ಸುದ್ದಿಗಳು

ಮತ್ತೊಬ್ಬರು ಜೂನಿಯರ್ ಎನ್ ಟಿ ಆರ್..?

ಹೈದರಾಬಾದ್,ಮೇ.15: ಜೂನಿಯರ್ ಎನ್‌ಟಿಆರ್ ಅವರನ್ನು ಹೋಲುವ ಮತ್ತೊಬ್ಬ ವ್ಯಕ್ತಿ ಪತ್ತೆಯಾಗಿದ್ದಾರೆ.

ತೆಲುಗು ನಟ ಜೂ. ಎನ್‌ಟಿಆರ್ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮದೇ ಆದ ನಟನಾ ಶೈಲಿಯಿಂದ ಯಾವುದೇ ಪಾತ್ರ ನೀಡಿದರೂ ಹೈಕ್ಲಾಸ್ ಆಗಿ ಮಾಡುವಂತ ಪ್ರತಿಭೆ. ಸದ್ಯ ಈ ನಟನನ್ನೇ ಹೋಲುವ ಮತ್ತೊಬ್ಬ ವ್ಯಕ್ತಿ ಪತ್ತೆಯಾಗಿದ್ದು, ಅಭಿಮಾನಿಗಳ ಕಣ್ಣೆ ನಂಬಲ ಆಸಾಧ್ಯವಾಗುವಂತಿದೆ.

ಜೂ. ಎನ್ಟಿಆರ್ ಹೋಲುವ ವ್ಯಕ್ತಿ ಪತ್ತೆ

ಒಬ್ಬರಂತೆ ೭ ಮಂದಿ ಭೂಮಿ ಮೇಲೆ ಇರ್ತಾರೆ ಅನ್ನೋದು ಹಲವಾರು ಮಂದಿಯ ನಂಬಿಕೆ ವಾದ. ಇದು ಸೆಲಿಬ್ರಿಟಿಗಳನ್ನು ಬಿಟ್ಟಿಲ್ಲ. ಈ ಹಿಂದೆ ಅನುಷ್ಕಾ ತರನೇ ಹೋಲುವ ಮಹಿಳೆಯೊಬ್ಬರು ಕಾಣಿಸಿದ್ದರು. ಇದೀಗ ಜ್ಯೂ ಎನ್‌ಟಿಆರ್ ಅವರ ಸರದಿ. ಅವರನ್ನೇ ಹೋಲುವ ವ್ಯಕ್ತಿಯೊಬ್ಬರ ವಿಡಿಯೋಗಳು ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Jr NTR's Look-Alike Will Surprise You

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

ಎಸ್ ಜೂ. ಎನ್‌ಟಿಆರ್ ಹೋಲುವ ವ್ಯಕ್ತಿ ಹೆಸರು ಶಮಿಂದರ್ ಸಿಂಗ್ ಅಂತಾ. ಪಂಜಾಬ್ ಮೂಲತ ಈತ ಜೂ.ಎನ್‌ಟಿಆರ್ ಅವರ ಅಭಿಮಾನಿಯಂತೆ. ತೆಲುಗು ಬರದೇ ಇದ್ದರೂ ಥೇಟ್ ಈ ನಟನಂತೆಯೇ ಕಾಣಿಸುತ್ತಾರೆ ಶಮಿಂದರ್. ಸದ್ಯ ಈ ವ್ಯಕ್ತಿಗೆ ಜೂ. ಎನ್‌ಟಿಆರ್ ನೋಡೂವ ಹೆಬ್ಬಯಕೆ ಇದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ಮಂದಿ ಇವರನ್ನೇ ನಟ ಎಂದುಕೊಂಡು ಮೆಸೇಜ್ ಮಾಡುತ್ತಿದ್ದಾರಂತೆ. ಇನ್ನು ಇವರ ಫೋಟೋಗಳು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

‘ಸಲಗ’ ಮೂಲಕ ನಿರ್ದೇಶಕರಾಗುತ್ತಿರುವ ದುನಿಯಾ ವಿಜಯ್ ರಿಗೆ ಕಿಚ್ಚ ಸುದೀಪ್ ಸಲಹೆ

#jnrntr #tollywood #shamindersingh #bollywood

Tags