ಸುದ್ದಿಗಳು

ವೈರಲ್ ಆಯ್ತು ವಿವಾಹ ಆಮಂತ್ರಣ ಪತ್ರಿಕೆಯಲ್ಲಿನ ನಿಖಿಲ್ ಕುಮಾರಸ್ವಾಮಿ ಭಾವಚಿತ್ರ

ಬೆಂಗಳೂರು, ಮೇ.22:

ಸದ್ಯ ಲೋಕಸಭಾ ಚುನಾವಣೆಯ ಫಲಿತಾಂಶ ನಾಳೆ ಹೊರ ಬೀಳಲಿದೆ. ಈಗಾಗಲೇ ಇಡೀ ಕರ್ನಾಟಕದ ಚಿತ್ತ ಮಂಡ್ಯ ಮೇಲಿದೆ. ಸುಮಲತನಾ ಅಥವಾ ನಿಖಿಲ್ ಕುಮಾರಸ್ವಾಮಿಯ ಎಂಬ ಕುತೂಹಲಕ್ಕೆ ಇನ್ನೇನು ಒಂದೇ ದಿನ ಬಾಕಿ ಬ್ರೇಕ್ ಬೀಳುವುದಕ್ಕೆ. ಈ ನಡುವೆ ಅಭಿಮಾನಿಯೊಬ್ಬರು ನಿಖಿಲ್ ಫೋಟೋವನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಖಿಸಿಕೊಂಡಿದ್ದಾರೆ.

ಮಂಡ್ಯಕ್ಕೆ ಸಾರಥಿಯಾದ್ರಾ ನಿಖಿಲ್..?

ಹೌದು, ಶ್ರೀರಂಗಪಟ್ಟಣ ತಾಲೂಕಿನ ಅಶೋಕ್ ಕುಮಾರ್ ಎಂಬುವವರ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿಯ ಫೋಟೋ ರಾರಾಜಿಸುತ್ತಿದೆ. ಇವರ ಆಮಂತ್ರಣದಲ್ಲಿ ಒಂದು ಪುಟ ಪೂರ್ತಿ ನಿಖಿಲ್ ಅವರ ಫೋಟೋ ಹಾಕಿಸಲಾಗಿದೆ. ಇನ್ನೂ ಈ ಮದುವೆ ಮುಂದಿನ ತಿಂಗಳು 8ರಂದು ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ.

ಫಲಿತಾಂಶಕ್ಕೂ ಮುನ್ನ ಸಂಸದರಾದ ನಿಖಿಲ್

ವಿಶೇಷವೇನೆಂದರೆ ಈ ಅಭಿಮಾನಿ ನಿಖಿಲ್ ಫೋಟೋ ಅಷ್ಟೇ ಅಲ್ಲದೆ ಜೆಡಿಎಸ್ ಯುವ ಸಾರಥಿ, ನಿಖಿಲ್ ಕುಮಾರಸ್ವಾಮಿ ಮಂಡ್ಯ ಸಂಸದರು ಎಂಬುದನ್ನು ಪ್ರಿಂಟ್ ಮಾಡಿಸಿದ್ದಾರೆ. ಫಲಿತಾಂಶ ಬರುವುದಕ್ಕೂ ಮುನ್ನವೇ ಈ ರೀತಿ ಹಾಕಿರುವುದು ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಫಲಿತಾಂಶಕ್ಕೂ ಮುನ್ನ ಇದೆಂತ ಅಭಿಮಾನ ಎಂದು ಹೇಳಲಾಗುತ್ತಿದೆ.

Image result for nikhil kumaraswamy

ಇಲ್ಲಿ ಹೀರೋನೂ ನಾನೇ, ವಿಲನೂ ನಾನೇ: ವಿಭಿನ್ನ ರೀತಿಯ ಪಾತ್ರಗಳಿಗೂ ಜೈ ಎಂದ ಯುವ ನಟ ನಿರಂತ್

#balkaninews #weddingcard #nikhilkumarswamy #politics #mandyapolitics

Tags