ಸುದ್ದಿಗಳು

ನಿಕ್ ಬಗ್ಗೆ ಮೌನ ಮುರಿದ ಮಾಜಿ ಪ್ರೇಯಸಿ ..

ಯಾರು, ಯಾವಾಗ ಬೇಕಾದರೂ ಪ್ರೀತಿಯನ್ನು ಪಡೆದುಕೊಳ್ಳಬಹುದು..

ನಿಕ್ ಮಾಜಿ ಪ್ರೇಯಸಿ ಒಲಿವಿಯಾ, ಪ್ರಿಯಾಂಕ-ನಿಕ್ ನಿಶ್ಚಿತಾರ್ಥದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮುಂಬೈ,ಸೆ.07: ಬಾಲಿವುಟ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕಾ ಹಾಡುಗಾರ ನಿಕ್ ಜೋನಸ್ ಇತ್ತೀಚಿಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆಗಸ್ಟ್ 18ರಂದು ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಇವರು ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.. ಮೊನ್ನೆಯಷ್ಟೇ ಪಿಗ್ಗಿ ಮಾವ ದಿವಾಳಿಯಂತೆ ಎಂಬ ಸ್ಪೋಟಕ ಮಾಹಿತಿ ಕೂಡ ಹೊರ ಬಂದಿತ್ತು. ಈಗ ಇದರ ಬೆನ್ನಲ್ಲೇ ಮತ್ತೊಂದು ಸುನಾಮಿ ಎದ್ದಿದೆ. ಆ ಸುನಾಮಿ ಬೇರಾರೂ ಅಲ್ಲ. ನಿಲ್ ಮಾಜಿ ಪ್ರೇಯಸಿ ನಿಕ್ ನಿಶ್ಚಿತಾರ್ಥದ ಬಗ್ಗೆ ಮೌನ ಮುರಿದಿದ್ದಾರೆ.

ಮೌನ ಮುರಿದ ನಿಕ್ ಮಾಜಿ ಪ್ರೇಯಸಿ..

ನಿಕ್ ಮಾಜಿ ಪ್ರೇಯಸಿ ಒಲಿವಿಯಾ, ಪ್ರಿಯಾಂಕ-ನಿಕ್ ನಿಶ್ಚಿತಾರ್ಥದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರು, ಯಾವಾಗ ಬೇಕಾದರೂ ಪ್ರೀತಿಯನ್ನು ಪಡೆದುಕೊಳ್ಳಬಹುದು. ಅದರಲ್ಲೂ ಸಿನಿಮಾ ಉದ್ಯಮದಲ್ಲಿ ಇದು ಸುಲಭ. ನಾನು ನಿಕ್ ವಿಚಾರದಲ್ಲಿ ಖುಷಿಯಾಗಿದ್ದೇನೆ. ಎಲ್ಲರಿಗೂ ಪ್ರೀತಿ, ಖುಷಿ ಸಿಗಲಿ ಎಂದು ಹಾರೈಸುತ್ತೇನೆ. ನಿಕ್ ನಿಂದ ದೂರವಿದ್ದ ಮಾತ್ರಕ್ಕೆ ಹಾರೈಸಬಾರದು ಎಂದೇನಿಲ್ಲವೆಂದು ಒಲಿವಿಯಾ ಹೇಳಿದ್ದಾರೆ.

Image result for olivia nick girl friend

ಮಿಸ್ ಯೂನಿವರ್ಸ್

ಒಲಿವಿಯಾ 2012ರಲ್ಲಿ ಮಿಸ್ ಯೂನಿವರ್ಸ್ ಆಗಿದ್ದರು. ಎರಡು ವರ್ಷಗಳ ಡೇಟಿಂಗ್ ನಂತ್ರ 2015ರಲ್ಲಿ ನಿಕ್-ಒಲಿವಿಯಾ ಬೇರ್ಪಟ್ಟಿದ್ದರು. ಒಲಿವಿಯಾ ಸದ್ಯ ಅಮೆರಿಕನ್ ಫುಟ್ಬಾಲ್ ಆಟಗಾರ ಡೇನಿಯಲ್ ಜೇಮ್ಸ್ ಅಮೆಂಡೊಲಾ ಜೊತೆ ಡೇಟಿಂಗ್ ನಲ್ಲಿದ್ದಾಳೆ. ಅಂತೂ ಇಂತೂ ಪಿಗ್ಗಿ ಹಾಗೂ ನಿಕ್ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾಳೆ ಒಲಿವಿಯಾ..

 

Tags

Related Articles