ಸುದ್ದಿಗಳು

ಫಲಿತಾಂಶಕ್ಕೂ ಮೊದಲೇ ಸಂಸದರಾದ ನಿಖಿಲ್ ಕುಮಾರಸ್ವಾಮಿ..!!?!!

ಬೆಂಗಳೂರು, ಏ.20:

ಬಾರೀ ಜಿದ್ದಾ ಜಿದ್ದಿ ಕ್ಷೇತ್ರ ಮಂಡ್ಯದ ಫಲಿತಾಂಶದ ಮೇಲೆ ಭಾರೀ ನಿರೀಕ್ಷೆ ಇದೆ. ಮಂಡ್ಯ ಅಧಿಪತಿಗಳು ಯಾರಾಗ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಚುನಾವಣಾ ರಣ ಕಹಳೆ ಮುಗಿದಿದೆ. ಇನ್ನೇನಿದ್ದರೂ ಫಲಿತಾಂಶಕ್ಕಾಗಿ ಇಡೀ ಮಂಡ್ಯ ಎದುರು ನೋಡುತ್ತಿದೆ. ಸುಮಲತಾ ನಿಖಿಲ್ ಸ್ಪರ್ಧೆ ಜೋರಾಗಿಯೇ ಇದೆ. ಇನ್ನೂ ಹೊಸ ವಿಚಾರ ಏನಪ್ಪಾ ಅಂದರೆ ನಿಖಿಲ್ ಕುಮಾರಸ್ವಾಮಿ ಫಲಿತಾಂಶಕ್ಕೂ ಮೊದಲೇ ಸಂಸದರಾಗಿದ್ದಾರೆ.

ಸಂಸದರಾದ ನಿಖಿಲ್

ಹೌದು, ಹೀಗೆ ಸಂಸದರಾಗಿರುವ ನಾಮ ಫಲಕವೊಂದು ಭರ್ಜರಿ ಸದ್ದು ಮಾಡ್ತಾ ಇದೆ. ಜೆಡಿಎಸ್ ಪಾಳಯದಲ್ಲಿ ಈ ನಾಮಫಲಕದ ಫೋಟೋ ಓಡಾಡುತ್ತಿದೆ. ಈ ನಾಮಫಲಕದಲ್ಲಿ ಶ್ರೀ.ನಿಖಿಲ್.ಕೆ ಸಂಸದರು ಮಂಡ್ಯ ಲೋಕಸಭಾ ಕ್ಷೇತ್ರ ಅಂತಾ ಬರೆಸಲಾಗಿದೆ. ಮೂಲಗಳ ಪ್ರಕಾರ ನಿಖಿಲ್ ಗೆ ಅಭಿಮಾನಿಯೊಬ್ಬರು ಈ ನಾಮಫಲಕ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.

ಚರ್ಚೆಗೆ ಎಡೆಯಾದ ನಾಮಫಲಕ

ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಚರ್ಚೆಗೆ ಗುರಿಯಾಗಿದೆ. ಕೂಸು ಹುಟ್ಟೋದಿಕ್ಕೂ ಮುನ್ನವೇ ಕುಲಾವಿ ಎನ್ನುವ ಮಾತು ನಿಖಿಲ್ ವಿಚಾರದಲ್ಲಿ ಆಗುತ್ತಿದೆ ಎನ್ನಲಾಗಿದೆ. ಸದ್ಯ ಈ ನಾಮಫಲಕದ ಫೋಟೋ ಸಾಮಾಜಿಕ‌ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ನೂ ಮಂಡ್ಯ ಅಧಿಪತಿ ಯಾರಾಗ್ತಾರೆ ಅನ್ನೊಧಕ್ಕೆ ಮೇ 23ರವರೆಗೆ ಕಾಯಲೇಬೇಕು.

‘ರಾಧಾ ರಮಣ’ ಧಾರಾವಾಹಿಯಿಂದ ಹೊರನಡೆದ ರಾಧಾ ಮಿಸ್

#balkaninews #nikhilgowda #mandyapoltics #nikhilgowdamovies #nikhilgowdapolitics

Tags