ಸುದ್ದಿಗಳು

ನಿವೇತಾ ಥಾಮಸ್ ಗೆ ಅಸಹ್ಯಕರ ಪ್ರಶ್ನೆ ಕೇಳಿದ ಟ್ರೋಲಿಗರು

ಪ್ರಸ್ತುತ ತೆಲುಗಿನಲ್ಲಿ ನಾನಿ ನಟನೆಯ ‘ವಿ’ ಮತ್ತು ತಮಿಳಿನಲ್ಲಿ ರಜನಿಕಾಂತ್ ಅವರ ‘ದರ್ಬಾರ್’ ಚಿತ್ರದಲ್ಲಿ ನಟಿಸುತ್ತಿರುವ ನಿವೇತಾ ಥಾಮಸ್ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕೇಳುವ ಕೆಲವು ಪ್ರಶ್ನೆಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳ ಜೊತೆ ಚಾಟ್ ಮಾಡುವಾಗ ನಿವೇತಾ ಥಾಮಸ್ ಗೆ ಕೆಲವರು “ಮದುವೆ ಯಾವಾಗ”, “ಬಾಯ್ ಫ್ರೆಂಡ್ ಇದ್ದಾರಾ”, “ನೀವು ನನ್ನನ್ನು ಮದುವೆಯಾಗುತ್ತೀರಾ?”,  “ವರ್ಜಿನ್?” ಹೀಗೆ ವಿಲಕ್ಷಣವಾದ ಪ್ರಶ್ನೆಗಳನ್ನು ಕೇಳಿದ್ದಾರೆ.

ಈ ಪ್ರಶ್ನೆಗಳಿಗೆಲ್ಲಾ ಪ್ರತಿಕ್ರಿಯಿಸಿರುವ ನಿವೇತಾ,  ದಯವಿಟ್ಟು ಸರಿಯಾಗಿ ಮಾತನಾಡಿ, ನಿಮಗೂ ಗೌರವ ಘನತೆಯಿದೆ ಎಂಬುದನ್ನು ಅರಿತುಕೊಳ್ಳಿ ಎಂದು ತಿಳಿ ಹೇಳಿದ್ದಾರೆ.

ಟ್ರೋಲಿಗರ ಕೆಲವು ಪ್ರಶ್ನೆಗಳು ನಿಜಕ್ಕೂ ಅಸಹ್ಯಕರವಾಗಿವೆ. ಹಾಗೆ ನೋಡಿದರೆ ಸ್ಟಾರ್ ನಟಿಯರಿಗೆ ಕೇಳುವ ಪ್ರಶ್ನೆಗಳು ನಟರಿಗಿಂತ ಕೇಳುವುದಕ್ಕಿಂತ ವಿಚಿತ್ರವಾಗಿರುತ್ತವೆ.

ಸ್ಯಾಂಡಲ್ ವುಡ್ ನಟಿಯ ಹಾಟ್ ಹಾಟ್ ಫೋಟೋ ವೈರಲ್

#balkaninews #nivethathomas #troll

Tags