ಸುದ್ದಿಗಳು

ಎನ್ ಟಿಆರ್ ಚಿತ್ರದಲ್ಲಿನ ಈ ದೃಶ್ಯದ ಬಗ್ಗೆ ಬೇಸರಗೊಂಡ ಮಹಾನಟಿ ಸಾವಿತ್ರಿ ಕುಟುಂಬ ಸದಸ್ಯರು

ಹೈದ್ರಾಬಾದ್, ಜ.17:

ಮಹಾನಟಿ ಸಾವಿತ್ರಿ ಬಯೋಪಿಕ್ ಬಿಡುಗಡೆಯಾದ ಬಳಿಕ ನಟಿಯ ಕುಟುಂಬದ ಗೌರವ ಹೆಚ್ಚಾಗಿದೆ. ಮಹಾನಟಿಯ ಬದುಕಿನ ಚಿತ್ರಣ ತೆರೆಮೇಲೆ ಅದ್ಬುತವಾಗಿ ಮೂಡಿಬಂದಿದೆ ಕೂಡ. ಅಂದಹಾಗೆ ಚಿತ್ರಕತೆ ಬರೆಯುವಾಗ ನಿರ್ದೇಶಕರು ನಟಿ ಸಾವಿತ್ರಿ ಅವರ ಕುಟುಂಬ ಸದಸ್ಯರು, ಹಾಗೂ ನಟಿಯ ಮಕ್ಕಳೊಂದಿಗೆ ಹಲವು ವಿಚಾರಗಳನ್ನು ಚರ್ಚಿಸಿ, ವಿಚಾರಗಳನ್ನು ಪಡೆದು ಚಿತ್ರಕತೆ ಬರೆದಿದ್ದಾರೆ.

ನಟಿ  ಸಾವಿತ್ರಿ ಬಗ್ಗೆ ನೆಗೆಟೀವ್ ಆಗಿ ಚಿತ್ರೀಸಿದ್ದು ಯಾಕೆ ?

ಈ ನಡುವೆ ಸದ್ಯಕ್ಕೆ ಬಂದ ಸುದ್ದಿಯೊಂದರ ಪ್ರಕಾರ, ಎನ್ ಟಿಆರ್ ಕಥಾನಾಯಕುಡು ಚಿತ್ರದ ಈ ಒಂದು ದೃಶ್ಯ ಇದೀಗ ಸಾವಿತ್ರಿ ಅವರ ಕುಟುಂಬ ಸದಸ್ಯರ ಬೇಸರಕ್ಕೆ ಕಾರಣವಾಗಿದೆಯಂತೆ. ಹಣದ ವಿಚಾರವಾಗಿ ಅಕ್ಕಿನೇನಿ ನಾಗೇಶ್ವರ್ ರಾವ್ ಮತ್ತು ಎನ್ ಟಿ ರಾಮ ರಾವ್ ಅವರ ಸಾವಿತ್ರಿ ಮೇಲೆ ರೇಗಾಡುತ್ತಾರೆ. ದೃಶ್ಯದಲ್ಲಿ ಸಾವಿತ್ರಿ ಅವರ ಹಣವ್ಯಯ ಮಾಡುವ ಸ್ವಾಭಾವಕ್ಕೆ ಅಕ್ಕಿನೇನಿ ನಾಗೇಶ್ವರ್ ರಾವ್ ಅವರು ಬೇಸರಗೊಂಡು ಆಕೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಚಿತ್ರದಲ್ಲಿ ನಿತ್ಯಾ ಮೆನನ್ ಅವರು ಸಾವಿತ್ರಿ ಪಾತ್ರವನ್ನು ನಿರ್ವಹಿಸಿದ್ದಾರೆ.ಆದರೆ ಈ ಒಂದು ದೃಶ್ಯ ಇದೀಗ ಕುಟುಂಬ ಸದಸ್ಯರ ಬೇಸರಕ್ಕೆ ಕಾರಣವಾಗಿದೆಯಂತೆ. ‘ಮಹಾನಟಿ’ ಚಿತ್ರ ಸೂಪರ್ ಹಿಟ್ ಆಗಿದ್ದರಿಂದ ಆಕೆಯ ಬಗ್ಗೆ ಯಾವುದೇ ನೆಗೆಟಿವ್  ದೃಶ್ಯಗಳನ್ನು ಬಳಸದಂತೆ ಸಾವಿತ್ರಿ ಕುಟುಂಬ ಸದಸ್ಯರು ನನಗೆ ತಿಳಿಸಿದ್ದರು ಎಂದು ನಿರ್ದೇಶಕ ಕ್ರಿಶ್ ಕೂಡ ತಿಳಿಸಿದ್ದಾರೆ. ಈ ನಡುವೆ ಎಎನ್ ಆರ್ ಹಾಗೂ ಎನ್ ಟಿಆರ್ ಅವರ ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದರಿಂದ ಹೃದಯದ ಶಸ್ತ್ರಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದರು. ಅದನ್ನು ಚಿತ್ರದಲ್ಲಿ ತೋರಿಸದೆ, ಕೇವಲ  ಸಾವಿತ್ರಿಯನ್ನು ಮಾತ್ರ ಯಾಕೆ ತಪ್ಪಾಗಿ ಚಿತ್ರಿಸಲಾಗಿದೆ ಎಂದು ಸಾವಿತ್ರಿ ಅವರ ಕುಟುಂಬದ ಕೆಲವರು ಇದೀಗ ನಿರ್ದೇಶಕರನ್ನು ಪ್ರಶ್ನಿಸಿದ್ದಾರೆ.

#ntrbiopic #biopic #nityamenoninntrbiopic #ntrbiopicandsavithri #savithri #savithribiopic #balkaninews

Tags