ಸುದ್ದಿಗಳು

ಕಾಲಿವುಡ್ ನಿರ್ದೇಶಕನ ಜೊತೆ ಟಾಲಿವುಡ್ ಹೀರೋ!

ಒಂದುಕಡೆ ನಿರ್ದೇಶಕ ತ್ರಿವಿಕ್ರಮ್ ಜೊತೆ ಸಿನಿಮಾ! ಇದು ಪೂರ್ತಿಯಾದ ನಂತರ ಮತ್ತೊಂದು ಪ್ರಾಜೆಕ್ಟ್ ಸಿದ್ದತೆಯಲ್ಲಿರುವ ಟಾಲಿವುಡ್ ಸೂಪರ್ ಸ್ಟಾರ್ ಎನ್ಟಿಆರ್ ಪ್ರಸ್ತುತ ರಾಜಮೌಳಿ ನಿರ್ದೇಶನದ RRR ಶೀರ್ಷಿಕೆಯ ಅಡಿಯಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ್ ಅವರ ಜೊತೆ ಸಿನಿಮಾ ಮಾಡಲು, ಕಥೆಗೆ ತಕ್ಕಂತೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲೇ ಈ ನಟನಿಗೆ ಕಾಲಿವುಡ್ ನಿರ್ದೇಶಕನಿಂದ ಬಿಗ್ ಆಫರ್ ಬಂದಿದೆ ಎಂದು ಟಾಲಿವುಡ್ ಗಲ್ಲಿಯಲ್ಲಿ ಬಾರೀ ಸುದ್ದಿಯಾಗಿದೆ.

ಅಸಲಿಗೆ ಏನಪಾ ವಿಚಾರ ಎಂದರೆ ಕಾಲಿವುಡ್ ಸಿನಿಮಾರಂಗದಲ್ಲಿ ರಾಜಾ ರಾಣಿ, ತೇರಿ,ಮೆರ್ಸೆಲ್ ಸಿನಿಮಾಗಳ ಮೂಲಕ ಸಂಚಲನ ಸೃಷ್ಟಿಸಿ ದಕ್ಷಿಣ ಭಾರತದಲ್ಲಿ ಸ್ಟಾರ್ ನಿರ್ದೇಶಕನಾಗಿ ಹೊರಹುಮ್ಮಿರುವ ಅಟ್ ಲೀ ಈಗ ತೆಲುಗಿನಲ್ಲಿ ನಿರ್ದೇಶನ ಮಾಡಲು ಉತ್ತಮ ಕಥೆಯನ್ನು ರಚಿಸುವುದರೊಂದಿಗೆ ಟಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ.

ಇವರ ಕಥೆಗೆ ಹಾಗು ಇವರ ನಿರ್ದೇಶನದ ಶೈಲಿಗೆ ನಟ ಎನ್ಟಿಆರ್ ಒಪ್ಪಿಗೆ ಸೂಚಿಸುವುದರ ಮೂಲಕ ತಮ್ಮ ಮುಂದಿರುವ ಪ್ರೆಸೆಂಟ್ ಪ್ರಾಜೆಕ್ಟ್ ಗಳನ್ನು ಪೂರ್ತಿಗೊಳಿಸಿ ನಂತರ ಅಟ್ ಲೀ ಅವರ ನಿರ್ದೇಶನದ ಅಡಿಯಲ್ಲಿ ನಟಿಸಲು ತಯಾರಾಗಿದ್ದಾರೆಂದು ಸಿನಿ ಮೂಲಗಳು ತಿಳಿಸಿವೆ.

ಈ ಹೊಸ ಪ್ರಾಜೆಕ್ಟ್ ದೊಡ್ಡ ಬಡ್ಜೆಟ್ ನೊಂದಿಗೆ 2019ರಲ್ಲಿ ತೆರೆಗೆ ಬರಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *