ಸುದ್ದಿಗಳು

ಪತ್ನಿಗೆ ದುಬಾರಿ ಕಾರ್ ಗಿಫ್ಟ್ ಕೊಟ್ಟ ನಿಖ್

ಮುಂಬೈ, ಮಾ.14:

ಸದ್ಯ ಪಾಪ್ ಸಿಂಗರ್ ನಿಖ್ ಹಾಗೂ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಪ್ರೀತಿಸಿ ಮದುವೆಯಾದ ಜೋಡಿ. ಕಳೆದ ವರ್ಷ ಅದ್ದೂರಿಯಾಗಿ ಮದುವೆಯಾದ ಈ ಜೋಡಿ, ಸದ್ಯ ಸಂತೋಷದಿಂದ ಜೀವನ ಕಳೆಯುತ್ತಿದ್ದಾರೆ. ಸದಾ ಕ್ಯಾಮರಾ ಕಣ್ಣಿಗೆ ಖುಷಿ ಖುಷಿಯಿಂದ ಕಾಣಿಸುವ ಈ ಜೋಡಿ ಇದೀಗ ಕಾರ್ ಮುಂದೆ ಕಾಣಿಸಿಕೊಂಡಿದ್ದಾರೆ. ತಮ್ಮ ಪತ್ನಿಗೆ ನಿಖ್ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕಾರ್ ಗಿಫ್ಟ್ ಮಾಡಿದ ನಿಖ್

ಹೌದು, ಪತ್ನಿ ಪ್ರಿಯಾಂಕಾಗೆ ನಿಕ್ ಜೋನಸ್ ಬರೋಬ್ಬರಿ 3 ಕೋಟಿ ರೂಪಾಯಿ ಮರ್ಸಡೀಸ್ ಬೆಂಝ್ ಮೇಬ್ಯಾಚ್ S650 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ನಿಕ್ ಜೋನಸ್ ಸಹೋದರರ ಪುನರಾಗಮನದ ಏಕಗೀತೆ ಬಿಲ್ಬೋರ್ಡ್ ಹಾಟ್ 100 ರಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇದರ ಸಂಭ್ರಮಾಚರಣೆಯಲ್ಲಿರುವ ನಿಕ್ ಜೋನಸ್ ಪತ್ನಿ ಪ್ರಿಯಾಂಕಾಗೆ ದುಬಾರಿ ಕಾರನ್ನೇ ಗಿಫ್ಟ್ ಆಗಿ ನೀಡಿದ್ದಾರೆ.

ನಟಿ ಪ್ರಿಯಾಂಕ ಚೋಪ್ರಾ ಟ್ವಿಟ್

ಸದ್ಯ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪಿಗ್ಗಿ ನನ್ನ ಹಬ್ಬಿ ಮೊದಲ ಸ್ಥಾನದಲ್ಲಿದ್ದಾರೆ. ಹಾಗಾಗಿ ನನಗೊಂದು ಗಿಫ್ಟ್ ಮಾಡಿದ್ದಾರೆ. ಎಕ್ಸ್ಟಾ ಚೋಪ್ರಾ ಜೋನಸ್ ಎಂದು ಕಾರಿಗೆ ಹೆಸರು ಇಟ್ಟಿದ್ದಾರೆ.. ಲವ್ ಯು ಬೇಬಿ ಎಂದಿದ್ದಾರೆ.

ಲಕ್ಷ್ಮೀಸ್ ಎನ್ ಟಿಆರ್ ಬಿಡುಗಡೆ ರದ್ದತಿಗೆ ಆರ್ ಜಿವಿಗೆ ಒತ್ತಡ..!

#balkaninews #bollywood #priyankachopra #nickjonas #priyankachopraandnickjonas #car #nickjonascargifttopriyankachopra

Tags

Related Articles