ಸುದ್ದಿಗಳು

ನಿಖಿಲ್ ಗೆ ಚಿತ್ರ ನಿರ್ಮಿಸಲು ಮುಂದಾದ ಲೈಕಾ ಪ್ರೊಡಕ್ಷನ್ಸ್..!

ಬೆಂಗಳೂರು.ಮೇ.15: ‘ಜಾಗ್ವಾರ್’ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ನಿಖಿಲ್ ಕುಮಾರಸ್ವಾಮಿ ಚಂದನವನದಲ್ಲಿ ಯುವರಾಜನಾಗಿ ಮಿಂಚಿದ್ದರು.. ಇನ್ನೂ ‘ಸೀತಾರಾಮ ಕಲ್ಯಾಣ’ದ ಮೂಲಕ ಸ್ಯಾಂಡಲ್ವುಡ್ ನ ಭರವಸೆಯ ನಾಯಕನಾಗಿ ಹೊರ ಹೊಮ್ಮಿದರು.

ಇನ್ನೂ ಸದ್ಯ ಲೋಕ ಅಖಾಡದಲ್ಲಿ ಮಂಡ್ಯದಿಂದ ಸ್ಪರ್ಧೆ ಮಾಡ್ತಿರೋ ನಿಖಿಲ್ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ನಿಖಿಲ್ ಸಿನಿಮಾದಿಂದ ದೂರ ಉಳಿಯುತ್ತಾರೆ ಅನ್ನೋ ಗಾಳಿ ಸುದ್ದಿಗಳು ಹರಿದಾಡ್ತಿದ್ದವು. ಆದರೆ, ಅದರ ಮಧ್ಯೆಯೇ ಭಾರೀ ಸದ್ದು ಮಾಡ್ತಿದ್ದ ‘ನಿಖಿಲ್ ಎಲ್ಲಿದಿಯಪ್ಪಾ’ ಟೈಟಲ್ ಮೇಲೆ ಚಿತ್ರ ಮಾಡುವುದಾಗಿ ಹೇಳಿಕೊಂಡಿದ್ದರು.

ಸದ್ಯ ‘ನಿಖಿಲ್ ಎಲ್ಲಿದಿಯಪ್ಪಾ’ ಟೈಟಲ್ ಗೊಂದಲದ ಗೂಡಾಗಿದ್ದು, ಸದ್ಯ ಅದಕ್ಕೂ ಬ್ರೇಕ್ ಬಿದ್ದಿದೆ. ಆದ್ರೆ ನಿಖಿಲ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಎದುರಾಗಿದೆ,. ಹೌದು ಈ ಹಿಂದೆ ನಿಖಿಲ್ ಲೈಕಾ ಪ್ರೊಡಕ್ಷನ್ ಅಡಿಯಲ್ಲಿ ಚಿತ್ರ ಮಾಡ್ತಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು, ಆದರೆ ಇದೀಗ ಅದು ಪಕ್ಕಾ ಆಗಿದೆ.

ತಮಿಳು, ತೆಲುಗಿನ ‘ಕತ್ತಿ’, ‘2.O’, ‘ಖೈದಿ ನಂ.150’, ಸೇರಿದಂತೆ ಸ್ಟಾರ್ ಹೀರೋಗಳ ಹಲವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ಕೊಟ್ಟಂತಹ ಅತಿ ದೊಡ್ಡ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಇದೀಗ ನಿಖಿಲ್ ಕುಮಾರ್ ಗೆ ಚಿತ್ರ ಮಾಡಲು ಮುಂದಾಗಿದೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗ್ತಿದ್ದು, ಕೆಲವೇ ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ.

ಇನ್ನೂ ಇದೇ ಕಾರಣಕ್ಕೆ ನಿಖಿಲ್ ಲಂಡನ್ ಗೆ ತೆರಳಲಿದ್ದು, ಸಿನಿಮಾದ ಕಂಪ್ಲೀಟ್ ಮಾತುಕತೆ ಅಲ್ಲೇ ಜರುಗಲಿದೆ ಅಂತಿವೆ ಮೂಲಗಳು. ‘ಜಾಗ್ವಾರ್’ ನಲ್ಲಿ ನಿಖಿಲ್ ನಟನೆ ಹಾಗೂ ‘ಕುರುಕ್ಷೇತ್ರ’ ಟೀಸರ್ ಮೆಚ್ಚಿಕೊಂಡಿರುವ ಲೈಕಾ ಪ್ರೊಡಕ್ಷನ್ಸ್ ಚಿತ್ರದ ಬಗ್ಗೆ ಮಾತುಕತೆಗೆ ಮುಂದಾಗಿದ್ದು, ಸದ್ಯದಲ್ಲಿಯೇ ಮತ್ತೊಂದು ಬಿಗ್ ಬಜೆಟ್ ಚಿತ್ರದ ಮೂಲಕ ನಿಖಿಲ್ ತೆರೆಯ ಮೇಲೆ ಬರುವುದು ಪಕ್ಕಾ ಆಗಿದೆ.

‘ಸೂಜಿದಾರ’ ಚಿತ್ರದ ಕುರಿತಂತೆ ನಟಿ ಹರಿಪ್ರಿಯಾ ಅಸಮಾಧಾನ: ಚಿತ್ರತಂಡಕ್ಕೆ ಶಾಕ್..!!!

#nikhil, #next, #movie, #lika, #balkaninews #filmnews, #kannadasuddigalu #2.0, #yuvaraj

Tags

Related Articles