ಸುದ್ದಿಗಳು

ಹೊಸಬರ ಪ್ರೀತಿಯ ಕಥನ

ಚಿತ್ರರಂಗಕ್ಕೆ ದಿನದಿಂದ ದಿನಕ್ಕೆ ಹೊಸಬರ ಆಗಮನವಾಗುತ್ತಲೇ ಇರುತ್ತದೆ. ಅದರಂತೆ ಇಲ್ಲೊಂದು ಹೊಸಬರ ತಂಡ ‘ಸ್ವೇಚ್ಛಾ’ ಎಂಬ ಟೈಟಲ್ ವೊಂದರ ಸಿನಿಮಾ ಮೂಲಕ ಕಾಲಿಟ್ಟಿದೆ.

ಹೌದು, ಇದೊಂದು ಪ್ರೀತಿಯ ಕಥನ ಒಳಗೊಂಡ ಸಿನಿಮಾವಾಗಿದ್ದು, ಹಳ್ಳಿಯಲ್ಲಿ ಮುಗ್ಧ ಹುಡುಗ ಪ್ರೀತಿಯಲ್ಲಿ ಬಿದ್ದಾಗ, ಯುವ ಪ್ರೇಮಿಗಳ ಮಧ್ಯದಲ್ಲಿ ಆಕೆಯ ತಂದೆ ರಾವಣನ ಪ್ರತಿರೋಷವನ್ನು ತೋರಿಸುತ್ತಾನೆ.

ಆಗ ‘ಸ್ವೇಚ್ಛಾ’ ಹೆಸರಿನ ಬಾಲಕಿಯೊಬ್ಬಳು ಅಮ್ಮ ಹೇಳಿದ್ದನ್ನು ಪಾಲಿಸುವ ಮಗಳು, ಈ ಪ್ರೇಮಿಗಳಿಗೂ ಈ ಬಾಲಕಿಗೂ ಏನು ಸಂಬಂಧವೆಂದು ಸಿನಿಮಾ ನೋಡಿಯೇ ತಿಳಿಯಬೇಕು.

ಇನ್ನು ಈ ಚಿತ್ರದ ಬಹುತೇಕ ಕಥೆ ಮತ್ತು ಸನ್ನಿವೇಶಗಳು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತದೆ. ಈಗಾಗಲೇ ಸಿನಿಮಾ ಮುಗಿದಿದ್ದು, ಸೆನ್ಸಾರ್ ಮನೆಯ ಅಂಗಳದಲ್ಲಿದೆ. ಇನ್ನು ಚಿತ್ರದಲ್ಲಿಹಿತೇಶ್ , ಪವಿತ್ರಾ ನಾಯಕ್ , ಸ್ಪಂದನಾ, ಪ್ರಕಾಶ್, ಬೇಬಿ ಶ್ರೀ, ಮಾಲಾಶ್ರೀ ಮೊದಲಾದವರು ಅಭಿನಯಿಸಿದ್ದಾರೆ.

ಸ್ಯಾಂಡಲ್ ವುಡ್ ಸ್ಟಾರ್ಸ್ ವರಮಹಾಲಕ್ಷ್ಮಿ ಹಬ್ಬ!!

#swecchamovie #swecchamovienews  #kannadafilm, #kannadamovie, #kannadanews, #kannadanewmovie, #kannadacine, #latestkannadamovie,

Tags