ಸುದ್ದಿಗಳು

ಚಿಕ್ಕಪ್ಪ-ಚಿಕ್ಕಮ್ಮನ ಮಾರ್ಗದರ್ಶನದೊಂದಿಗೆ ನಾಯಕನಟರಾದ ನಿರಂಜನ್

ಇಂದು ಮುಹೂರ್ತ ಆಚರಿಸಿಕೊಂಡ ‘ನಮ್ ಹುಡುಗ್ರು ಕಥೆ’

ಬೆಂಗಳೂರು, ನ.9: ರಿಯಲ್ ಸ್ಟಾರ್ ಉಪೇಂದ್ರರ ಸಹೋದರ ಸುಧೀಂದ್ರರವರ ಪುತ್ರ ನಿರಂಜನ್ ಈಗಾಗಲೇ ‘ಸೆಕೆಂಡ್ ಹಾಫ್’ ಚಿತ್ರದ ಮೂಲಕ ಬಣ‍್ಣದ ಲೋಕಕ್ಕೆ ಪ್ರವೇಶ ಮಾಡಿದ್ದರು. ಇದೊಂದು ಒಬ್ಬ ಲೇಡಿ ಕಾನ್ಸ್ ಟೇಬಲ್ ರೊಬ್ಬರ ಕಥೆಯಾಗಿತ್ತು. ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.

ಸೆಕೆಂಡ್ ಹಾಫ್ ನಿಂದ ‘ಹುಡುಗ್ರು ಕಥೆ’

ಅಭಿನಯಿಸಿದ ಮೊದಲ ಚಿತ್ರದಲ್ಲಿಯೇ ಪ್ರೇಕ್ಷಕರ ಮನ ಗೆದ್ದಿದ್ದ ನಿರಂಜನ್ ‘ನಮ್ ಹುಡುಗ್ರು ಕಥೆ’ಯ ಮೂಲಕ ನಾಯಕ ನಟರಾಗಿ ಬೆಳ್ಳಿತೆರೆಗೆ ಬಡ್ತಿ ಪಡೆಯುತ್ತಿದ್ದಾರೆ. ಈ ಹಿಂದಿನ ‘ಸೆಕೆಂಡ್ ಹಾಫ್’ ಚಿತ್ರದ ಅನುಭವವನ್ನೆಲ್ಲಾ ಒಟ್ಟುಗೂಡಿಸಿಕೊಂಡು ಮತ್ತು ಚಿಕ್ಕಪ್ಪ ಉಪೇಂದ್ರ ಹಾಗೂ ಚಿಕ್ಕಮ್ಮ ಪ್ರಿಯಾಂಕಾರ ಮಾರ್ಗದರ್ಶನದೊಂದಿಗೆ ಚಿತ್ರರಂಗದ ಪ್ರವೇಶ ಮಾಡುತ್ತಿದ್ದಾರೆ.

ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ

“ಚಿತ್ರದ ಕಥೆ ಕೇಳಿದಾಗ ರೋಮಾಂಚನವಾಯಿತು. ಇದೊಂದು ಗ್ರಾಮೀಣ ಭಾಗದ ಕಥೆಯಾಗಿದ್ದರೂ ಎಲ್ಲಾ ರೀತಿಯ ಅಂಶಗಳು ಚಿತ್ರದಲ್ಲಿವೆ. ಚಿತ್ರದ ನಿರ್ಮಾಪಕ, ನಿರ್ದೇಶಕರು ಸೇರಿದಂತೆ ನಮ್ಮ ಚಿಕ್ಕಪ್ಪ , ಚಿಕ್ಕಮ್ಮ ಎಲ್ಲರೂ ಬಹಳ ಸಪೋರ್ಟ್ ಮಾಡಿದರು. ಈ ಚಿತ್ರದಲ್ಲಿ ನನ್ನದು ಮುಗ್ಧ ಮತ್ತು ರಫ್ ಆ್ಯಂಡ್ ಟಫ್ ಆಗುವ ಪಾತ್ರ ನನ್ನದು” ಎಂದು ಚಿತ್ರದ ಬಗ್ಗೆ ನಿರಂಜನ್ ಸಂತಸದಿಂದ ಹೇಳುತ್ತಾರೆ.

