ಸುದ್ದಿಗಳು

ಚಂದನವನಕ್ಕೆ ಪಾದಾರ್ಪಣೆ ಮಾಡಿದ ಮತ್ತೊಬ್ಬ ಮಹಿಳಾ ನಿರ್ದೇಶಕಿ

ಕನ್ನಡ ಚಿತ್ರರಂಗದಲ್ಲಿ ವಿಜಯ ಲಕ್ಷ್ಮಿ ಸಿಂಗ್ , ಕವಿತಾ ಲಂಕೇಶ್, ಸಂಜೋತಾ, ಕ್ವಾಟ್ಲೇ ಚಂದ್ರಕಲಾ, ರೂಪಾ ಅಯ್ಯರ, ಸುಮನಾ ಕಿತ್ತೂರ, ಪ್ರಿಯಾ ಬೆಳ್ಳಿಯಪ್ಪ, ಆಧ್ಯಾ ಗೌಡ, ಐಶಾನಿ ಶೆಟ್ಟಿ ಇವರೆಲ್ಲರೂ ಚಲನಚಿತ್ರಗಳನ್ನು ನಿರ್ದೇಶಿಸಿ ಸೈ ಅನಿಸಿಕೊಂಡಿದ್ದು , ತಮ್ಮದೇ ಆದಂತ ಚಾಪನ್ನೂ ಸಹ ಮೂಡಿಸಿದ್ದಾರೆ. ಈಗ ಇವರೆಲ್ಲರ ಹಾದಿಯಲ್ಲಿ ಉಷಾ ಅಲಿಯಾಸ್ ಅದಿತಿ ಮಹಾದೇವ್ ಎಂಟ್ರಿಯಾಗುತ್ತಿದ್ದಾರೆ.

ಹೌದು, ‘ಶ್ರೀ’ ಚಿತ್ರದ ಮೂಲಕ ಉಷಾ ನಿರ್ದೇಶಕಿಯಾಗಿ ಭಡ್ತಿ ಪಡೆಯುತ್ತಿದ್ದಾರೆ. ಇವರು ಕೆಲಕಾಲ ವಾಹಿನಿಗಳಲ್ಲಿ ನಿರೂಪಕಿಯಾಗಿ ಹಾಗೂ ಪತ್ರಕರ್ತೆಯಾಗಿ ಕೆಲಸ ಮಾಡಿದ್ದಾರೆ. ಇನ್ನು ಈ ಚಿತ್ರಕ್ಕೆ ‘ಲಕ್ಷ್ಮಿ ಬಾರಮ್ಮ’ ಧಾರವಾಹಿಯ ಖ್ಯಾತಿಯ ನಟ ಚಂದ್ರು ಗೌಡ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ರಾಘವೇಂದ್ರ ರಾಜಕುಮಾರ್ ಚಿತ್ರದಲ್ಲಿ ನಾಯಕನ ತಂದೆಯಾಗಿ ಅಭಿನಯಿಸುತ್ತಿದ್ದಾರೆ.

ಅಂದ ಹಾಗೆ ಇತ್ತಿಚೆಗಷ್ಟೇ ಈ ಚಿತ್ರದ ಮುಹೂರ್ತವಾಗಿದ್ದು, ‘ಕಮರೊಟ್ಟು ಚೆಕ್ ಪೋಸ್ಟ್’ ಚಿತ್ರದ ಖ್ಯಾತಿಯ ನಿರ್ದೇಶಕ ಪರಮೇಶ್ ಈ ಚಿತ್ರಕ್ಕೆ ಕತೆ, ಚಿತ್ರಕತೆ ಬರೆದಿದ್ದಾರೆ. ಇನ್ನು ಚಿತ್ರಕ್ಕೆ ಅನೂಪಾ ಸತೀಶ್ ನಾಯಕಿಯಾಗಿದ್ದಾರೆ.

‘ಯುವರತ್ನ’ ಟೀಸರ್ ಗೆ ಫಿದಾ ಆಗಿ ಕಿಚ್ಚ ಹೇಳಿದ್ದೇನು?

#WomenDirector #Aditimahadev #AditimahadevMovie #Shree #ShreeMovie #kannadaSuddigalu

Tags