಾತ್ಮಕ ಸಿನಿಮಾ

ಚಿತ್ರರಂಗಕ್ಕೆ ದಿನದಿಂದ ದಿನಕ್ಕೆ ಹೊಸಬರು ಹೊಸ ಹೊಸ ಪ್ರಯೋಗಗಳೊಂದಿಗೆ ಬರುತ್ತಿದ್ದಾರೆ. ಹಾಗೆಯೇ ಇಲ್ಲೊಂದು ಹೊಸಬರ ತಂಡ ‘ರಮೇಶ್ ಸುರೇಶ್’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಹೌದು, ಇದೊಂದು ಹೊಸಬರ ತಂಡದ ಸಿನಿಮಾವಾಗಿದ್ದು, ಚಿತ್ರದಲ್ಲಿ ಕಿಶೋರ್ ಮತ್ತು ಸಾಧು ಕೋಕಿಲಾ ಹೊರತು ಪಡಿಸಿ, ನಿರ್ದೇಶಕ, ನಟರು ಹಾಗೂ ತಂತ್ರಜ್ಞರೆಲ್ಲಾ ಹೊಸಬರೇ ಆಗಿದ್ದಾರೆ.

ಹೆಸರಿಗೆ ತಕ್ಕಂತೆ ಚಿತ್ರದಲ್ಲಿ ಇಬ್ಬರು ನಾಯಕನಟರಿದ್ದಾರೆ, ಇದೊಂದು ಹಾಸ್ಯ ಮತ್ತು ಥ್ರಿಲ್ಲರ್ ಕಥಾನಕವನ್ನು ಒಳಗೊಂಡಿದ್ದು, ಚಿತ್ರದಲ್ಲಿ ಸಾಮಾಜಿಕ ಮಾಧ್ಯಮದ ಕಥೆಯೂ ಇದೆ. ಚಿತ್ರದಲ್ಲಿ ಬೆನಕ್ ಗುಬ್ಬಿ ವೀರಣ್ಣ ಮತ್ತು ಯಶು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಕಿಶೋರ್ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇನ್ನು ಚಿತ್ರಕ್ಕೆ ನಾಯಕಿಯಾಗಿ ಚಂದನ ಸೇಗು ನಾಯಕಿಯಾಗಿ ನಟಿಸಿದ್ದಾರೆ,ಇವರು ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದು, ಇದು ಇವರ ಮೊದಲ ಸಿನಿಮಾವಾಗಿದೆ. ಇನ್ನು ಚಿತ್ರಕ್ಕೆ ನವನೀತ್ ಸಂಗೀತ, ವಿಶ್ವಜಿತ್ ರಾವ್ ನೃತ್ಯ ನಿರ್ದೇಶನ ಮಾಡಿದ್ದಾರೆ.

“ಸೈರಾ” ಚಿತ್ರತಂಡದಿಂದ ಹೊರಬಿತ್ತು ಸಿಹಿ ಸುದ್ದಿ…!!!

#newcommers #Rameshsuresh  #kannadafilm, #kannadamovie,

Tags