ಸುದ್ದಿಗಳು

ಪ್ರೇಮಿಗಳ ನಿವೇದನೆಗಾಗಿ ಹೊಸ ಆಲ್ಬಾಂ ಹಾಡು “ನಿನ್ನ ಗುಂಗಲ್ಲಿ”

ಬೆಂಗಳೂರು, ಫೆ.14:

ಇತ್ತೀಚಿನ ದಿನಗಳಲ್ಲಿ ಆಲ್ಬಾಂ ಸಾಂಗ್‌ ಗಳು ಹೆಚ್ಚಾಗಿ ಬರುತ್ತಿರುವುದನ್ನು ನೋಡುತ್ತಿದ್ದೇವೆ. ಅಷ್ಟೇ ಅಲ್ಲ ಈ ಆಲ್ಬಾಂ ಹಾಡುಗಳು ಹಿಟ್ ಆಗಿರೋದನ್ನೂ ಕೂಡ ಕಂಡಿದ್ದೇವೆ. ಇದೀಗ ಅದೇ ಹಾದಿಯಲ್ಲಿ ನಿನ್ನ ಗುಂಗಲ್ಲಿ ಎನ್ನುವ ಹಾಡನ್ನು ಯುವ ಪ್ರತಿಭೆ ಅದ್ವಿಕ್ ತಯಾರು ಮಾಡಿದ್ದಾರೆ.

ಹೊಸ ಪ್ರತಿಭೆಯ ನಿನ್ನ ಗುಂಗಲ್ಲಿ

ಹೊಸತನ ತರುವತ್ತ ಈ ಹಾಡನ್ನು ರೆಡಿ ಮಾಡಲಾಗಿದೆ. ದಿನಿ ಸಿನಿ ಕ್ರೀಯೇಷನ್‌ ನಲ್ಲಿ ಹೊರ ಬರುತ್ತಿರುವ ಈ ಹಾಡಿಗೆ ಪ್ರತಿಭೆ ಅದ್ವಿಕ್ ಅಭಿನಯದ ಜೊತೆ ಜೊತೆಗೆ ಸಾಹಿತ್ಯ, ಸಂಗೀತ ನೀಡಿದ್ದಾರೆ. ಇನ್ನೂ ಸಿನಿ ದಿನಿ ಕ್ರೀಯೇಷನ್ಸ್ ಬ್ಯಾನರ್‌ ನಲ್ಲಿ ದಿನೇಶ್ ಈ ಸಾಂಗ್‌ ಗೆ ನಿರ್ಮಾಣ ಮಾಡಿದ್ದಾರೆ.. ಡೈರಿ ಡೇ ಹಾಗೂ ಇನ್ನಿತರ ಕಂಪನಿಗಳ ಸಹಯೋಗತ್ವದಲ್ಲಿ ಈ ಸಾಂಗ್‌ ಗೆ ಸಾಥ್ ಸಿಕ್ಕಿದೆ.

16 ರಂದು ಈ ಹಾಡು ಲೋಕಾರ್ಪಣೆ

ಇನ್ನು ಈ ಹಾಡಿಗೆ ಇದೀಗ ಚಂದನ್ ಸೇರಿದಂತೆ ಹಲವಾರು ಮಂದಿ ಸಾಥ್ ನೀಡಿದ್ದಾರೆ. ಹೊಸ ಪ್ರತಿಭೆ ಬರುತ್ತಿದ್ದು, ಆಶಿಸಿ ಎಂದು ಹೇಳಿದ್ದಾರೆ. ಇನ್ನು ದಿನಿಸಿನಿ ಕ್ರಿಯೇಷನ್ಸ್ ಡಿಸಿ ರೆಕಾರ್ಡ್ ಕಂಪನಿಯನ್ನು ಲೋಕಾರ್ಪಣೆ ಮಾಡಿದೆ. ಈ ಡಿಸಿ ರೇಕಾರ್ಡ್ಸ್ ಸಂಸ್ಥೆಯ ಮೂಲಕ ಹಲವಾರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶ ಇದಾಗಿದ್ದು, ಇದೀಗ ಅದೇ ಹಾದಿಯಲ್ಲಿ ಈ ನಿನ್ನ ಗುಂಗಲ್ಲಿ ಹಾಡು ಬರುತ್ತಿದೆ. ಇನ್ನು ಈ ಹಾಡಿನ ಟೀಸರ್ ರಿಲೀಸ್ ಆಗಿದ್ದು, ಇದೇ 16ರಂದು ಈ ಹಾಡು ಲೋಕಾರ್ಪಣೆ ಗೊಳ್ಳುತ್ತಿದೆ.

ಸೆಂಚುರಿ ಸ್ಟಾರ್ ಮನೆಗೆ ಬಂದ ಹೊಸ ಅತಿಥಿ!!

#sandalwood #kannadaalbumsong #albumsongs #balkaninews #chandanshettyalbumsongs #ninnagungalialbumsong

Tags

Related Articles