ಸುದ್ದಿಗಳು

ನಿಕ್ ಸೋದರಸಂಬಂಧಿ ಮದುವೆಯಲ್ಲಿ ಪ್ರಿಯಾಂಕಾ!!

ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೊನಾಸ್ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿ ಈಗ ಬಿ ಟೌನ್ ನಲ್ಲಿ ಹರಿದಾಡುತ್ತಿದೆ. , ಇದಕ್ಕೆ ಸಾಕ್ಷಿಯಂತೆ ಹಲವಾರು ಫೋಟೋಗಳು ಜಾಲಾತಾಣಗಳಲ್ಲಿ ಹರಿದಾಡುತ್ತಿವೆ. ಈಗ ಅದಕ್ಕೆ ತಕ್ಕಂತೆ ಪ್ರಿಯಾಂಕಾ ನಿಕ್ ಸೋದರಸಂಬಂಧಿ ಮದುವೆಗೆ ನಿಕ್ ಜೊತೆಗೆ ಹೋಗಿದ್ದಾರೆ.

ಒಂದೆರಡು ದಿನಗಳ ಹಿಂದೆ ಪ್ರಿಯಾಂಕಾ ನ್ಯೂಯಾರ್ಕ್ನ ಜೆಎಫ್ಕೆ ವಿಮಾನನಿಲ್ದಾಣದಲ್ಲಿ ನಿಕ್ ಜೊತೆಗೆ ಕಾಣಿಸಿಕೊಣಂಡಿದ್ದರು. ನಿಕ್ ಅವರ ಸೋದರಸಂಬಂಧಿ ರಾಚೆಲ್ ಟ್ಯಾಂಬುರೆಲ್ಲಿ ಅವರ ವಿವಾಹಕ್ಕೆ ಹಾಜರಾಗಲು ದಂಪತಿಗಳು ನ್ಯೂ ಜೆರ್ಸಿ ಧಿರಿಸು ಉಡುಪಿನಲ್ಲಿ ಹೊರಟರು.ಇಬ್ಬರೂ ಕೈ ಕೈ ಹಿಡಿದುಕೊಂಡು ನಡೆದಿದ್ದಾರೆ.  ಪ್ರಿಯಾಂಕಾ ಯಾವಾಗಲೂ ತನ್ನ ವೈಯಕ್ತಿಕ ಜೀವನದ ಬಗ್ಗೆ ಬಿಗಿಯಾಗಿ ಬಾಯಿ ಬಿಡದೆ ಇರುತ್ತಾರೆ. ಕಾದು ನೋಡಬೇಕು ಮುಂದೆ ಇವರ ಪ್ರೀತಿ ಅಥವಾ ಫ್ರೆಂಡ್ ಶಿಪ್ ಯಾವ ತಿರುವ ಪಡೆದುಕೊಳ್ಳುತ್ತದೆ ಎಂದು ನೋಡೋಣ..

Tags