ಸುದ್ದಿಗಳು

ಟ್ರೋಲ್ ಗೆ ಒಳಗಾದ ದೇವೇಗೌಡರ ಕುಟುಂಬ, ಫೇಮಸ್ ಆಯ್ತು ‘ನಿಖಿಲ್ ಎಲ್ಲಿದಿಯಪ್ಪ..?’ ಡೈಲಾಗ್

‘ಜಾಗ್ವಾರ್’ ಆಡಿಯೋ ಬಿಡುಗಡೆಯ ಸಮಾರಂಭದಲ್ಲಿ ನಡೆದಿದ್ದ ದೃಶ್ಯಗಳು

ಬೆಂಗಳೂರು.ಮಾ.14: ಈಗೀಗ ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾಗುತ್ತಿದ್ದಂತೆಯೇ ಅನೇಕ ವಿಷಯಗಳು ಸಹ ಟ್ರೋಲ್ ಆಗುತ್ತಿವೆ. ಅದರಲ್ಲೂ ರಾಜಕೀಯ ಮುಖಂಡರನ್ನು ಸಹ ಟ್ರೋಲ್ ಮಾಡಲಾಗುತ್ತಿದೆ. ಈಗ ದೇವೇಗೌಡರ ಕುಟುಂಬವೂ ಸಹ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.

ಹೌದು, ಈಗ ಸೋಷಿಯಲ್ ಮೀಡಿಯಾದಲ್ಲಿ ರಾಜೀವ್ ಗಾಂಧಿ, ಸಿ. ಎಂ ಕುಮಾರಸ್ವಾಮಿ, ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಏನೇ ಹೇಳಿಕೆ ನೀಡಿದರೂ ಸಹ ಅದನ್ನು ಎಡಿಟ್ ಮಾಡಿ ಟ್ರೋಲ್ ಮಾಡಿ ಬಿಡುತ್ತಾರೆ. ಅದರಂತೆ ಇಲ್ಲೊಂದು ಸುಮಾರು ಮೂರು ವರ್ಷಗಳ ಹಿಂದೆ ನಡೆದಿದ್ದ ಕಾರ್ಯಕ್ರಮವನ್ನು ಇಂದು ಟ್ರೋಲ್ ಮಾಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಅಭಿನಯದ ಮೊದಲ ‘ಜಾಗ್ವಾರ್’ ಚಿತ್ರದ ಧ್ವನಿಸುರುಳಿ ಬಿಡುಗಡೆಯ ದಿನ ‘ನಿಖಿಲ್ ಎಲ್ಲಿದ್ದಿಯಪ್ಪ..?’ ಎಂದು ಕರೆದ ವಿಡಿಯೋ ತುಣುಕೊಂದು ಈಗ ಟ್ರೋಲಿಗರ ಕೈಗೆ ಸಿಕ್ಕು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

‘ಜಾಗ್ವಾರ್’ ಚಿತ್ರದ ಧ್ವನಿಸುರುಳಿಯ ಬಿಡುಗಡೆಯ ವೇಳೆ ಮಾತನಾಡಿದ ಸಿ.ಎಂ ಎಚ್ ಡಿ ಕುಮಾರಸ್ವಾಮಿಯವರು ತಮ್ಮ ಮಗನನ್ನು ಉದ್ದೇಶಿಸಿ ಮಾತನಾಡುತ್ತಾ, “ಇದೊಂದು ವಿಶೇಷವಾದ ಕಾರ್ಯಕ್ರಮ. ಇಲ್ಲಿ ನೀವುಗಳೆಲ್ಲಾ ಇದ್ದೀರಿ. ನಿಮ್ಮ ಸಮ್ಮುಖದಲ್ಲಿ ನಾವೆಲ್ಲರೂ ಸೇರಿದ್ದೇವೆ. ಆದರೆ ನಿಖಿಲ್ ಮಾತ್ರ ಕಾಣಿಸುತ್ತಿಲ್ಲ. ನಿಖಿಲ್ ಎಲ್ಲಿದಿಯಪ್ಪ..?” ಎಂದು ಕರೆದಿದ್ದಾರೆ.

ಹೀಗೆ ತಂದೆಯ ಕೂಗಿಗೆ ನಟ ನಿಖಿಲ್ ಜನರ ಮಧ್ಯೆಯಿಂದ ಎದ್ದು ಬಂದು, ‘ನಾನು ಇಲ್ಲಿಯೇ ಇದ್ದೀನಪ್ಪಾ. ನಿಮ್ಮನ್ನು ಮತ್ತು ತಾತನನ್ನು ಪ್ರಾಣಕ್ಕೂ ಹೆಚ್ಚಾಗಿ ಪ್ರೀತಿಸುವ ಜನರ ನಡುವೆ ಇದ್ದೀನಪ್ಪಾ’ ಎಂದು ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ಮರು ಉತ್ತರಿಸಿದ ಕುಮಾರಸ್ವಾಮಿಯವರು, ‘ನೀನಾಗ್ಲೇ ಜನರ ಮಧ್ಯೆ ಸೇರಿ ಬಿಟ್ಟಿದ್ದೀಯಾ. ಅವರನ್ನು ಬಿಡಬೇಡಾ. ಅವರೊಂದಿಗೆ ನೀನು ಸದಾ ಇರು’ ಎಂದಿದ್ದಾರೆ. ಇದೇ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದ್ದು, ಟ್ರೋಲ್ ಮೇಲೆ ಟ್ರೋಲ್ ಆಗುತ್ತಿದೆ.

ಹುಟ್ಟುಹಬ್ಬಕ್ಕೆ ಕೇಕ್ , ಹೂ ಗುಚ್ಚ ಹಾಗೂ ಹಾರಗಳನ್ನು ತರಬೇಡಿ: ಅಪ್ಪು!!

#nikhilkumar, #troll, #balkaninews #nikhilyelliddiyappa, #filmnews, #kannadasuddigalu

Tags