ಸುದ್ದಿಗಳು

ನಿಲ್ಲಲ್ಲೇ ನಿಲ್ಲು ಈ ಪ್ರೀತಿಯೆಲ್ಲ ಮುದ್ದು ಸುಳ್ಳು ಎನ್ನುತ್ತಿದ್ದಾರೆ ನಿರೂಪ್

ನಿರೂಪ್ ಭಂಡಾರಿ ಹಾಗೂ ರಾಧಿಕಾ ಪಂಡಿತ್ ಅಭಿನಯದ ಸಿನಿಮಾ ‘ಆದಿ ಲಕ್ಷ್ಮೀ ಪುರಾಣ’. ಈಗಾಗಲೇ ಟೀಸರ್, ಟ್ರೈಲರ್, ಪೋಸ್ಟರ್ ಗಳು ರಿಲೀಸ್ ಆಗಿ ಬಹಳಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಅದರಂತೆ ರಾಜ್ಯಾದ್ಯಂತ ಈ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಇದರ ನಡುವೆ ಹಾಡೊಂದು ಬಿಡುಗಡೆಯಾಗಿದ್ದು, ಮೋಡಿ ಮಾಡುತ್ತಿದೆ.ಹೌದು, ನಿಲ್ಲಲ್ಲೇ ನಿಲ್ಲು ಈ ಪ್ರೀತಿಯೆಲ್ಲ ಮುದ್ದು ಸುಳ್ಳು ಎಂಬ ಹಾಡಿಗೆ ಸಿದ್ದಾರ್ಥ್  ಧ್ವನಿ ನೀಡಿದ್ದು, ಅನೂಪ್ ಭಂಡಾರಿ ಸಾಹಿತ್ಯ ಹಾಗೂ ಸಂಗೀತ ನೀಡಿದ್ದಾರೆ. ಇದೊಂದು ಸ್ಯಾಡ್ ಸಾಂಗ್ ಆಗಿದ್ದು, ದುಃಖ ಭರಿತದಿಂದ ಕೂಡಿದೆ. ನಿರೂಪ್ ಹಾಗೂ ರಾಧಿಕಾ ಈ ಹಾಡಿನಲ್ಲಿ ದುಃಖದಿಂದ ಇರುವುದನ್ನು ಕಾಣಬಹುದಾಗಿದೆ.

ವಿ.ಪ್ರಿಯಾ ನಿರ್ದೇಶನ ಮಾಡಿದ್ದು, ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ಸಿನಿಮಾ ಮೂಡಿಬಂದಿದೆ. ಉಳಿದಂತೆ ತಾರಾಬಳಗದ ಬಗ್ಗೆ ಮಾತನಾಡುವುದಾದರೆ, ಸುಚೇಂದ್ರ ಪ್ರಸಾದ್, ತಾರಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇಂದು ಬಿಡುಗಡೆಯಾಗಿರುವ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

Image may contain: 3 people, people sitting and indoor

ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಕೊಂಡಾಡಿದ ಶೃತಿ ಹಾಸನ್

#balkaninews #sandalwood #adilakshmipurana #adilakshmipuranasongs #adilakshmipuranatrailer #adilakshmipuranateaser #adilakshmipuranacollection #adilakshmipuranaradhikapandit #anupbhandari #priyavdirector

Tags