ಸುದ್ದಿಗಳು

‘ಆರೆಂಜ್’ ಚಿತ್ರದ ಝಲಕ್ ಅನ್ನು ಶೇರ್ ಮಾಡಿದ ಗಣೇಶ್

ಜೂಮ್ ಚಿತ್ರದ ನಂತರ ನಟ ಗಣೇಶ್, ಹಾಗೂ ನಿರ್ದೇಶಕ ಪ್ರಶಾಂತ್ ರಾಜ್ ಮತ್ತೆ ಒಂದಾಗಿ ‘ಆರೆಂಜ್’ ಹೆಸರಿನ ಚಿತ್ರ ಮಾಡಿದ್ದಾರೆ.

ಇದೊಂದು ಅಪ್ಪಟ ಕನ್ನಡ ಚಿತ್ರ. ಸಖತ್‌ ಟ್ರೆಂಡಿಯಾಗಿರುತ್ತದೆ. ಶ್ರೀಮಂತ್ರ ಆಸೆಗಳು ಏನೇನಿರುತ್ತದೆ ಎಂದು ಈ ಚಿತ್ರದಲ್ಲಿ ಕಾಣಬಹುದು” ಎಂದು ಚಿತ್ರತಂಡ ಈಗಾಗಲೇ ಹೇಳಿಕೊಂಡಿದೆ.

ಬೆಂಗಳೂರು. ಜುಲೈ 18: ಜೂಮ್ ಚಿತ್ರದ ನಂತರ ನಟ ಗಣೇಶ್, ಹಾಗೂ ನಿರ್ದೇಶಕ ಪ್ರಶಾಂತ್ ರಾಜ್ ಮತ್ತೆ ಒಂದಾಗಿ ‘ಆರೆಂಜ್’ ಹೆಸರಿನ ಚಿತ್ರ ಮಾಡಿದ್ದಾರೆ. ಇದೀಗ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ನಟ ಗಣೇಶ್ ಹಾಡಿನ ಝಲಕ್ ಅನ್ನು ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ.

ಇದೊಂದು ಅಪ್ಪಟ ಕನ್ನಡ ಚಿತ್ರ

“ಆರೆಂಜ್‌’ ಚಿತ್ರವೂ “ಜೂಮ್‌’ಗಿಂಥ ಕಲರ್‌ ಫುಲ್ ಆಗಿರುವುದಷ್ಟೇ ಅಲ್ಲ, ಮನರಂಜನೆಯೂ ಹೆಚ್ಚಿರುತ್ತದೆ. “ತೆಲುಗಿನಲ್ಲೂ ಇಂಥದ್ದೇ ಒಂದು ಹೆಸರಿನ ಚಿತ್ರ ಬಂದಿದೆ. ಆದರೆ, ರಾಮ್‌ ಚರಣ್‌ ತೇಜ ಚಿತ್ರಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಅಪ್ಪಟ ಕನ್ನಡ ಚಿತ್ರ. ಸಖತ್‌ ಟ್ರೆಂಡಿಯಾಗಿರುತ್ತದೆ. ಶ್ರೀಮಂತ್ರ ಆಸೆಗಳು ಏನೇನಿರುತ್ತದೆ ಎಂದು ಈ ಚಿತ್ರದಲ್ಲಿ ಕಾಣಬಹುದು” ಎಂದು ಚಿತ್ರತಂಡ ಈಗಾಗಲೇ ಹೇಳಿಕೊಂಡಿದೆ.

ಹಾಡಿನಲ್ಲಿ ತಲ್ಲೀನರಾದ ಗೋಲ್ಡನ್ ಸ್ಟಾರ್

ಆರೆಂಜ್ ಚಿತ್ರದ ಹಾಡಿನ ಚಿತ್ರೀಕರಣದ 14 ಸೆಕೆಂಡಿನ ವಿಡಿಯೋವೊಂದನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ ಗಣೇಶ್, #ಆರೆಂಜ್ ಸಾಂಗ್ ಶೂಟ್.. ಪುಲ್ ಟಪ್ಪಾಂಗುಚ್ಚಿ..” ಎಂದು ಬರೆದಿದ್ದಾರೆ. ಜೊತೆಗೆ ಕಪ್ಪು ಬಟ್ಟೆ ಧರಿಸಿರುವ ಗಣೇಶ್, ಸಹ ನಟರೊಂದಿಗೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿಯಾಗಿದ್ದಾರೆ.

ಗಣೇಶ್ ರ ಮುಂದಿನ ಚಿತ್ರಗಳು

ಗಣೇಶ್ ಅವರು ಈಗಾಗಲೇ ‘ಆರೆಂಜ್’ ಚಿತ್ರದೊಂದಿಗೆ, ಗೀತಾ, ಗಿಮಿಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸದಭಿರುಚಿಯ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಗಣೇಶ್ ಹೇಳಿದ್ದಾರೆ.

 

@ sunil Javali

 

Tags