ಸುದ್ದಿಗಳು

‘ರಾಮಾರ್ಜುನ’ರ ಬಳಗದಲ್ಲಿ ನಿಶ್ವಿಕಾ ನಾಯ್ಡು

‘ವಾಸು..’ ಆದ್ಮೇಲೆ ಮತ್ತೊಮ್ಮೆ ಅನೀಶ್ ತೇಜೇಶ್ವರ್ ರೊಂದಿಗೆ ಸ್ಕ್ರೀನ್ ಶೇರ್

ಬೆಂಗಳೂರು.ಜ.12: ಇಷ್ಟು ನಟ, ನಿರ್ಮಾಪಕರಾಗಿದ್ದ ಅನೀಶ್ ತೇಜೇಶ್ವರ್ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ‘ರಾಮಾರ್ಜುನ’ ಚಿತ್ರಕ್ಕೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸುತ್ತಿದ್ದಾರೆ.

ಮತ್ತೆ ಒಂದಾದ ಜೋಡಿ

ಈ ಹಿಂದೆ ಇದೇ ಅನೀಶ್ ನಿರ್ಮಿಸಿದ್ದ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದರು ನಿಶ್ವಿಕಾ ನಾಯ್ಡು. ಈಗ ‘ರಾಮಾರ್ಜುನ’ ಚಿತ್ರದಲ್ಲೂ ನಾಯಕಿಯಾಗಿ ಅವರೇ ಮುಂದುವರಿದಿದ್ದಾರೆ.

ನಾಯಕಿಯ ಮಾತುಗಳು

ಈಗಾಗಲೇ ‘ರಾಮಾರ್ಜುನ’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಸದ್ಯ ಶೇ 30 ರಷ್ಟು ಮುಗಿದಿದೆ. ಚಿತ್ರದಲ್ಲಿ ನಿಶ್ವಿಕಾ ಸೌಮ್ಯ ಸ್ವಭಾವದ ಸಂಪ್ರದಾಯಸ್ಥ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

“ಈ ಚಿತ್ರವನ್ನು ಇಂಥದ್ದೇ ಶೈಲಿಯ ಸಿನಿಮಾವೆಂದು ಪರಿಗಣಿಸಲು ಸಾಧ್ಯವಿಲ್ಲ. ಕಥೆಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಅನೀಶ್ ಇಲ್ಲಿ ನಟರಾಗಿ, ನಿರ್ದೇಶಕರಾಗಿ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಿದ್ದಾರೆ. ಇನ್ನು ನನ್ನ ಹಿಂದಿನ ಸಿನಿಮಾಗಳಾದ ‘ಅಮ್ಮಾ ಐ ಲವ್ ಯೂ’ ಹಾಗೂ ‘ವಾಸು ನಾನು ಪಕ್ಕಾ ಕಮರ್ಶಿಯಲ್’ ಚಿತ್ರಗಳಿಗಿಂತ ವಿಭಿನ್ನವಾದ ಪಾತ್ರ ಮಾಡಿದ್ದೇನೆ” ಎಂದು ನಿಶ್ವಿಕಾ ಹೇಳುತ್ತಾರೆ.

ಚಿತ್ರದ ಬಗ್ಗೆ

ಚಿತ್ರದ ಹೆಸರು ಕೇಳಿದರೆ, ಇಲ್ಲಿ ನಾಯಕನ ಪಾತ್ರ ಎರಡು ಶೇಡ್ ರೀತಿ ಇರಬಹುದು ಎಂದು ಅನಿಸುತ್ತದೆ. ಈ ಬಗ್ಗೆ ಚಿತ್ರತಂಡ ಹೀಗೆ ಹೇಳುತ್ತಾರೆ, ‘ರಾಮನಷ್ಟು ಒಳ್ಳೆಯವರಾಗಬಾರದು, ಅರ್ಜುನನಂತೆ ಧರ್ಮಕ್ಕೆ ಬದ್ಧರಾಗಿರಬಾರದು. ಈ ಇಬ್ಬರು ಮಹಾಪುರುಷರ ಅಂದಿನ ಕಥೆಯನ್ನು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಚಿತ್ರದಲ್ಲಿ ಹೇಳಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ‘ರಾಮಾರ್ಜುನ’ ಚಿತ್ರದಿಂದ ಸಂದೇಶವೊಂದು ಸಿಗಲಿದೆ’ ಎನ್ನುತ್ತಾರೆ.

#nishvika #balakninews #nishvijkanaidu, #kannadasuddigalu, #filmnews #ramarjun, #nishvikanaidu

 

Tags