ಸುದ್ದಿಗಳು

‘ಅದ್ದೂರಿ’ ನಾಯಕನಿಗೆ ವಿಶ್ ಮಾಡಿದ ರಿಯಲ್ ಸ್ಟಾರ್…!!!

ರಿಯಲ್ ಸ್ಟಾರ್ ಉಪೇಂದ್ರರ ಸಹೋದರ ಸುಧೀಂದ್ರರವರ ಪುತ್ರ ನಿರಂಜನ್ ‘ಸೆಕೆಂಡ್ ಹಾಫ್’ ಚಿತ್ರದ ಮೂಲಕ ಬಣ‍್ಣದ ಲೋಕಕ್ಕೆ ಪ್ರವೇಶ ಮಾಡಿದ್ದರು. ಇದೊಂದು ಒಬ್ಬ ಲೇಡಿ ಕಾನ್ಸ್ ಟೇಬಲ್ ರೊಬ್ಬರ ಕಥೆಯಾಗಿತ್ತು. ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.

ಹೀಗೆ ನಿರಂಜನ್, ತಾವು ಅಭಿನಯಿಸಿದ ಮೊದಲ ಚಿತ್ರದಲ್ಲಿಯೇ ಪ್ರೇಕ್ಷಕರ ಮನ ಗೆದ್ದಿದ್ದರು. ಬಳಿಕ ‘ನಮ್ ಹುಡುಗ್ರು ಕಥೆ’ಯ ಮೂಲಕ ನಾಯಕ ನಟರಾಗಿ ಬೆಳ್ಳಿತೆರೆಗೆ ಬಡ್ತಿ ಪಡೆಯುತ್ತಿದ್ದು, ಈ ಚಿತ್ರದೊಂದಿಗೆ ‘ಅದ್ದೂರಿ-2’ ಚಿತ್ರಕ್ಕೂ ನಾಯಕನಟರಾಗಿದ್ದಾರೆ.

ಹೀಗೆ ನಿರಂಜನ್ ರವರು ‘ಸೆಕೆಂಡ್ ಹಾಫ್’ ಚಿತ್ರದ ಅನುಭವವನ್ನೆಲ್ಲಾ ಒಟ್ಟುಗೂಡಿಸಿಕೊಂಡು ಮತ್ತು ಚಿಕ್ಕಪ್ಪ ಉಪೇಂದ್ರ ಹಾಗೂ ಚಿಕ್ಕಮ್ಮ ಪ್ರಿಯಾಂಕಾರ ಮಾರ್ಗದರ್ಶನದೊಂದಿಗೆ ಚಿತ್ರರಂಗದ ಪ್ರವೇಶ ಮಾಡುತ್ತಿದ್ದಾರೆ. ವಿಶೇಷವೆಂದರೆ, ಇಂದು ಅವರು ಜನುಮ ದಿನದ ಸಂಭ್ರಮದಲ್ಲಿದ್ದಾರೆ.

ನಿರಂಜನ್ ಬರ್ತಡೆಗೆ ಅವರ ಚಿತ್ರತಂಡದವರು ಸೇರಿದಂತೆ ಕುಟುಂಬಸ್ಥರು‘ಅದ್ದೂರಿ’ಯಾಗಿ ವಿಶ್ ಮಾಡಿದ್ದಾರೆ. ಹಾಗೆಯೇ ಅವರು ನಟಿಸುತ್ತಿರುವ ‘ಅದ್ದೂರಿ-2’ ಚಿತ್ರದ ಫಸ್ಟ್ ಲುಕ್ ಸಹ ರಿಲೀಸ್ ಆಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ.

ಇಂದು ಜನ್ಮದಿನದ ಸಂಭ್ರಮದಲ್ಲಿರುವ ನಿರಂಜನ್ ನೂರಾರು ಕಾಲ ಸುಖವಾಗಿರಲಿ ಮತ್ತು ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

ವೆಡ್ಡಿಂಗ್ ಆ್ಯನಿವರ್ಸರಿ: ಪವನ್ ಒಡೆಯರ್ ಗೆ ಪತ್ನಿಯಿಂದ ಸಿಕ್ತು ವಿಶೇಷ ಉಡುಗೊರೆ

#NiranjanSudhindra #birthdayNews#UpendraWish #Adduri-2, #kannadafilm, #kannadamovie

Tags