ತಾಜ್ ಮಹಲ್ ನಂತರ ಮತ್ತೊಮ್ಮೆ ಇಂಪಾದ ಹಾಡುಗಳು

‘ನನಗೆ ‘ತಾಜ್ ಮಹಲ್’ ಚಿತ್ರದ ಕಥೆ ಕೇಳಿದಾಗ ತುಂಬಾ ಇಷ್ಟವಾಗಿತ್ತು. ಆ ಚಿತ್ರದ ಹಾಡುಗಳಂತೆ ಈ ಚಿತ್ರದಲ್ಲಿಯೂ ಸಹ ವಿಭಿನ್ನ ಬಗೆಯ ಇಂಪಾದ ಹಾಡುಗಳನ್ನು ನಿರೀಕ್ಷಿಸಬಹುದು” ಎನ್ನುತ್ತಾರೆ ಸಂಗೀತ ನಿರ್ದೇಶಕ ಅಭಿಮನ್ ರಾಯ್.ಬಹಳ ಖುಷಿಯಾಗುತ್ತಿದೆ

‘ಚಿತ್ರದಲ್ಲಿ ಬರೀ ಲವ್ ಸ್ಟೋರಿಯಿಲ್ಲ. ನಮ್ಮ ನಿರಂಜನ್ ಕೆರಿಯರ್ ಗೆ ಖಂಡಿತ ಹಿಟ್ ಆಗುತ್ತದೆ. ನನಗಂತೂ ಬಹಳ ಖುಷಿಯಾಗುತ್ತಿದೆ. ‘ಸೆಕೆಂಡ್ ಹಾಫ್’ ನಂತರ ಪೂರ್ಣ ಪ್ರಮಾಣದ ನಾಯಕನಾಗುತ್ತಿದ್ದಾನೆ. ಅವನಿಗೆ ಒಳ್ಳೆಯದಾಗಲಿ” ಎಂದು ಪ್ರಿಯಾಂಕಾ ಉಪೇಂದ್ರ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.ಸತ್ಯ ಸುಳ್ಳಿನ ನಡುವೆ ಕಥಾಹಂದರ

“ಇದೊಂದು ಮಂಡ್ಯದ ಗ್ರಾಮೀಣ ಭಾಗವೊಂದರಲ್ಲಿ ನಡೆಯುವ ಕಥೆಯಾಗಿದೆ. ಒಂದು ಸ್ನೇಹಿತರ ಗುಂಪಿನಲ್ಲಿ ಮೋಸ, ವಂಚನೆ, ದ್ರೋಹ ಇರುವುದಿಲ್ಲ. ಅಂತಹ ಗುಂಪಿನಲ್ಲಿ ಒಂದು ಸುಳ್ಳು ಹುಟ್ಟಿಕೊಂಡರೆ ಏನೆಲ್ಲಾ ತೊಂದರೆಯಾಗುತ್ತದೆ ಮತ್ತು ಅದರಿಂದ ಹೊರ ಬರಲು ಹೇಗೆಲ್ಲಾ ಕಷ್ಟ ಪಡುತ್ತಾರೆ ಎಂಬುದು ಚಿತ್ರದ ಒನ್ ಲೈನ್ . ಈ ಮೂಲಕ ಸತ್ಯಕ್ಕೂ ಮತ್ತು ಸುಳ್ಳಿನ ನಡುವಿರುವ ಕಥೆಯನ್ನು ಹೇಳುತ್ತಿದ್ದೇವೆ” ಎಂದು ನಿರ್ದೇಶಕ ಎಚ್ ಬಿ ಸಿದ್ದು ಹೇಳುತ್ತಾರೆ.

ಚಿತ್ರದ ನಾಯಕಿಯ ಬಗ್ಗೆ

ಮೈಸೂರಿನ ಲಿಖಿತಾ ಬಿಲ್ಲಾಳ್ ‘ನಮ್ ಹುಡುಗ್ರು ಕಥೆ’ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಗೆಯೇ ತಮ್ಮ ಹೆಸರನ್ನು ರಿಯಾ ರಣ್ವಿಕಾ ಎಂದು ಬದಲಾಯಿಸಿಕೊಂಡಿದ್ದಾರೆ. “ಈ ಚಿತ್ರದಲ್ಲಿ ನನ್ನದು ಮುಗ್ಧ ಹುಡುಗಿಯಿಂದ ಪ್ರಬುದ್ಧ ಮಹಿಳೆಯಾಗಿ ಪರಿವರ್ತನೆ ಹೊoದುವ ಪಾತ್ರ. ನಿರ್ದೇಶಕರು ಮಾಡಿಕೊಂಡ ಕಥೆ ಚೆನ್ನಾಗಿದೆ” ಹೇಳುತ್ತಾರೆ.

ಚಿತ್ರದ ತಾರಾಬಳಗ

ಚಿತ್ರದಲ್ಲಿ ನಿರಂಜನ್ ಸುಧೀಂದ್ರ, ರಿಯಾ ರಣ್ವಿಕ್, ಅಲೋಕ್, ಪ್ರವೀಣ್, ಶರತ್ ಲೋಹಿತಾಶ್ವ, ಭವ್ಯಾ, ಶಂಕರ್ ಅಶ್ವಥ್, ರಾಕ್ಲೈನ್ ಸುಧಾಕರ್, ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಅಭಿಮನ್ ರಾಯ್ ಸಂಗೀತ, ಸೂರ್ಯ ಎಸ್ ಕಿರಣ್ ಛಾಯಾಗ್ರಹಣವಿದೆ.

Tags