ಸುದ್ದಿಗಳು

ಗಿರೀಶ್ ಕಾರ್ನಾಡ್ ನಿಧನ ಹಿನ್ನೆಲೆ: ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಂತಾಪ

ಹಿರಿಯ ಸಾಹಿತಿ, ರಂಗಕರ್ಮಿ, ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಇಂದು ನಿಧನ ಹೊಂದಿದ್ದು ಈ ಸಲುವಾಗಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ಸಂತಾಪ ಸೂಚಿಸಿದ್ದಾರೆ

“ನಮ್ಮ ಮಠದೊಂದಿಗೆ ಕಾರ್ನಾಡರದ್ದು  ಸಾಹಿತ್ಯಿಕ ಮತ್ತು ಕಲಾತ್ಮಕವಾದ ಸಂಪರ್ಕ ಇತ್ತು,ಮಠದ ಶ್ರೀ ಗುರೂಜಿಗಳ ಕಾಲದಿಂದಲೂ ಕಲೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಇದ್ದರು

ನಮ್ಮ ಕನ್ನಡ ಸಾರಸ್ವತ ಲೋಕಕ್ಕೆ ಜ್ಞಾನಪೀಠ ತಂದುಕೊಟ್ಟ ಅವರ ನಿಧನದಿಂದ ಬಹಳಷ್ಟು ನಷ್ಟವಾಗಿದೆ” ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ..

ತಮ್ಮ ಪತಿಗೆ ಯಾವುದೇ ಸರ್ಕಾರಿ ಗೌರವಗಳು ಇರುವುದಿಲ್ಲ: ಗಿರೀಶ್ ಕಾರ್ನಾಡ್ ಪತ್ನಿ ಹೇಳಿಕೆ

#girishkarnad #girishkarnadmovies #nirmalanandaswamiji

Tags